ಬೆಳಗಾವಿ: ಜಿಲ್ಲೆಯ ಅಥಣಿ ಪಟ್ಟಣದ ಹೆಸ್ಕಾಂ ಕಚೇರಿಯ ಆವರಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಂಸ್ಥೆಯ ವಿಭಾಗಿಯ ಸಮಿತಿ ಕಚೇರಿಯನ್ನು ಎಸ್ಸಿ/ಎಸ್ಟಿ ನೌಕರ ಸಂಘದ ರಾಜ್ಯಾಧ್ಯಕ್ಷ ದಾಸ ಪ್ರಕಾಶ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಅರೆಕಾಲಿಕ ಸ್ವಿಪರ್ ನೌಕರರನ್ನು ಖಾಯಂ ಶುಚಿಗಾರರ ಹುದ್ದೆಗೆ ನೇಮಕ ಮಾಡುವ ಎಲ್ಲ ಪ್ರಯತ್ನ ನಮ್ಮ ಕಲ್ಯಾಣ ಸಂಸ್ಥೆಯಿಂದ ನಡೆಯುತ್ತಿದೆ ಎಂದು ಭರವಸೆ ನೀಡಿದ್ರು.
ಇನ್ನು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೌಕರರ ಸಂಘದ ಕಾರ್ಯಾಧ್ಯಕ್ಷ ಪಿ ಜಿ ಅಮೀನಭಾವಿ ವಹಿಸಿದ್ದರು. ಅಥಣಿ ಹೆಸ್ಕಾಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶೇಖರ ಬಹೂರುಪಿ, ಸಂಸಂಘಟನಾ ಕಾರ್ಯದರ್ಶಿ ಸದಾಶಿವ ಕಾಂಬಳೆ, ಅಥಣಿ ವಿಭಾಗಿಯ ಸಮಿತಿ ಅಧ್ಯಕ್ಷ ಡಿ.ಕೆ. ಕಾಂಬಳೆ ಉಪಸ್ಥಿತರಿದ್ದರು.