ಬೆಂಗಳೂರು: ಹೈಕೋರ್ಟ್ ತೀರ್ಪನ್ನು ನಾವು ಒಪ್ಪೋದಿಲ್ಲ. ಇದ್ರ ವಿರುದ್ಧ ನಾವು ಸುಪ್ರೀಂಕೋರ್ಟ್ಗೆ ಹೋಗ್ತೀವಿ ಎಂದು ಎಂಎಲ್ಸಿ ಸಿ.ಎಂ. ಇಬ್ರಾಹಿಂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಗೆ ಹೋಗಲು ಸಮಾಜದ ಮುಖಂಡರು ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ನ್ಯಾಯಾಲಯದಲ್ಲಿ ಹೋರಾಟ ಮಾಡಲು ಸಶಕ್ತವಾಗಿದ್ದೇವೆ. ಭಾರತದ ನ್ಯಾಯಾಲಯದ ಮೇಲೆ ನಮಗೆ ವಿಶ್ವಾಸವಿದೆ. ಸುಪ್ರೀಂಕೋರ್ಟ್ಗೆ ಒಬ್ಬೊಬ್ಬರೇ ಲಾಯರ್ ಹೋಗಬೇಡಿ. ಎಲ್ಲಾ ಒಟ್ಟಿಗೆ ಹೋಗಿ ಎಂದು ಸಲಹೆ ನೀಡಿದರು.
ಇದನ್ನ ಧರ್ಮದ ದೃಷ್ಟಿಯಿಂದ ನೋಡುವ ಬದಲು ಸಂವಿಧಾನದ ದೃಷ್ಟಿಯಿಂದ ನೋಡಬೇಕು. ಇಂದು ತಿಲಕ, ವಿಭೂತಿ, ಬಿಂದಿ ಇಟ್ಕೊಳೋದು ಚಾಯಿಸ್. ಅದೇ ರೀತಿ ಹಿಜಾಬ್ ಕೂಡ. ನಮ್ಮ ತಾಯಂದಿರು ಸೆರಗು ಹಾಕ್ತಾರೆ, ನಾಳೆ ಕೋರ್ಟ್ ಸೆರಗು ಹಾಕಿಕೊಳ್ಳೋದು ಬೇಡ ಎಂದು ನ್ಯಾಯಾಲಯ ಹೇಳಿದರೆ, ಅದನ್ನು ಸುಪ್ರಿಂಕೋರ್ಟ್ನಲ್ಲಿ ನಿರ್ಧರಿಸಬೇಕಾಗುತ್ತದೆ. ಅದೇ ರೀತಿ ಈ ಹಿಜಾಬ್ ವಿಚಾರ ಎಂದು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮಕ್ಕಳ ಭವಿಷ್ಯದ ವಿಚಾರದಲ್ಲಿ ರಾಜಕೀಯ ಬೆರೆಸಿದ ಕಾಂಗ್ರೆಸ್ ಧೋರಣೆಗೆ ಉತ್ತರ ಸಿಕ್ಕಿದೆ: ಬಿಜೆಪಿ ಟ್ವೀಟ್
ಯಾರೂ ಕೂಡ ಬೀದಿಗೆ ಇಳಿಯುವ ಅವಶ್ಯಕತೆ ಇಲ್ಲ. ಮುಂಬೈನ ಖ್ಯಾತ ವಕೀಲರ ಜೊತೆ ಕೂಡ ನಾನು ಮಾತನಾಡಿದ್ದೇನೆ. ಇದು ಇಲ್ಲಿಗೆ ನಿಲ್ಲೋದಿಲ್ಲ. ನಾಳೆ ಜೀನ್ಸ್ ಪ್ಯಾಂಟ್ ಹಾಕಬಾರದು ಅಂತಾರೆ. ಕೂಡಲೇ ಈ ವಿಚಾರದ ಬಗ್ಗೆ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಇಬ್ರಾಹಿಂ ಒತ್ತಾಯಿಸಿದ್ದಾರೆ.