ಬೆಂಗಳೂರು: ಸೂರ್ಯಗ್ರಹಣ ಅಂದರೆ ಸಾಕು ಜನರು ಮನೆಯಿಂದ ಹೊರಬರುವುದಕ್ಕೆ ಹೆದರುತ್ತಾರೆ. ಅದರಲ್ಲೂ ಗರ್ಭಿಣಿಯರು ಮತ್ತು ಹೊಸದಾಗಿ ಮದುವೆಗೆ ಸಿದ್ಧವಾಗಿರುವ ಜೋಡಿಗಳನ್ನು ಮನೆಯಿಂದ ಹೊರ ಬಿಡುವುದಕ್ಕೂ ಮನೆಯವರು ಹಿಂದುಮುಂದು ನೋಡುತ್ತಾರೆ. ಆದರೆ ಇಲ್ಲೊಂದು ಯುವಜೋಡಿ ಗ್ರಹಣವನ್ನು ಲೆಕ್ಕಿಸದೆ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿ ಗಮನಸೆಳೆದಿದ್ದಾರೆ.
ಇಂದು 8:00 ಗಂಟೆಯಿಂದ ಕಂಕಣ ಸೂರ್ಯ ಗ್ರಹಣವಿದ್ದು ಬೆಂಗಳೂರಿನ ಜನರು ಸೂರ್ಯನನ್ನು ಕಣ್ತುಂಬಿಕೊಳ್ಳೋ ತವಕದಲ್ಲಿದ್ರೆ, ಸಂದೀಪ್ ಹಾಗೂ ನಮ್ರತ ಯುವಜೋಡಿ ಬೆಳ್ಳಂಬೆಳಗ್ಗೆಯೇ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಳ್ಳೋದ್ರಲ್ಲಿ ಬ್ಯುಸಿಯಾಗಿದ್ದಾರೆ.
ಉತ್ತರ ಭಾರತದವರಾದ ಸಂದೀಪ್, ನಮ್ರತಾ ಜೋಡಿ ಬೆಂಗಳೂರಿನಲ್ಲಿ ವಾಸವಿದ್ದು, ಇಂದು ಲಾಲ್ ಬಾಗ್ನಲ್ಲಿ ಫೋಟೋಶೂಟ್ ಮಾಡಿಸುವ ಮೂಲಕ ಗ್ರಹಣಕ್ಕೆ ಸೆಡ್ಡುಹೊಡೆದು ಮೂಢನಂಬಿಕೆಯ ವಿರುದ್ಧ ಮಾದರಿಯಾಗಿದ್ದಾರೆ.