ಬೆಂಗಳೂರು: ಕೊರೊನಾ ಭೀತಿಗೆ ಕಳೆದ ಒಂದು ತಿಂಗಳಿನಿಂದ ಇಡೀ ದೇಶ ಸ್ತಬ್ದವಾಗಿದ್ದು, ಕೋಟ್ಯಂತರ ವಾಹನಗಳು ರಸ್ತೆಗೆ ಇಳಿದಿಲ್ಲ. ಅಲ್ಲದೇ ಲಕ್ಷಾಂತರ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ಮಾನವನಿಗೆ ಕಷ್ಟವಾಗಿದೆ. ಅದ್ರೆ ಇದು ಪ್ರಕೃತಿಗೆ ವರವಾಗಿದೆ.
ಹೌದು ಲಾಕ್ಡೌನ್ನಿಂದ ಬೆಂಗಳೂರಿನ ಬಹುತೇಕ ಎಲ್ಲಾ ಕಾರ್ಖಾನೆಗಳು ಬಂದ್ ಆಗಿರುವ ಹಿನ್ನೆಲೆ. ಬೆಂಗಳೂರಿನಲ್ಲಿರುವ ವೃಷಭಾವತಿ ನದಿ ಚೇತರಿಸಿ ಕೊಳ್ತಿದೆ. ಪ್ರತಿನಿತ್ಯ ಕಾರ್ಖಾನೆಗಳು ತ್ಯಾಜ್ಯವನ್ನು ವೃಷಭಾವತಿ ಒಡಲಿಗೆ ಹರಿಬಿಡ್ತಿದ್ದವು. ಇದರಿಂದ ವೃಷಭಾವತಿ ನದಿ ಕೆಂಗೇರಿ ಮೋರಿಯಾಗಿ ಪರಿವರ್ತನೆ ಆಗಿ ಬಿಟ್ಟಿದ್ದಳು.
ಅಲ್ಲದೇ ವೃಷಭಾವತಿ ಸುತ್ತ ಮುತ್ತ ವಾಸಿಸುವ ಜನರಿಗೆ ಉಸಿರಾಡಲು ಆಗದ ಕೆಟ್ಟ ವಾಸನೆ ,ಜನರನ್ನ ಕಂಗೆಡಿಸಿತ್ತು. ಅದ್ರೆ ಕಳೆದ ಒಂದು ತಿಂಗಳಿಂದ ಕಾರ್ಖಾನೆಗಳು ಬಂದ್ ಅಗಿದ್ದು. ವೃಷಭಾವತಿ ಒಡಲು ಕೂಡ ತಣ್ಣಗಾಗಿದೆ.
ತ್ಯಾಜ್ಯ ನೀರು ಬರದ ಕಾರಣ ವೃಷಭಾವತಿಯಲ್ಲಿ ಹರಿಯುತ್ತಿರುವ ನೀರು ಕೂಡ ಕೊಂಚ ತಿಳಿಯಾಗಿದೆ. ಅಲ್ಲದೇ ಗಬ್ಬುವಾಸನೆಯು ಕಡಿಮೆಯಾಗಿದೆ. ಫ್ಯಾಕ್ಟರಿಗಳ ಕೆಮಿಕಲ್ ನೀರಿನಿಂದ ವೃಷಭಾವತಿ ನೀರು ಹಸಿರು ಬಣ್ಣಕ್ಕೆ ತಿರುಗಿ ನೊರೆಯುಕ್ತವಾಗಿ ಹರಿಯುತ್ತಿತ್ತು. ಆದರೆ ಈಗ ನೀರು ಹಸಿರು ಬಣ್ಣದಿಂದ ಮುಕ್ತಿ ಪಡೆದಿದೆ.