ETV Bharat / state

Electricity bill: ವಿದ್ಯುತ್ ಬಿಲ್ ಎಷ್ಟೇ ಬಂದರೂ ಎಲ್ಲರೂ ಕಡ್ಡಾಯವಾಗಿ ಕಟ್ಟಲೇಬೇಕು- ಹೆಸ್ಕಾಂ ಎಂಡಿ - ಈಟಿವಿ ಭಾರತ್​ ಕನ್ನಡ ನ್ಯೂಸ್

ವಿದ್ಯುತ್ ದರ ಏರಿಕೆ ಕುರಿತು ಉದ್ಯಮಿಗಳ ಜೊತೆಗೆ ಹೆಸ್ಕಾಂ ಎಂ.ಡಿ.ಮಹಮ್ಮದ್ ರೋಷನ್ ಸಭೆ ನಡೆಸಿದರು.

ಹೆಸ್ಕಾಂ ಎಂ.ಡಿ ಮಹ್ಮದ್ ರೋಷನ್
ಹೆಸ್ಕಾಂ ಎಂ.ಡಿ ಮಹ್ಮದ್ ರೋಷನ್
author img

By

Published : Jun 13, 2023, 10:31 PM IST

ವಿದ್ಯುತ್ ದರ ಏರಿಕೆ ಕುರಿತು ಮಾಹಿತಿ

ಬೆಳಗಾವಿ : ಸರ್ಕಾರ ಹಾಗೂ ಹೆಸ್ಕಾಂ ವತಿಯಿಂದ ಲೆಕ್ಕಾಚಾರ ಮಾಡಿದ ಹಾಗೆಯೇ ವಿದ್ಯುತ್ ದರ ನಿಗದಿಪಡಿಸಲಾಗಿದೆ. ವಿದ್ಯುತ್ ದರ ಹೆಚ್ಚಳ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಇದಕ್ಕೆ ಪರಿಹಾರ ಸೂಚಿಸಿದರೆ ಅದನ್ನು ಅನುಷ್ಠಾನ ಮಾಡಲಾಗುವುದು. ಹೀಗಾಗಿ ವಿದ್ಯುತ್ ಬಿಲ್ ಎಷ್ಟೇ ಬಂದರೂ ಎಲ್ಲರೂ ಅದನ್ನು ಕಡ್ಡಾಯವಾಗಿ ತುಂಬಲೇಬೇಕು ಎಂದು ಹೆಸ್ಕಾಂ ಎಂ.ಡಿ. ಮಹಮ್ಮದ್ ರೋಷನ್ ಹೇಳಿದರು.

ಮಂಗಳವಾರ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಉದ್ಯಮಿಗಳ ಜೊತೆಗೆ ಅವರು ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗಾವಿ ವಾಣಿಜ್ಯೋದ್ಯಮ ಸಂಸ್ಥೆ, ಸಣ್ಣ ಕೈಗಾರಿಕೆಗಳ ಸಂಘದ ಎಲ್ಲ ಪ್ರತಿನಿಧಿಗಳ ಮುಖಂಡರ ಜೊತೆ ಸಭೆ ನಡೆಸಿದ್ದೇನೆ. ಈ ತಿಂಗಳ ವಿದ್ಯುತ್ ದರ ಏರಿಕೆ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ. ನಮ್ಮ ಎಲ್ಲ ಅಧಿಕಾರಿಗಳ ತಂಡ ಬಂದು ಎರಡು ಗಂಟೆ ಚರ್ಚೆ ಮಾಡಿದ್ದೇವೆ. ಈ ವೇಳೆ ಮೂರು ಮುಖ್ಯ ವಿಚಾರಗಳು ಪ್ರಸ್ತಾಪವಾಗಿವೆ. ಮೊದಲನೇಯದಾಗಿ ವಿದ್ಯುತ್ ದರ ಏರಿಕೆ ಬಗ್ಗೆ ಚರ್ಚೆ ನಡೆದಿದ್ದು, ಕೆಇಆರ್‌ಸಿಯಿಂದ ಬರುವ ನಿರ್ದೇಶನ, ಯಾವ ರೂಲ್ಸ್ ಪ್ರಕಾರ ಬಿಲ್‌ನಲ್ಲಿ ದರ ಹಾಕಲಾಗಿದೆ ಎಂಬ ಬಗ್ಗೆ ಸ್ಪಷ್ಟೀಕರಣ ನೀಡಿದ್ದೇನೆ ಎಂದರು.

