ಬೆಂಗಳೂರು: ಸಿಎಂ ಕೋವಿಡ್ 19 ಪರಿಹಾರ ನಿಧಿಗೆ ಟಯೋಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಹಾಗೂ ಇತರ ಟಯೋಟಾ ಸಮೂಹ ಸಂಸ್ಥೆಗಳ ವತಿಯಿಂದ 50 ಲಕ್ಷ ರೂ.ಗಳ ದೇಣಿಗೆಯ ಚೆಕ್ ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಇಂದು ಹಸ್ತಾಂತರ ಮಾಡಲಾಯಿತು.
ಸಿಎಂ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರುಗಳಾದ ಕೆ.ಜಿ. ಮೋಹನ ಕುಮಾರ್ ಹಾಗೂ ಯೋಶಿಮಿಟ್ಸಿ ಹಯಾಸಿ ಹಾಗೂ ಉಪ ವ್ಯವಸ್ಥಾಪಕ ನಿರ್ದೇಶಕ ಪರುಶರಾಮ್ ಹಾಗೂ ಕೆ.ಟಿ.ಟಿ.ಎಂ ವ್ಯವಸ್ಥಾಪಕ ನಿರ್ದೇಶಕ ಥೋಷಿಹಿಕೋ ಶಿಮಿಜು ಕೋವಿಡ್ ಪರಿಹಾರ ನಿಧಿಗೆ ಚೆಕ್ ನೀಡಿದರು.