ETV Bharat / state

'ವಚನ ಸಾಹಿತ್ಯ ಪುಸ್ತಕ ಮನೆಗೊಯ್ದು ಕೊಡ್ತೀನಿ ಓದಲಿ': ಡಿಕೆಶಿಗೆ ಪರೋಕ್ಷ ಟಾಂಗ್ ನೀಡಿದ್ರಾ ಮೃತ್ಯುಂಜಯ ಶ್ರೀ..? - ಕೆಪಿಸಿಸಿ ಅಧ್ಯಕ್ಷ ಡಿ‌‌ಕೆಶಿ, ಲಕ್ಷ್ಮೀ ಹೆಬ್ಬಾಳ್ಕರ್

ವಿನಾಕಾರಣ ಪತ್ರಿಕಾ ಹೇಳಿಕೆಗಳನ್ನು ನೀಡಿ ಪಂಚಮಸಾಲಿ ಸಮಾಜಕ್ಕೆ ನ್ಯಾಯ ಸಿಗಬಾರದು ಅಂತಾ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಹಾದಿ- ಬೀದಿಯಲ್ಲಿ ಹೋಗುವವರ ಹೇಳಿಕೆ ಬಗ್ಗೆ ಉತ್ತರ ಕೊಡಲ್ಲ ಎಂದು ಮೃತ್ಯುಂಜಯ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.

Basavajaya Mritunjaya Swamiji talk
ಮೃತ್ಯುಂಜಯ ಸ್ವಾಮೀಜಿ ತಿರುಗೇಟು
author img

By

Published : Dec 19, 2020, 8:16 PM IST

ಬೆಳಗಾವಿ: ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಕ್ಕೆ ಬೆಂಬಲ ನೀಡಿದ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ‌‌ಕೆಶಿ, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿ ಕೆಲವರು ಕ್ಷಮೆಯಾಚನೆ ವಿಚಾರವಾಗಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.

ಮೃತ್ಯುಂಜಯ ಸ್ವಾಮೀಜಿ ತಿರುಗೇಟು

ನಗರದಲ್ಲಿ ಮಾಧ್ಯಗಳೊಂದಿಗೆ ಮಾತನಾಡಿದ ಅವರು, ನಾವೆಲ್ಲಿಯೂ ಪ್ರತ್ಯೇಕ ಧರ್ಮ ಎಂಬ ಶಬ್ದವನ್ನು ಬಳಸುತ್ತಿಲ್ಲ. 12ನೇ ಶತಮಾನದಲ್ಲಿದ್ದ ಧರ್ಮಕ್ಕೆ ಮಾನ್ಯತೆ ಕೊಡಿ ಅಂತಾ ಕೇಳುತ್ತಿದ್ದೇವೆ.‌ ಬಹಳ ಜನರಿಗೆ ಹೊಸ ಧರ್ಮ ಕಟ್ಟುತ್ತಿದ್ದಾರೆಂಬ ತಪ್ಪು ಕಲ್ಪನೆ ಇದೆ. ‌12ನೇ ಶತಮಾನದಲ್ಲಿ ಬಸವಣ್ಣ ಅವರಿಂದ ಪ್ರತ್ಯೇಕ ಧರ್ಮ ಸ್ಥಾಪನೆ ಆಗಿದೆ. ಬಸವಣ್ಣನವರು ಸ್ಥಾಪಿಸಿದ ಧರ್ಮಕ್ಕೆ ಮಾನ್ಯತೆ ಕೇಳುತ್ತಿದ್ದೇವೆ ಎಂದರು.

ಕೆಲವರು ಬೇರೆ ಬೇರೆ ಕಾರಣಕ್ಕೆ ಹೇಳಿಕೆ ಕೊಟ್ಟಿರಬಹುದು, ಅದು ಅವರ ವೈಯಕ್ತಿಕ.‌ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಪ್ರಯತ್ನ ಮಾಡುತ್ತೇನೆ. ಧರ್ಮ ಬಂದಾಗ ಲಿಂಗಾಯತ, ಸಮುದಾಯ ಬಂದಾಗ ಪಂಚಮಸಾಲಿ. ಎರಡಕ್ಕೂ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡ್ತೀನಿ.‌

ಓದಿ: 'ರಕ್ತ ಚೆಲ್ಲುತ್ತೇವೆ, ಮೀಸಲಾತಿ ಪಡೆಯುತ್ತೇವೆ': ಬಸವಜಯ ಮೃತ್ಯುಂಜಯ ಸ್ವಾಮೀಜಿ

ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ದಿಕ್ಕು ತಪ್ಪಿಸಿದ್ದಾರೆಂದು ಕೆಲವರ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಸ್ವಾಮೀಜಿ, 'ಅಂದುಕೊಳ್ಳವರು ನೂರು ಅಂದುಕೊಳ್ಳಲಿ ನನಗೆ ಸ್ಪಷ್ಟತೆ ಇದೆ'. ಲಿಂಗಾಯತ ಧರ್ಮದ ಅಲ್ಪಸಂಖ್ಯಾತ ಹೋರಾಟದಲ್ಲಿ ನಾನೇ ಮುಂಚೂಣಿಯಲ್ಲಿದೀನಿ. ನನ್ನ ಸಮುದಾಯದ 2ಎ ಮೀಸಲಾತಿ ಹೋರಾಟದಲ್ಲೂ ನಾನೇ ಮುಂಚೂಣಿಯಲ್ಲಿದ್ದೇನೆ.

ಪಂಚಮಸಾಲಿ ಸಮಾಜ 2ಎ ಗೆ ಹೋದರೆ ತೊಂದರೆ ಆಗುತ್ತದೆ ಎಂದು ನಮ್ಮಲ್ಲಿನ ಕೆಲವು ಅಲ್ಪ ಮನಸ್ಸುಗಳಿಂದ ಗೊಂದಲ ಸೃಷ್ಟಿಯಾಗುತ್ತಿದೆ. ವಿನಾಕಾರಣ ಪತ್ರಿಕಾ ಹೇಳಿಕೆಗಳನ್ನು ನೀಡಿ ಪಂಚಮಸಾಲಿ ಸಮಾಜಕ್ಕೆ ನ್ಯಾಯ ಸಿಗಬಾರದು ಅಂತಾ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಬೀದಿಗೆ ಹೋಗುವರು ಹಾದಿಗೆ ಹೋಗುವರ ಹೇಳಿಕೆ ಬಗ್ಗೆ ಉತ್ತರ ಕೊಡಲ್ಲ ಎಂದು ವಿರೋಧಿಗಳಿಗೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.