ಚಿಕ್ಕೋಡಿ: ಪೊಲೀಸರ ಲಾಠಿ ಏಟಿಗೂ ಲಾಕ್ಡೌನ್ ನಿಯಮವನ್ನು ಜನ ಪಾಲಿಸುತ್ತಿಲ್ಲ. ಈ ಮಧ್ಯೆ ಹುಕ್ಕೇರಿ ತಾಲೂಕಿನ ನಿಡಸಸೋಶಿಯ ದುರುದುಂಡೇಶ್ವರ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ರು.
ಮನೆಯಿಂದ ಹೊರ ಬರದಂತೆ ರಸ್ತೆಗಿಳಿದು ಮನವಿ ಮಾಡಿಕೊಂಡ ಅವರು, ಜನ ಜಾಗೃತಿ ಜೊತೆಗೆ ಜನರಿಗೆ ಮಾಸ್ಕ್ ವಿತರಣೆ ಮಾಡಿದರು.
ಸ್ವಾಮೀಜಿ ಕರೆಗೆ ಒಂದೇ ದಿನದಲ್ಲಿ ಎರಡು ಸಾವಿರ ಮಾಸ್ಕ್ಗಳನ್ನು ಭಕ್ತರು ಹೊಲಿದು ಕೊಟ್ಟಿದ್ದಾರೆ. ಮನೆ ಮನೆಗೆ ತೆರಳಿ ಮಾಸ್ಕ್ ವಿತರಣೆ ಮಾಡಿ ಸ್ವಾಮೀಜಿ ಜಾಗೃತಿ ಮೂಡಿಸಿದರು.