ETV Bharat / state

ಕ್ರಿಕೆಟ್ ಪಂದ್ಯಾವಳಿ: ಟ್ರೋಫಿ ಗೆದ್ದ ಇನ್ ಕೇಬಲ್ ತಂಡ, ನಗರ ಪೊಲೀಸ್ ತಂಡಕ್ಕೆ ರನ್ನರ್ ಅಪ್ ಪ್ರಶಸ್ತಿ

ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ರಾಜಶೇಖರ್ ಪಾಟೀಲ ನೇತೃತ್ವದ ಇನ್ ಕೇಬಲ್ ತಂಡಕ್ಕೆ ಹಾಗೂ ರನ್ನರ್ ಅಪ್ ಪ್ರಶಸ್ತಿ ಪಡೆದ ಮಹಾನಗರ ಪೊಲೀಸ್ ಆಯುಕ್ತ ಡಾ.ಕೆ. ತ್ಯಾಗರಾಜನ್ ನೇತೃತ್ವದ ನಗರ ಪೊಲೀಸ್ ತಂಡಕ್ಕೆ ಎಸ್‍ಪಿ ಲಕ್ಷ್ಮಣ ನಿಂಬರಗಿ, ಐಜಿಪಿ ರಾಘವೇಂದ್ರ ಸುಹಾಸ್ ಇಆರ್ ಎಸ್​ಎಸ್-112 ಟ್ರೋಫಿ ನೀಡಿ ಗೌರವಿಸಿದರು.

In Cable Team won in cricket match at belgavi
ಇಆರ್ ಎಸ್‍ಎಸ್- 112 ಕ್ರಿಕೆಟ್ ಪಂದ್ಯಾವಳಿ: ಟ್ರೋಫಿ ಗೆದ್ದ ಇನ್ ಕೇಬಲ್ ತಂಡ, ನಗರ ಪೊಲೀಸ್ ತಂಡಕ್ಕೆ ರನ್ನರ್ ಅಪ್ ಪ್ರಶಸ್ತಿ
author img

By

Published : Feb 12, 2021, 4:18 PM IST

ಬೆಳಗಾವಿ: ನಗರದ ಎಸ್ಪಿ ಕಚೇರಿ ಎದುರಿರುವ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಆಯೋಜಿಸಿದ್ದ 'ಇಆರ್ ಎಸ್‍ಎಸ್' 112 ಕ್ರಿಕೆಟ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಬೆಳಗಾವಿ ಇನ್ ಕೇಬಲ್ ತಂಡ ಭರ್ಜರಿ ಜಯ ಗಳಿಸಿತು. ರನ್ನರ ಅಪ್ ಆಗಿ ಮಹಾನಗರ ಪೊಲೀಸ್ ತಂಡ ಹೊರಹೊಮ್ಮಿತು.

