ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಶೇ 30ರಷ್ಟು ಕಮಿಷನ್ ಆರೋಪ ಕೇಳಿ ಬಂದಿದೆ.
ಗ್ರಾಮೀಣ ಕ್ಷೇತ್ರದಲ್ಲಿ ಬರುವ ಬೆಳಗುಂದಿ, ತಾರಿಹಾಳ, ಉಚಗಾಂವ ಗ್ರಾಮದಲ್ಲಿ ಕಳಪೆ ಕಾಮಗಾರಿಯಿಂದ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಹೀಗಾಗಿ, ಕ್ಷೇತ್ರದಾದ್ಯಂತ ಸ್ಥಳೀಯ ಶಾಸಕಿ ವಿರುದ್ಧ ಅಪರಿಚಿತರು ಬ್ಯಾನರ್ ಅಂಟಿಸಿದ್ದಾರೆ. ಕನ್ನಡ, ಮರಾಠಿ ಭಾಷೆಯ ಬ್ಯಾನರ್ನಲ್ಲಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಕುಕ್ಕರ್ ತಗೋರಿ, ಸೀರೆ ತಗೋರಿ, ಮತ ಹರಾಜ್ ಹಾಕ್ರಿ. ಬೋನಸ್ ಅಂತಾ ನಿಮಗ ರಸ್ತೆ ಗುಂಡಿ ಸಿಗ್ತಾವ್, ಬಿದ್ದು ನಡಾ ಮುರ್ಕೋರಿ. 30 ಪರ್ಸೆಂಟ್ ಕಮಿಷನ್ ಪಡೆದು ಅಕ್ಕಾ ರಸ್ತೆ ಮಾಡ್ತಿದ್ದಾರಂತ. ಹೊಸ ರಸ್ತೆಗಳೆಲ್ಲವೂ ಕಳಪೆಯಿಂದ ಕೂಡಿದ್ದು, ಮತ ಹಾಕಿ ಈಗ ಹೊಯ್ಕಂತ ಕುಂದರ್ರೀ.. ಎಂದು ಈ ಬ್ಯಾನರ್‌ಗಳಲ್ಲಿ ಹೆಬ್ಬಾಳ್ಕರ್ ವಿರುದ್ಧ ವ್ಯಂಗ್ಯಾತ್ಮಕವಾಗಿ ಬರೆಯಲಾಗಿದೆ.
ಇದನ್ನೂ ಓದಿ: ಮನೆಯ ಮೇಲ್ಚಾವಣಿ ಕುಸಿತ: ಮಣ್ಣಿನಡಿ ಸಿಲುಕಿದ್ದ ವೃದ್ಧೆಯ ರಕ್ಷಣೆ