ಎರಡನೇಯದು, ಫ್ಯೂಯಲ್ ಕಾಸ್ಟ್ ಅಡ್ಜಸ್ಟ್‌ಮೆಂಟ್ ಹೇಗೆ ಕ್ಯಾಲ್ಕುಲೇಟ್ ಮಾಡುತ್ತೇವೆ ಎಂದು ಕೇಳಿದರು. ಫ್ಯೂಯಲ್‌ ಕಾಸ್ಟ್ ಅಡ್ಜಸ್ಟ್‌ಮೆಂಟ್ ಈ ತಿಂಗಳು, ಮುಂದಿನ ತಿಂಗಳು ಮಾತ್ರ ಇರುತ್ತದೆ. ಅದಾದ ಬಳಿಕ ದರ ಕಡಿಮೆ ಆಗುತ್ತಾ ಹೋಗುತ್ತದೆ. ಈ ಬಗ್ಗೆ ಕೈಗಾರಿಕೋದ್ಯಮಿಗಳಿಗೆ ಸ್ಪಷ್ಟೀಕರಣ ಕೊಟ್ಟಿದ್ದೇನೆ. ಮೂರನೇಯದು, ಬಿಲ್ ಪಾವತಿ ಬಗ್ಗೆ ಕೈಗಾರಿಕೋದ್ಯಮದ ಮುಖಂಡರು ಚರ್ಚೆ ಮಾಡಿದರು. ಇದಕ್ಕೆ ಸೂಕ್ತ ಪರಿಹಾರ ಹುಡುಕಿದ್ದು ಆ ಪ್ರಕಾರ ಬಿಲ್ ಪಾವತಿಗೆ ಅವಕಾಶ ಕೊಡಲಾಗುವುದು. ಯಾವ ರೀತಿ ಪರಿಹರಿಸಬಹುದು ಎಂದು ಮತ್ತೆ ಸಭೆ ಮಾಡಲಾಗುವುದು ಎಂದು ಮಹಮ್ಮದ್ ರೋಷನ್ ತಿಳಿಸಿದರು.

ಪ್ರತಿ ಗಂಟೆಗೊಮ್ಮೆ ಇಂಧನ ಸಚಿವರು, ಉನ್ನತ ಅಧಿಕಾರಿಗಳು ಈ ಸಮಸ್ಯೆ ಪರಿಹಾರ ಬಗ್ಗೆ ಮೇಲ್ಮಟ್ಟದಲ್ಲಿ ಚರ್ಚೆ ಮಾಡುತ್ತಿದ್ದಾರೆ. ನಾಳೆ, ನಾಡಿದ್ದು ಸುದೀರ್ಘ ಚರ್ಚೆ ಆಗಿ ನಮಗೆ‌ ನಿರ್ದೇಶನ ಬರಬಹುದು. ಫ್ಯೂಯಲ್ ಕಾಸ್ಟ್ ಅಡ್ಜಸ್ಟ್‌ಮೆಂಟ್ ಅಂತಾರಾಷ್ಟ್ರೀಯ ಟ್ರೆಂಡ್ಸ್ ಮೇಲೆ ಆಧಾರಿತವಾಗಿರುತ್ತದೆ. ದರ ಕಡಿಮೆ ಆಗುವ ಸಾಧ್ಯತೆ ಕಂಡು ಬರುತ್ತಿದೆ. ಪೆಟ್ರೋಲ್ ದರ ತರಹ ಒಂದು ತಿಂಗಳು ಹೆಚ್ಚಾಗಬಹುದು. ಒಂದು ತಿಂಗಳು ಕಡಿಮೆ ಆಗಬಹುದು. ಸರ್ಕಾರ, ಹೆಸ್ಕಾಂ ವತಿಯಿಂದ ನಾವು ಮನವಿ ಮಾಡುತ್ತೇವೆ. ಪರಿಹಾರ ಕಂಡುಕೊಳ್ಳಲು ಮೇಲ್ಮಟ್ಟದಲ್ಲಿ ಚರ್ಚೆಗಳು ಆಗುತ್ತಿದೆ. ಅವರು ಕೊಟ್ಟ ಪರಿಹಾರದಂತೆ ಜಾರಿ ಮಾಡಲು ಸಿದ್ಧರಿದ್ದೇವೆ ಎಂದು ಮಹ್ಮದ್ ರೋಷನ್ ಹೇಳಿದರು.