ಇಆರ್ ಎಸ್‍ಎಸ್- 112 ಕ್ರಿಕೆಟ್ ಪಂದ್ಯಾವಳಿ

ನಗರ ಪೊಲೀಸ್ ಮೈದಾನಲ್ಲಿ ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ತಮ್ಮ ದೈನಂದಿನ ಕೆಲಸದ ಒತ್ತಡಗಳನ್ನು ಬದಿಗಿಟ್ಟು ಪೊಲೀಸರು, ವೈದ್ಯರು, ಪತ್ರಕರ್ತರು, ವಕೀಲರು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗಿಯಾಗಿ ಸಖತ್ ಎಂಜಾಯ್ ಮಾಡಿದರು. ಇನ್ನು ಪ್ರಥಮ ಸ್ಥಾನ ಪಡೆದ ರಾಜಶೇಖರ್ ಪಾಟೀಲ್​​ ನೇತೃತ್ವದ ಇನ್ ಕೇಬಲ್ ತಂಡಕ್ಕೆ ಹಾಗೂ ರನ್ನರ್ ಅಪ್ ಪ್ರಶಸ್ತಿ ಪಡೆದ ಮಹಾನಗರ ಪೊಲೀಸ್ ಆಯುಕ್ತ ಡಾ.ಕೆ. ತ್ಯಾಗರಾಜನ್ ನೇತೃತ್ವದ ನಗರ ಪೊಲೀಸ್ ತಂಡಕ್ಕೆ ಎಸ್‍ಪಿ ಲಕ್ಷ್ಮಣ ನಿಂಬರಗಿ, ಐಜಿಪಿ ರಾಘವೇಂದ್ರ ಸುಹಾಸ್ ಇಆರ್ ಎಸ್​ಎಸ್-112 ಟ್ರೋಫಿ ನೀಡಿ ಗೌರವಿಸಿದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್​​ ಮಾಡಿದ ನಗರ ಪೊಲೀಸ್ ತಂಡ 10 ಓವರ್​ಗಳಲ್ಲಿ 95 ರನ್ ಗಳಿಸಿತ್ತು. 10 ಓವರ್ ಗಳಲ್ಲಿ 100 ರನ್ ಗಳನ್ನು ಬೆನ್ನಟ್ಟಿದ ಇನ್ ನ್ಯೂಸ್ / ಇನ್​ ಕೇಬಲ್​​ ತಂಡ ಪ್ರಾರಂಭದಲ್ಲಿ ರನ್ ಗಳಿಸಲು ಹರಸಾಹಸಪಟ್ಟಿತು‌. 5 ಓವರ್​ಗಳಲ್ಲಿ ಪ್ರಮುಖ 4 ವಿಕೆಟ್‌ ಕಳೆದುಕೊಂಡು ಸೋಲುವ ಭೀತಿಯಲ್ಲಿತ್ತು. ಆದ್ರೆ, ನಂತರ ಬಂದ ಆಲ್​​ರೌಂಡರ್​ ಆಟಗಾರ ಅಭಿಷೇಕ ನಗರ ಪೊಲೀಸ್​ ತಂಡದ ಬೌಲರ್​ಗಳ ಬೆವರಿಳಿಸಿದರು. ಕೊನೆಯ ಓವರ್​ನಲ್ಲಿ ಇನ್ ಕೇಬಲ್ ತಂಡಕ್ಕೆ ಗೆಲ್ಲಲು 8 ರನ್‌ಗಳು ಬೇಕಾಗಿದ್ದವು. ಈ ವೇಳೆ, ಅಭಿಷೇಕ ಮೊದಲೆರಡು ಬಾಲ್​ಗಳಲ್ಲಿ ಸಿಕ್ಸರ್​ ಸಿಡಿಸುವ ಮೂಲಕ ಜಯದ ಮಾಲೆಯನ್ನು ಕೊರಳಿಗೆ ಹಾಕಿಕೊಂಡರು. ಬೆಸ್ಟ್ ಬ್ಯಾಟ್ಸ್​​ಮನ್ ಜಗದೀಶ ಲಮಾಣಿ, ಬೆಸ್ಟ್ ಬೌಲರ್ ಹನುಮಂತ ಬೆಂಚಣ್ಣವರ ಅವರಿಗೆ ಪ್ರಮಾಣ ಪತ್ರ, ಪ್ರಶಸ್ತಿ ವಿತರಿಸಲಾಯಿತು.

ಈ ಸುದ್ದಿಯನ್ನೂ ಓದಿ: 'ರೈತ ಚಳುವಳಿಯಲ್ಲಿ ರೈತರು ಯಾರು, ಡೋಂಗಿಗಳ್ಯಾರು, ಪಕ್ಷದ ಮುಖಂಡರು ಯಾರೆಂಬುದೇ ತಿಳಿಯುತ್ತಿಲ್ಲ'

ಪ್ರಶಸ್ತಿ ವಿತರಿಸಿ ಮಾತನಾಡಿದ ಎಸ್ಪಿ ಲಕ್ಷ್ಮಣ ನಿಂಬರಗಿ, ತುರ್ತು ಸೇವೆ ಕರೆ 112 ಬಗ್ಗೆ ತಿಳಿವಳಿಕೆ ಮೂಡಿಸುವ ಉದ್ದೇಶದಿಂದ ಪೊಲೀಸ್ ಇಲಾಖೆಯಿಂದ ಆಯೋಜಿಸಿದ ಪಂದ್ಯಾವಳಿಯಲ್ಲಿ 8 ತಂಡಗಳು ಪಾಲ್ಗೊಂಡಿದ್ದವು. ಇದರಲ್ಲಿ ವೈದ್ಯರು, ವಕೀಲರು, ಪತ್ರಕರ್ತರು, ಪೊಲೀಸರು ಸೇರಿ ಕೊರೊನಾ ಫ್ರಂಟ್ ಲೈನ್ ವಾರಿಯರ್ಸ್‍ಗಳು ಪಾಲ್ಗೊಂಡಿದ್ದರು. ಟ್ರೋಫಿ ಗೆದ್ದ ಇನ್ ಕೇಬಲ್​​​ ತಂಡ ಹಾಗೂ ರನ್ನರ್ ಅಪ್ ಪ್ರಶಸ್ತಿಗೆ ಭಾಜನರಾದ ನಗರ ಪೊಲೀಸ್ ತಂಡಕ್ಕೆ ಅಭಿನಂದನೆ ತಿಳಿಸಿದರು.

ಐಜಿಪಿ ರಾಘವೇಂದ್ರ ಸುಹಾಸ್ ಮಾತನಾಡಿ, ಕ್ರಿಕೆಟ್ ಪಂದ್ಯಾವಳಿ ಅತ್ಯುತ್ತಮವಾಗಿ ನಡೆದಿದೆ ಎಂದು ಶ್ಲಾಘಿಸಿದರು. ಡಿಸಿಪಿ ಡಾ. ವಿಕ್ರಮ್ ಆಮ್ಟೆ, ಎಎಸ್‍ಪಿ ಅಮರನಾಥ್ ರೆಡ್ಡಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.