ETV Bharat / state

ಒಬಿಸಿ ಮೀಸಲಿಗೆ ಆಗ್ರಹಿಸಿ ಮಠಾಧೀಶರ ಸಭೆ ಆರಂಭ

author img

By

Published : Feb 13, 2021, 11:42 AM IST

ಕೇಂದ್ರದ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳನ್ನು ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಲು ಎಲ್ಲಾ ಲಿಂಗಾಯುತ ಮಠದ ಶ್ರೀಗಳು ಸಭೆ ಆರಂಭಿಸಿದ್ದಾರೆ.

ರಾಷ್ಟ್ರೀಯ ವೀರಶೈವ ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ಸಭೆ
Today National Veerashaiva Lingayata Union Meeting

ಬೆಂಗಳೂರು: ಕೇಂದ್ರದ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳನ್ನು ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಸಿಎಂ ಅವರಿಗೆ ಮನವಿ ಮಾಡಲು ನಿರ್ಧರಿಸಿ ರಾಷ್ಟ್ರೀಯ ವೀರಶೈವ ಲಿಂಗಾಯತ ಮಠಾಧೀಶರ ಒಕ್ಕೂಟದ ಸಭೆ ನಡೆಯುತ್ತಿದೆ.

ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಸಭೆ ನಡೆಯುತ್ತಿದ್ದು, 70 ಕ್ಕೂ ಹೆಚ್ಚಿನ ಒಳಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಮಠಾಧೀಶರುಗಳು ಸಭೆ ನಡೆಸುತ್ತಿದ್ದಾರೆ.

ಓದಿ: ಚನ್ನರಾಯಪಟ್ಟಣದಲ್ಲಿ ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ : ರಸ್ತೆ ಅಪಘಾತದಲ್ಲಿ ನಾಲ್ವರು ಸಾವು

ಪಂಚಮಸಾಲಿ ಹೋರಾಟಕ್ಕೆ ವಿರೋಧ ಅಥವಾ ಅಡ್ಡಿಪಡಿಸಲು ಅಲ್ಲ ಎನ್ನುವ ಸ್ಪಷ್ಟೀಕರಣದೊಂದಿಗೆ ಸಭೆಯನ್ನು ಆರಂಭಿಸಿದರು. ಶ್ರೀಶೈಲ ಪೀಠದ ಜಗದ್ಗುರು 1008 ಜಗದ್ಗುರು, ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು,ಶ್ರೀ 1008 ಉಜೈನಿ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಶ್ರೀಗಳು, ಬಾಲೆಹೊಸೂರಿನ ದಿಂಗಾಲೇಶ್ವರ ಮಹಾಸ್ವಾಮಿಗಳು, ಸಿಂದಗಿ ಸಾರಂಗಮಠದ ಷ.ಬ್ರ. ಡಾ‌ ಪ್ರಭು ಸಾರಂಗ ಶಿವಾಚಾರ್ಯ ಸ್ವಾಮೀಜಿ, ಸಿದ್ದರಾಮ ಶಿವಾಚಾರ್ಯ ಮಹಾಸ್ವಾಮಿಗಳು, ಸರ್ಪಭೂಷಣ ಮಠದ ಮಲ್ಲಿಕಾರ್ಜುನ ದೇವರು,ವಿಭೂತಿಪುರ ಮಠದ ಷ, ಬ್ರ ಡಾ.ಮಹಾಂತಲಿಂಗ ಶಿವಾಚಾರ್ಯ, ಶಿವಗಂಗೆ ಗವಿ ಮಠದ ಡಾ ಷ,ಬ್ರ. ಮಲೆ ಶಾಂತಮುನಿ ಶಿವಾಚಾರ್ಯರು,ಮುಚಳಂಬ ಮಠದ ಶೋತ್ರೀಯ ಬ್ರಹ್ಮನಿಷ್ಠ ಭಾರತಿ ಶಿವಾನಂದ ಸ್ವಾಮೀಜಿ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು ಬಿ ಎಸ್ ಪರಮಶಿವಯ್ಯ, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಎಂ.ರುದ್ರೇಶ್​ ಸೇರಿದಂತೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದ 300 ಕ್ಕೂ ಹೆಚ್ಚಿನ ಮಠಾಧಿಪತಿಗಳು ಭಾಗಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.