ಚಿಕ್ಕೋಡಿ : ಬಸ್‌ಗೆ ಹಿಂದಿನಿಂದ ಕಾರು ಗುದ್ದಿದ ಪರಿಣಾಮ ಸ್ಥಳದಲ್ಲೇ ಕಾರು ಚಾಲಕ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡ ಘಟನೆ ನಿಪ್ಪಾಣಿ ತಾಲೂಕಿನ ಚಿಕ್ಕೋಡಿ ರಸ್ತೆಯ ಕೋಥಳಿ ಕ್ರಾಸ್ ಬಳಿ ನಡೆದಿದೆ.
ಮಹಾರಾಷ್ಟ್ರ ರಾಜ್ಯದ ಸತಾರಾ ಜಿಲ್ಲೆಯ ವಾಯಿ ಗ್ರಾಮದ ನಿಶಿಕಾಂತ ದಿನಕರ ದಾವಲಕರ್(40) ಮೃತಪಟ್ಟ ಕಾರು ಚಾಲಕ. ಅಪಘಾತದಲ್ಲಿ ಗಾಯಗೊಂಡಿರುವ ವಾಯಿ ಗ್ರಾಮದ ರಾಧಾ ಭೀಮರಾವ್ ಕಾಲೋಕೆ(45), ರೂಪಾಲಿ ನಿಶಿಕಾಂತ ದಾವಲಕರ್(38), ಕೊಲ್ಹಾಪುರದ ರವಿ ಮಹಾದೇವ ದಾವಲಕರ್(34), ರಮೇಶ ಬಾಳು ಸೋನಟಕ್ಕೆ(35) ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾರು ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದು, ಈ ಕುರಿತು ಖಡಕಲಾಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.