ಬೆಳಗಾವಿ: ಮಹಾಮಾರಿ ಕೊರೊನಾದಿಂದ ಮೃತಪಟ್ಟ ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಮುಸ್ಲಿಂ ಯುವಕರು ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ. ಬೆಳಗಾವಿಯ ಸದಾಶಿವ ನಗರದ ಸ್ಮಶಾನದಲ್ಲಿ ಹಿಂದೂ ಧರ್ಮದ ವಿಧಿವಿಧಾನಗಳಂತೆ ಅವರು ಅಂತಿಮ ಕ್ರಿಯೆಗಳನ್ನು ನೆರವೇರಿಸಿದರು.
ನಿನ್ನೆ ತೀವ್ರ ಉಸಿರಾಟ ತೊಂದರೆಯಿಂದ ನಗರದ 70 ವರ್ಷದ ವೃದ್ಧ ವ್ಯಕ್ತಿ ಮೃತಪಟ್ಟಿದ್ದರು. ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಸ್ಥಳೀಯರು ಅಂತ್ಯಕ್ರಿಯೆಗೆ ಬರಲು ಹಿಂದೇಟು ಹಾಕಿದ್ದರು.
ಕೋವಿಡ್ ಸೋಂಕಿತ, ಶಂಕಿತರ ಅಂತ್ಯಕ್ರಿಯೆಗಾಗಿ ಅಂಜುಮನ್ ಎ ಇಸ್ಲಾಂ ತಂಡ ರಚಿಸಿದೆ. ಪಿಪಿಇ ಕಿಟ್ ಧರಿಸಿಯೇ ಯುವಕರು ಮನೆಯಿಂದ ಆ್ಯಂಬುಲೆನ್ಸ್‌ನಲ್ಲಿ ಮೃತದೇಹವನ್ನು ತಂದು ಅಂತಿಮ ಕಾರ್ಯ ಮಾಡಿದ್ದಾರೆ.