ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಲವೆಡೆ ಮಾರ್ಚ್ 24ರಿಂದ 28ರವರೆಗೆ ಕಳ್ಳಭಟ್ಟಿ ಅಡ್ಡೆಗಳ ಮೇಲೆ ಅಬಕಾರಿ ಪೊಲೀಸರು ದಾಳಿ ನಡೆಸಿ, 80 ಸಾವಿ ರೂಪಾಯಿಗೂ ಅಧಿಕ ಮೌಲ್ಯದ ಕಳ್ಳಭಟ್ಟಿ ವಶಕ್ಕೆ ಪಡೆದ್ದಿದಾರೆ.
ತಾಲೂಕಿನ ದೇಶನೂರ, ಹೊಗರ್ತಿ, ಕೊಳದೂರ, ಮೊಹರೆ, ಸುತಗಟ್ಟಿ, ವಟಬಾಳ ಮುಂತಾದೆಡೆ ಅಬಕಾರಿ ಪೊಲೀಸರು ದಾಳಿ ನಡೆಸಿದ್ದರು. ಬೈಲಹೊಂಗಲ ಅಬಕಾರಿ ನಿರೀಕ್ಷಕ ರವಿ ಮುರಗೋಡ ನೇತೃತ್ವದಲ್ಲಿ ದಾಳಿ ನಡೆದಿದ್ದು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.