ಬೆಳಗಾವಿ : ಎರಡಕ್ಕಿಂತ ಹೆಚ್ಚು ಬಂದೂಕು ಹೊಂದಿದ್ದರೆ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ಜಮೆ ಮಾಡುವಂತೆ ಬೆಳಗಾವಿಯ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಕೋರಿದ್ದಾರೆ.
ಲೈಸೆನ್ಸ್ ಪಡೆದಿರುವ ಬಂದೂಕು ಪರವಾನಿಗೆಯಲ್ಲಿ ಶಸ್ತ್ರಾಸ್ತ್ರ (ತಿದ್ದುಪಡಿ) ಕಾಯ್ದೆ 2019ರ ಕಲಂ 3ರನ್ವಯ ಇತ್ತೀಚೆಗೆ ತಿದ್ದುಪಡಿ ಮಾಡಲಾಗಿದೆ. ಈ ನಿಬಂಧನೆಯಡಿಯಲಿ ಎರಡು ಆಯುಧಗಳನ್ನು ಮಾತ್ರ ಹೊಂದಲು ಅವಕಾಶ ಕಲ್ಪಿಸಲಾಗಿದೆ.
ಆದ್ದರಿಂದ ಮೂರನೇ ಬಂದೂಕಿಗೆ ಪರವಾನಿಗೆಗೆ ತಿದ್ದುಪಡಿ ತರಲಾಗಿದೆ. ಹಾಗಾಗಿ, ಈ ರೀತಿಯ ಪರವಾನಿಗೆ ಹೊಂದಿದ್ದಲ್ಲಿ ಅಂತವರಿಗೆ ಸೂಕ್ತ ತಿಳುವಳಿಕೆ ನೀಡುವಂತೆ, ಹಾಗೇ ಆ ಆಯುಧವನ್ನು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಜಮೆ ಮಾಡುವ ಕುರಿತು ಸೂಕ್ತ ಕ್ರಮ ಜರುಗಿಸುವಂತೆ ನಿರ್ದೇಶನ ನೀಡಲಾಗಿದೆ.
ಇದನ್ನೂ ಓದಿ : ಕಾಡುಪ್ರಾಣಿಗಳನ್ನು ಓಡಿಸಲು ತಯಾರಾಗಿದೆ ಅಪಾಯವಿಲ್ಲದ ಹೊಸ ಉಪಾಯ!
ಮೂರು ಆಯುಧಗಳನ್ನು ಹೊಂದಿದ್ದಲ್ಲಿ ಶಸ್ತ್ರಾಸ್ತ್ರ ತಿದ್ದುಪಡಿ ಕಾಯ್ದೆಯನ್ವಯ ಹೆಚ್ಚುವರಿ ಆಯುಧವನ್ನು ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಡಿಸೆಂಬರ್ 13ರೊಳಗಾಗಿ ಜಮೆ ಮಾಡುವಂತೆ ಜಿಲ್ಲಾಧಿಕಾರಿ ಎಂ ಜಿ ಹೀರೆಮಠ ಆದೇಶಿಸಿದ್ದಾರೆ.