ಬೆಂಗಳೂರು: ಕಲಾಸಿಪಾಳ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಸರಗಳವು ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಪ್ರದೀಪ್ ಬಂಧಿತ ಆರೋಪಿಯಾಗಿದ್ದು, ಆತನಿಂದ 1.50 ಲಕ್ಷ ರೂ. ಬೆಲೆಬಾಳುವ 30 ಗ್ರಾಂ ಚಿನ್ನದ ಮಾಂಗಲ್ಯ ಸರ ಜಪ್ತಿ ಮಾಡಲಾಗಿದೆ.
ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಬಂಬು ಬಜಾರ್ ಬಳಿ ಮಹಿಳೆಯ ಚಿನ್ನದ ಸರ ಕದ್ದು ಪರಾರಿಯಾಗಿದ್ದ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕಲಾಸಿಪಾಳ್ಯ ಪೊಲೀಸರು, ಸದ್ಯ ಆರೋಪಿ ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.
ಓಎಲ್ಎಕ್ಸ್ನಲ್ಲಿ ಪೋಸ್ಟ್ ಹಾಕುವ ಮುನ್ನ ಹುಷಾರ್ !
ಓಎಲ್ಎಕ್ಸ್ ಜಾಲತಾಣದಲ್ಲಿ ಮೊಬೈಲ್ ಮಾರುವ ಜಾಹೀರಾತು ನೋಡಿ ಖರೀದಿ ಸೋಗಿನಲ್ಲಿ ವ್ಯಕ್ತಿಯನ್ನು ಕರೆಸಿಕೊಂಡು, ಬಳಿಕ ಆತನ ಮೇಲೆ ಹಲ್ಲೆ ಮಾಡಿ ಹಣ ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಹುಸೇನ್ ಪಾಷಾ, ಅಫ್ರಿದ್ ಖಾನ್, ಆಡ್ವಾನ್ ಪಾಷಾ ಬಂಧಿತ ಆರೋಪಿಗಳು. ಬಂಧಿತರಿಂದ 10 ಸಾವಿರ ರೂ. ನಗದು, ಮೂರು ಮೊಬೈಲ್ ಪೋನ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಅನುರಾಗ್ ಶರ್ಮಾ ಹಲ್ಲೆಗೊಳಗಾಗಿದ್ದು, ಇವರು ನೀಡಿದ ದೂರು ಆಧರಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
![ವ್ಯಕ್ತಿ ಮೇಲೆ ಹಲ್ಲೆ ಮಾಡಿದ ಆರೋಪಿಗಳ ಬಂಧನ](https://etvbharatimages.akamaized.net/etvbharat/prod-images/10370384_bin.jpg)
ಓದಿ:ಮೂಢನಂಬಿಕೆಗೆ ಬಲಿಯಾದ ವಿದ್ಯಾವಂತ ಪೋಷಕರು.. ಮತ್ತೆ ಹುಟ್ಟಿ ಬರುತ್ತಾರೆಂದು ಕರುಳಕುಡಿಗಳನ್ನೇ ಕೊಂದರೇ!
ಅನುರಾಗ್ ಶರ್ಮಾ ಓಎಲ್ ಎಕ್ಸ್ ಜಾಲತಾಣದಲ್ಲಿ ಮೊಬೈಲ್ ಮಾರಾಟ ಮಾಡುವುದಾಗಿ ಜಾಹೀರಾತು ಹಾಕಿದ್ದರು. ಇದನ್ನು ನೋಡಿದ ಆರೋಪಿ ಶರ್ಮಾಗೆ ಕರೆ ಮಾಡಿ ಮೊಬೈಲ್ ಖರೀದಿಸುವುದಾಗಿ ಹೇಳಿ ಜನವರಿ 23ರ ರಾತ್ರಿ 8 ಗಂಟೆಗೆ ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಬಳಿ ಬರಲು ಹೇಳಿದ್ದ. ಆ ಜಾಗಕ್ಕೆ ತೆರಳಿದ ಶರ್ಮಾನನ್ನು ಕಂಡು ನನ್ನ ಬಳಿ ಹಣ ಇಲ್ಲ. ನನ್ನ ತಾಯಿ ಬಳಿ ಹಣವಿದೆ. ಕಲಾಸಿಪಾಳ್ಯದ ನ್ಯೂ ಎಕ್ಸ್ ಟೆನ್ಷನ್ನಲ್ಲಿ ಮನೆಯಿದೆ. ಅಲ್ಲೇ ಹಣ ಕೊಡುತ್ತೇನೆ ಎಂದು ಕರೆದೊಯ್ದಿದ್ದಾನೆ.
ಮನೆಯ 4ನೇ ಮಹಡಿಗೆ ಕರೆದುಕೊಂಡು ಹೋಗುತ್ತಿದ್ದಂತೆ ರೂಂ ಒಳಗೆ ಕೂಡಿ ಹಾಕಿ ಮಚ್ಚಿನಿಂದ ಹಲ್ಲೆ ನಡೆಸಿ ಮೊಬೈಲ್ ಹಾಗೂ 20 ಸಾವಿರ ರು.ಹಣ ಕಸಿದುಕೊಂಡಿದ್ದಾರೆ. ಹಲ್ಲೆ ಮಾಡಿ ಬೇರೆಡೆ ಕರೆದೊಯ್ಯಲು ಯತ್ನಿಸುತ್ತಿರುವಾಗಲೇ ಶರ್ಮಾ ತಪ್ಪಿಸಿಕೊಂಡು ಬಂದಿದ್ದಾರೆ. ಠಾಣೆಗೆ ಬಂದು ನೀಡಿದ ದೂರಿನ ಮೇರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾದ ಇಬ್ಬರ ಬಂಧನಕ್ಕಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.