ETV Bharat / state

ಕಟ್ಟುನಿಟ್ಟಿನ ಕೋವಿಡ್ ನಿಯಮ ಪಾಲನೆ 3ನೇ ಅಲೆ ತಡೆಗೆ ರಾಮಬಾಣ

ಮೊದಲು ಮತ್ತು ಎರಡನೇ ಅಲೆ ಪ್ರಭಾವ ಮಕ್ಕಳ ಮೇಲೆ ಹೆಚ್ಚು ಬೀಳಲಿಲ್ಲ. ಅದಕ್ಕಾಗಿ ಮೂರನೇ ಅಲೆ ಮಕ್ಕಳಿಗೆ ಮಾರಕವಾಗಬಹುದು ಎಂದು ಹೇಳಲಾಗುತ್ತಿದೆ. ನಮ್ಮ ದೈನಂದಿನ ವ್ಯವಹಾರದಲ್ಲಿ ಸರಿಯಾಗಿ ಕೋವಿಡ್​ ನಿಯಮಗಳನ್ನು ಪಾಲಿಸಿದರೆ ಕೊರೊನಾ ಮೂರನೇ ಅಲೆ ಬಾರದಂತೆ ನೋಡಿಕೊಳ್ಳಬಹುದು ಎಂದು ಆರ್​ಸಿಎಚ್​ಓ ಡಾ. ಈಶ್ವರ ಗಡಾದ​ ಅವರು ಸಲಹೆ ನೀಡಿದರು.

corona-3rd-wave-can-be-prevented-by-the-fallowing-covid-guidelines
ಆರ್​ಸಿಎಚ್​ಓ ಈಶ್ವರ್ ಗಡಾದ್​
author img

By

Published : Jun 20, 2021, 6:34 PM IST

ಬೆಳಗಾವಿ: ಸಾರ್ವಜನಿಕರು ಆರೋಗ್ಯ ಸಂಬಂಧಿತ ‌ಮುನ್ನೆಚ್ಚರಿಕಾ ಕ್ರಮಗಳ ಜೊತೆಗೆ ಸರ್ಕಾರದ ಕೋವಿಡ್​​ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸಿದರೆ ಮೂರನೇ ಅಲೆ ಬಾರದಂತೆ ತಡೆಯಬಹುದು ಎಂದು ಆರ್​ಸಿಎಚ್​ಓ ಡಾ. ಈಶ್ವರ ಗಡಾದ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲು ಮತ್ತು ಎರಡನೇ ಅಲೆ ಪ್ರಭಾವ ಮಕ್ಕಳ ಮೇಲೆ ಹೆಚ್ಚು ಬೀಳಲಿಲ್ಲ. ಅದಕ್ಕಾಗಿ ಮೂರನೇ ಅಲೆ ಮಕ್ಕಳಿಗೆ ಮಾರಕವಾಗಬಹುದು ಎಂದು ಹೇಳಲಾಗುತ್ತಿದೆ. ನಮ್ಮ ದೈನಂದಿನ ವ್ಯವಹಾರದಲ್ಲಿ ಸರಿಯಾಗಿ ಕೋವಿಡ್​ ನಿಯಮಗಳನ್ನು ಪಾಲಿಸಿದರೆ ಕೊರೊನಾ ಮೂರನೇ ಅಲೆ ಬಾರದಂತೆ ನೋಡಿಕೊಳ್ಳಬಹುದು ಎಂದು ಅವರು ಸಲಹೆ ನೀಡಿದರು.

ಕಟ್ಟುನಿಟ್ಟಿನ ಕೋವಿಡ್​​ ನಿಯಮ ಪಾಲನೆ 3ನೇ ಅಲೆ ತಡೆಗೆ ರಾಮಬಾಣ

ಪಾಲಕರು ಭಯಭೀತರಾಗಬೇಡಿ: ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಕೂಡಿಕೊಂಡು ಆಟ ಆಡೋದು ಸಹಜ. ಇದರಿಂದ ಕೋವಿಡ್​ ಹರಡುವ ಸಾಧ್ಯತೆ ಹೆಚ್ಚು. ಪೋಷಕರು ಮಕ್ಕಳನ್ನು ಸುರಕ್ಷಿತವಾಗಿ ಮನೆಯಲ್ಲಿಯೇ ಇರುವಂತೆ ನೋಡಿಕೊಂಡರೆ ಉತ್ತಮ. ಮದುವೆ ಹಾಗೂ ಇತರೆ ಕಾರ್ಯಕ್ರಮಗಳಿಗೆ ಹೋಗದಂತಿದ್ದರೆ ಒಳಿತು.

ಕೊರೊನಾ ಅಲೆ‌ ಮುಂದಿನ ಅಕ್ಟೋಬರ್ ವೇಳೆಗೆ ಬರಬಹುದು ಎಂಬ ಲೆಕ್ಕಾಚಾರ ಇದೆ. ಅದಕ್ಕಾಗಿ ಆರೋಗ್ಯ ಇಲಾಖೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮಕ್ಕಳ ತಜ್ಞರಿಗೆ ತರಬೇತಿ ನೀಡಲಾಗುತ್ತಿದೆ. ಬೆಡ್​ಗಳ ವ್ಯವಸ್ಥೆ, ಔಷಧಿ ಹಾಗೂ ಆಕ್ಸಿಜನ್ ಸರಬರಾಜು ನೋಡಿಕೊಳ್ಳುವ ಬಗ್ಗೆ ಈಗಿನಿಂದಲೇ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.