ETV Bharat / state

ಕನ್ನಡ ಧ್ವಜಸ್ತಂಭ ತೆರವು ಮಾಡಿ, ಇಲ್ಲವೇ ಭಗವಾ ಧ್ವಜ ಹಾರಿಸಲು ಅನುಮತಿ ನೀಡಿ: ಎಂಇಎಸ್ ಉದ್ಧಟತನ - Belagavi latest news

ಬೆಳಗಾವಿ ಪಾಲಿಕೆ ಎದುರು ಕನ್ನಡಪರ ಹೋರಾಟಗಾರರು ಸ್ಥಾಪಿಸಿರುವ ನಾಡಧ್ವಜವನ್ನು ತೆರವುಗೊಳಿಸುವಂತೆ ಎಂಇಎಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

MES activites appeal to clearance the Karnataka flag
ಎಂಇಎಸ್ ಕಾರ್ಯಕರ್ತರು
author img

By

Published : Jan 2, 2021, 3:21 PM IST

ಬೆಳಗಾವಿ: ಮಹಾನಗರ ಪಾಲಿಕೆ ಮುಂದೆ ಕನ್ನಡಪರ ಹೋರಾಟಗಾರ ಶ್ರೀನಿವಾಸ ತಾಳೂರಕರ್ ನೇತೃತ್ವದಲ್ಲಿ ಸ್ಥಾಪಿಸಲಾಗಿದ್ದ ಕನ್ನಡ ಧ್ವಜಸ್ತಂಭವನ್ನು ತೆರವು ಮಾಡಿ. ಇಲ್ಲವಾದರೆ ಭಗವಾ ಧ್ವಜ ಹಾರಿಸಲು ಅನುಮತಿ ನೀಡಬೇಕೆಂದು ಆಗ್ರಹಿಸಿ ಎಂಇಎಸ್ ಮುಖಂಡರು ಮತ್ತೆ ಉದ್ಧಟತನ ಪ್ರದರ್ಶನ ಮಾಡಿದ್ದಾರೆ.

ಹೌದು, ನಗರದ ಡಿಸಿ ಕಚೇರಿಗೆ ಆಗಮಿಸಿದ ಎಂಇಎಸ್​ನ ಹಲವು ಮುಖಂಡರು, ಪಾಲಿಕೆ ಎದುರಿಗೆ ಸ್ಥಾಪಿಸಲಾಗಿರುವ ಕನ್ನಡ ಧ್ವಜಸ್ತಂಭ ತೆರವು ಮಾಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪಾಲಿಕೆ ಮುಂದಿರುವ ಕನ್ನಡ ಧ್ವಜಸ್ತಂಭ ತೆರವು ಮಾಡಿಸಬೇಕು. ಇಲ್ಲವಾದರೆ ಭಗವಾ ಧ್ವಜ ಅಳವಡಿಸಲು ಅನುಮತಿ ನೀಡಬೇಕೆಂದರು. ಒಂದು ವೇಳೆ ಅನುಮತಿ ನೀಡದಿದ್ದರೆ ಪಾಲಿಕೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಗವಾ ಧ್ವಜವನ್ನು ಹಾರಿಸುತ್ತೇವೆ ಎಂದಿದ್ದಾರೆ. ಇತ್ತ ಎಂಇಎಸ್ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ, ಎಂಜಿ ಸಭೆ ನಡೆಸಿ ಚರ್ಚೆ ಮಾಡುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ : ಬೆಳಗಾವಿಯಲ್ಲಿ ಕನ್ನಡ ಧ್ವಜ ಸ್ಥಾಪಿಸಿದ ನಂತರದ ಘಟನೆಗಳನ್ನು ಕೂಡಲೇ ಪರಿಶೀಲಿಸಿ: ಹೆಚ್​ಡಿಕೆ ಒತ್ತಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.