ಬೆಳಗಾವಿ: ನಗರದ ಕರ್ಲೇ-ಬೆಳವಟ್ಟಿ ಮಾರ್ಗಮಧ್ಯದಲ್ಲಿ ಜಿಲ್ಲೆಯಿಂದ ಸಾಗಿಸಲಾಗುತ್ತಿದ್ದ ಗೋಮಾಂಸ ವಾಹನಕ್ಕೆ ಬೆಂಕಿ ಹಚ್ಚಿರುವ ಘಟನೆ ತಡರಾತ್ರಿ ನಡೆದಿದೆ.
ಘಟನೆಯ ವೇಳೆ ವಾಹನದಲ್ಲಿ ಇದ್ದವರು ಓಡಿ ಹೋಗಿದ್ದು, ಬೆಳವಟ್ಟಿ ಮಾರ್ಗದಿಂದ ಗೋವಾಕ್ಕೆ ಈ ವಾಹನ ಹೊರಟಿತ್ತು ಎನ್ನಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿ ನಗರ ಸೇರಿದಂತೆ ತಾಲೂಕಿನ ವಿವಿಧ ಹಳ್ಳಿಗಳ ಮೂಲಕ ಕೆಲವು ದಿನಗಳಿಂದ ಗೋಮಾಂಸ ಹಾಗೂ ಗೋ ಸಾಗಾಟದ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ತಾಲೂಕಿನ ವಿವಿಧೆಡೆ ವಾಹನ ತಡೆದು ಪೊಲೀಸರಿಗೆ ಒಪ್ಪಿಸುವ ಪ್ರಕರಣಗಳು ನಡೆಯುತ್ತಿವೆ.