ETV Bharat / state

ನೀರಿಗಾಗಿ ಹೆದ್ದಾರಿ ತಡೆದ ರೈತರು: ಸರ್ಕಾರದ ವಿರುದ್ಧ ಆಕ್ರೋಶ

ಕುಡಿಯುವ ನೀರು ಪೂರೈಕೆ ಮಾಡುವಂತೆ ಒತ್ತಾಯಿಸಿ ನೂರಾರು ರೈತರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಹೆದ್ದಾರಿ ತಡೆದಿದ್ದರಿಂದ ಪ್ರಯಾಣಿಕರು ಸುಮಾರು ಎರಡು ಗಂಟೆಗಳ ಕಾಲ ಪರದಾಡಬೇಕಾಯಿತು.

ಕುಡಿಯುವ ನೀರು ಪೂರೈಕೆ ಮಾಡುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ
author img

By

Published : May 13, 2019, 1:45 PM IST

Updated : May 13, 2019, 2:24 PM IST

ಚಿಕ್ಕೋಡಿ : ಸಮರ್ಪಕ ಕುಡಿವ ನೀರು ಪೂರೈಕೆ ಮಾಡುವಂತೆ ಒತ್ತಾಯಿಸಿ ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮದ ರೈತರು ಮೀರಜ್​ - ಜಮಖಂಡಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಸುಡು ಬಿಸಿಲಿನಲ್ಲಿ ನಿತ್ಯ ನಾಲ್ಕೈದು ಕಿ.ಮೀ ದೂರ ಹೋಗಿ ನೀರು ತರಬೇಕು. ಈ ರೀತಿ ನೀರು ತರುತ್ತಿರುವ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಗೊತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಈ ಕಡೆ ಗಮನ ಹರಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಹೆದ್ದಾರಿ ತಡೆದಿದ್ದರಿಂದ ಪ್ರಯಾಣಿಕರು ಪರದಾಡಬೇಕಾಯಿತು.

ಸಮರ್ಪಕ ಕುಡಿವ ನೀರು ಪೂರೈಕೆ ಮಾಡುವಂತೆ ಒತ್ತಾಯಿಸಿ ಹೆದ್ದಾರಿ ತಡೆದ ರೈತರು

ಮನವಿ ಸ್ವೀಕರಿಸಿ ಮಾತನಾಡಿದ ಉಪ ತಹಶೀಲ್ದಾರ್​ ಚೌಗಲಾ, ನೀರು‌ ಬಿಡುವ ಬಗ್ಗೆ ಉನ್ನತ ಮಟ್ಟದಲ್ಲಿ ಮಾತುಕತೆ ಮುಗಿದಿದೆ. ಸದ್ಯದಲ್ಲೇ ನೀರು ಬಿಡಲಾಗುವುದು ಎಂದು ಮೇಲಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಿದಾಗ ರೈತರು ಪ್ರತಿಭಟನೆ ಹಿಂದಕ್ಕೆ ಪಡೆದುಕೊಂಡರು.

Intro:ನೀರಿಗಾಗಿ ರಸ್ತೆಗಿಳಿದು ಪ್ರತಿಭಟನೆ ಮಾಡಿದ ರೈತರು
Body:
ಚಿಕ್ಕೋಡಿ :

ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮದ ರೈತರು ಸುಮಾರು ಎರಡು ಗಂಟೆಗಳ ಕಾಲ ಮಿರಜ - ಜಮಖಂಡಿ ರಾಜ್ಯ ಹೆದ್ದಾರಿ ರಸ್ತೆ ತಡೆದು ನೀರು ಬಿಡುವಂತೆ ಹೋರಾಟ ಮಾಡಿದ ರೈತರು.

ಸುಡು ಬಿಸಿಲಿನಲ್ಲಿ ದಿನಂಪ್ರತಿ ನಾಲ್ಕೈದು ಕಿ.ಮೀ ನಷ್ಟು ದೂರ ಹೋಗಿ ನೀರು ತರುವುದರಿಂದ ನಮ್ಮ ಮಕ್ಕಳಿಗೆ ಬಿಸಲಿನ ತಾಪಕ್ಕೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆದರೆ, ರಾಜಕಾರಣಿಗಳು ಮಾತ್ರ ಈ ಕಡೆ ಗಮನ ಹರಿಸುತ್ತಿಲ್ಲ. ನಮ್ಮ ಮಕ್ಕಳಿಗೆ ಯಾಕೆ ಇಂತಹ ಗತಿ ಬಂದಿದೆ. ದಿನಂಪ್ರತಿ ಬಿಸಿಲನ್ನು ಲೆಕ್ಕಿಸದೆ ನೀರಿಗಾಗಿ ಪರದಾಡುತ್ತಿದ್ದಾವೆ ಎಂದು ರೈತರು ದೂರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಿಂದ ಪ್ರಯಾಣಿಕರು ಎರಡು ಗಂಟೆಗಳ ಕಾಲ ಹೆಚ್ಚು ಪರದಾಡಿವ ಪರಸ್ಥಿತಿ ಬಂದೊದಗಿತು ನಂತರ ತಹಶೀಲ್ದಾರ ಅನುಪಸ್ಥಿತಿಯಲ್ಲಿ ಉಪತಹಶೀಲ್ದಾರ ವಿಜಯ ಚೌಗಲಾ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಉಪತಹಶೀಲ್ದಾರ ಚೌಗಲಾ ಅವರು ನೀರು‌ ಬಿಡುವ ಮಾತುಕತೆ ಉನ್ನತ ಮಟ್ಟದಲ್ಲಿ ಮುಗಿದಿದ್ದು ಸದ್ಯದಲ್ಲೇ ನೀರು ಬಿಡಲಾಗುವುದು ಎಂದು ಮೇಲಾಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಿದಾಗ ರೈತರು ಪ್ರತಿಭಟನೆ ಹಿಂದಕ್ಕೆ ಪಡೆದುಕೊಂಡರು.

Conclusion:ಸಂಜಯ ಕೌಲಗಿ‌
ಚಿಕ್ಕೋಡಿ
Last Updated : May 13, 2019, 2:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.