ETV Bharat / state

ಗಡಿ ಕಾಯುವ ಸೈನಿಕರಿಗೆ ಪರಿಸರ ಸ್ನೇಹಿ ರಾಖಿ ಕಳುಹಿಸಿದ ಕುಂದಾನಗರಿ ವಿದ್ಯಾರ್ಥಿನಿಯರು - Rakhi festival

ದೇಶ ಕಾಯುವ ಸೈನಿಕರಿಗಾಗಿ ವಿಶೇಷ ರೀತಿಯ ರಾಖಿ ತಯಾರಿಸಿ ಕಳುಹಿಸಲಾಗಿದೆ. ಈ ರಾಖಿಯನ್ನು ಬಳಸಿ ಎಸೆದರೆ ಅದರೊಳಗಿನ ತರಕಾರಿ ಹಾಗೂ ಹೂವಿನ ಬೀಜ ಮೊಳಕೆಯೊಡೆದು ಗಿಡವಾಗಲಿದೆ. ರಕ್ಷಾಬಂಧನದ ಹಿನ್ನೆಲೆಯಲ್ಲಿ ಸೈನಿಕರಿಗೆ ವಿದ್ಯಾರ್ಥಿನಿಯರು ಶುಭ ಕೋರಿದ್ದಾರೆ.

Belagavi students sent environment friendly Rakhi to the soldiers
ದೇಶ ಕಾಯುವ ಸೈನಿಕರಿಗೆ ಪರಿಸರ ಸ್ನೇಹಿ ರಾಖಿ ಕಳುಹಿಸಿದ ಕುಂದಾನಗರಿ ವಿದ್ಯಾರ್ಥಿನಿಯರು
author img

By

Published : Jul 30, 2020, 4:21 PM IST

ಬೆಳಗಾವಿ: ಕುಟುಂಬದಿಂದ ದೂರ ಉಳಿದು ಗಡಿಯಲ್ಲಿ ನಿಂತು ದೇಶದ ರಕ್ಷಣೆಯ ಹೊಣೆ ಹೊತ್ತಿರುವ ಸೈನಿಕರಿಗೆ ರಕ್ಷಾಬಂಧನದ ಪ್ರಯುಕ್ತ ರಾಖಿ ಕಳುಹಿಸಲಾಗಿದೆ. ಸಹೋದರತ್ವ ಸಾರುವ ರಕ್ಷಾಬಂಧನಕ್ಕೆ ಬೆಳಗಾವಿಯ ವಿವಿಧ ಕಾಲೇಜಿನ ವಿದ್ಯಾರ್ಥಿನಿಯರು ಧಾನ್ಯಗಳಿಂದ ಪರಿಸರ ಸ್ನೇಹಿ ರಾಖಿ ಹಾಗೂ ಬಣ್ಣ ಬಣ್ಣದ ಗ್ರೀಟಿಂಗ್ಸ್ ತಯಾರಿಸಿ ಕಳುಹಿಸಿದ್ದಾರೆ.

ಗಡಿ ಕಾಯುವ ಸೈನಿಕರಿಗೆ ಪರಿಸರ ಸ್ನೇಹಿ ರಾಖಿ ಕಳುಹಿಸಿದ ಕುಂದಾನಗರಿ ವಿದ್ಯಾರ್ಥಿನಿಯರು

ಇದೇ ಆಗಸ್ಟ್ 3ರಂದು ರಕ್ಷಾಬಂಧನ ಹಬ್ಬವಿದ್ದು, ಈಗಾಗಲೇ ದೇಶದ ಗಡಿಗೆ ಸ್ಪೀಡ್ ಪೋಸ್ಟ್ ಮೂಲಕ ರಾಖಿ ಹಾಗೂ ಗ್ರೀಟಿಂಗ್ ರವಾನಿಸಿದ್ದಾರೆ. ಹುಬ್ಬಳ್ಳಿಯ ದೇಶಪಾಂಡೆ ಪ್ರತಿಷ್ಠಾನದ ಲೀಡರ್ಸ್ ಸೆಲ್​​ನಲ್ಲಿರುವ ನಗರದ ಹಲವು ಕಾಲೇಜಿನ ವಿದ್ಯಾರ್ಥಿನಿಯರು ರಾಖಿಹಬ್ಬ ಹಾಗೂ ಸ್ವಾತಂತ್ರ್ಯೋತ್ಸವಕ್ಕೆ ವಿಶೇಷ ಶುಭಾಶಯ ಕೋರಲು ಅಣಿಯಾಗಿದ್ದಾರೆ.

