ಬೆಳಗಾವಿ : ಕೃಷ್ಣಾ ನದಿ ಪ್ರವಾಹ ಎದುರಾಗಿ 70 ದಿನಗಳು ಕಳೆದರೂ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ನೆರೆ ಸಂತ್ರಸ್ತರಿಗೆ ಆಹಾರ ಸಾಮಗ್ರಿಗಳನ್ನು ನೀಡಿರಲಿಲ್ಲ. ಈ ಕುರಿತು ವರದಿ ಮಾಡಲು ತೆರಳಿದಾಗ, ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ಜಿಲ್ಲಾಡಳಿತ ಎಚ್ಚೆತ್ತುಕೊಂಡು ತುರ್ತು ಆಹಾರ ಸಾಮಗ್ರಿಗಳನ್ನು ಸಂತ್ರಸ್ತರಿಗೆ ವಿತರಿಸಿದರು.
ಅಕ್ಕಿ, ಬೇಳೆ, ಸಕ್ಕರೆ, ಟೀ ಪುಡಿ ಸೇರಿದಂತೆ ವಿವಿಧ ಆಹಾರ ಸಾಮಗ್ರಿಗಳು ಕಿಟ್ನಲ್ಲಿವೆ. ಆದರೆ ಸೀಮೆಎಣ್ಣೆ ನೀಡದಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಶಿರಹಟ್ಟಿ ಗ್ರಾಮ ಲೆಕ್ಕಾಧಿಕಾರಿ, ತಾಲೂಕಾಡಳಿತ ನಮ್ಮ ಗ್ರಾಮಕ್ಕೆ ಸೀಮೆ ಎಣ್ಣೆ ನೀಡಿಲ್ಲ. ಬಂದ ಮೇಲೆ ನೀಡುತ್ತೇವೆ ಎಂದು ತಿಳಿಸಿದರು.