ಕೆಇಆರ್‌ಸಿಯಿಂದ ವಿದ್ಯುತ್ ದರ ಏರಿಕೆ ಆಗಿದೆ. ದೇಶದ ಎಲ್ಲ ರಾಜ್ಯಗಳಲ್ಲಿ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಪ್ರತಿವರ್ಷ ವಿದ್ಯುತ್ ದರ ನಿಗದಿ ಮಾಡುತ್ತಾರೆ. ‌ಇದು ಕೇವಲ ಹೆಸ್ಕಾಂದಲ್ಲಿ ಮಾತ್ರವಲ್ಲ. ಇಡೀ ಕರ್ನಾಟಕದಲ್ಲಿಯೂ ಆಗುತ್ತಿದೆ. ಆದ್ದರಿಂದ ಜನರು ಹೆಸ್ಕಾಂದೊಂದಿಗೆ ಸಹಕರಿಸಬೇಕು. ವಿದ್ಯುತ್ ಬಿಲ್ ಆನ್‌ಲೈನ್ ಪೇಮೆಂಟ್ ಸಾಫ್ಟ್‌ವೇರ್ ಬದಲಾವಣೆ ಮಾಡುತ್ತಿರುವುದರಿಂದ ಆನ್‌ಲೈನ್ ಪೇಮೆಂಟ್ ಆಗುತ್ತಿಲ್ಲ. ಆದರೆ ಹೆಸ್ಕಾಂ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೇಲೆ ಕ್ಲಿಕ್ ಮಾಡಿ ಪೇಮೆಂಟ್​ನ್ನು ನಗರ, ಗ್ರಾಮೀಣ ಪ್ರದೇಶದವರು ಬಿಲ್ ಪಾವತಿ ಮಾಡಬಹುದು‌.

ಹೆಸ್ಕಾಂ ಮೇಲೂ ಸಾಕಷ್ಟು ಒತ್ತಡ ಇದ್ದು, ನಾವು ವಿದ್ಯುತ್ ಖರೀದಿಸಲು ಹಣ ತುಂಬಬೇಕು. ಜೊತೆಗೆ ಎಲ್ಲರಿಗೂ ವೇತನ ನೀಡಬೇಕು. ಆದ್ದರಿಂದ ವಿದ್ಯುತ್ ಬಿಲ್ ಎಷ್ಟೇ ಬಂದರೂ ಎಲ್ಲರೂ ಅದನ್ನು ಕಡ್ಡಾಯವಾಗಿ ತುಂಬಬೇಕು. ಮಹಾರಾಷ್ಟ್ರದಲ್ಲಿ ವಿದ್ಯುತ್ ದರ ಕಡಿಮೆ ಇದೆ ಎಂಬ ಕೈಗಾರಿಕೋದ್ಯಮಿಗಳ ವಾದ ವಿಚಾರಕ್ಕೆ ಪ್ರತಿಕ್ರಿಯಿಸಿ, ಕರ್ನಾಟಕದಲ್ಲಿ ಇರುವ ಫಿಕ್ಸಡ್ ಚಾರ್ಜಸ್, ಎನರ್ಜಿ ಚಾರ್ಜಸ್ ದಕ್ಷಿಣ ಭಾರತದಲ್ಲೇ ಕಡಿಮೆ ಇದೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ : ಉಚಿತ ವಿದ್ಯುತ್ ಗ್ಯಾರಂಟಿ ಬರೆ ಮಧ್ಯೆ ಎಸ್ಕಾಂಗಳಿಗೆ ವಿದ್ಯುತ್ ಖರೀದಿ ಹೊರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.