ಈ ರಾಖಿಗಳನ್ನು ವಿಶೇಷವಾಗಿ ಹೆಸರುಕಾಳು, ಕಡಲೆ, ಅವರೆಕಾಳು, ಗೋಧಿ, ಸೌತೆಕಾಯಿ ಹಾಗೂ ಗೋವಿನಜೋಳ, ಸೋಯಾಬಿನ್, ಮಡಕೆಕಾಳು, ಅಲಸಂದಿ, ಅಕ್ಕಿ, ಭತ್ತ ಹಾಗೂ ತುಳಸಿ ಬೀಜಗಳಿಂದ ಆಕರ್ಷಕವಾಗಿ ತಯಾರಿಸಿದ್ದಾರೆ. ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ 2 ಸಾವಿರಕ್ಕೂ ಅಧಿಕ ರಾಖಿ ಹಾಗೂ ಗ್ರೀಟಿಂಗ್ ತಯಾರಿಸಿ ಗಡಿಗೆ ರವಾನಿಸಲಾಗಿದೆ.

ಇಷ್ಟು ದಿನ ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಸೈನಿಕರಿಗೆ ಮಾತ್ರ ರಾಖಿ ನೀಡುತ್ತಿದ್ದ ಈ ವಿದ್ಯಾರ್ಥಿನಿಯರು ಈ ಸಲ ಗಡಿಯಲ್ಲಿರುವ ಸೈನಿಕರಿಗೂ ಕಳುಹಿಸಿ ಶುಭ ಕೋರಿದ್ದಾರೆ.

ಹಬ್ಬದ ಜೊತೆ ಪರಿಸರ ಕಾಳಜಿ:

ರಾಖಿ ಹಬ್ಬದ ನಂತರ ಸೈನಿಕರು ರಾಖಿ ಬಿಚ್ಚಿಟ್ಟರೂ ಅದು ಬಿದ್ದ ಜಾಗದಲ್ಲಿ ಕನಿಷ್ಠ ಒಂದು ಸಸಿಯಾದರೂ ಚಿಗುರೊಡೆಯುತ್ತದೆ. ಇದರಿಂದ ಪರಿಸರಕ್ಕೂ ಅನುಕೂಲ ಆಗಲಿದೆ. ಈ ಕಾರಣಕ್ಕೆ ಲೀಡ್ ಸೆಲ್ ವಿದ್ಯಾರ್ಥಿಗಳು ಧಾನ್ಯಗಳಿಂದ ರಾಖಿ ತಯಾರಿಸಿದ್ದಾರೆ. ಕೋವಿಡ್ ಸಂದರ್ಭದಲ್ಲೂ ವಿದ್ಯಾರ್ಥಿನಿಯರು ಒಂದೆಡೆ ಸೇರಿ ಸಾಮಾಜಿಕ ಅಂತರ ಕಾಯ್ದುಕೊಂಡು ರಾಖಿ ಸಿದ್ಧಪಡಿಸಿದ್ದಾರೆ.

ಕೊರೊನಾ ಹಾವಳಿಯಿಂದ ಮಾರುಕಟ್ಟೆಗೆ ಬರಲು ಆಗದವರು ಮನೆಯಲ್ಲೇ ರಾಖಿ ತಯಾರಿಸಲು ಈ ವಿದ್ಯಾರ್ಥಿಗಳ ಕಾರ್ಯ ಸ್ಫೂರ್ತಿಯಾಗಿದೆ. ಮನೆಯಲ್ಲಿಯೇ ಪರಿಸರ ಸ್ನೇಹಿ ಉತ್ಪನ್ನಗಳನ್ನು ತಯಾರಿಸಿ ಹಬ್ಬ ಆಚರಿಸಬಹುದು ಎಂಬುದನ್ನು ಈ ವಿದ್ಯಾರ್ಥಿಗಳು ರುಜುವಾತು ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.