ಬೆಂಗಳೂರು: ಲಾಕ್ಡೌನ್ ಎಫೆಕ್ಟ್ನಿಂದ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದ್ದು, ಇಂದಿನ ಚಿನ್ನದ (ಅಪರಂಜಿ) ಬೆಲೆ ₹ 4820 ಬೆಲೆ ಮುಟ್ಟಿದೆ. ಇನ್ನು 22k ಚಿನ್ನ ₹4420 ಆಗಿದೆ, ಜೊತೆಗೆ ಬೆಳ್ಳಿಯ ಬೆಳೆಯಲ್ಲೂ ಏರಿಕೆಯಾಗಿದ್ದು, ₹48,500 ರೂ. ಆಗಿದೆ.
![Today gold and silver price at Bangaluru](https://etvbharatimages.akamaized.net/etvbharat/prod-images/kn-bng-02-goldpriceshike-7205473_21052020181008_2105f_1590064808_752.jpeg)
ಸದ್ಯದಲ್ಲಿ ಚಿನ್ನದ ಬೆಲೆ ಏರುತ್ತದೆ ಹೊರತು ಕಡಿಮೆ ಆಗುವುದಿಲ್ಲ, ವಿಶ್ವದಲ್ಲಿ ಕೊರೊನಾ ಹೋಗಬೇಕು ಅಥವಾ ಲಸಿಕೆ ಬರಬೇಕು ಅಲ್ಲಿಯವರೆಗೂ ಚಿನ್ನದ ಬೆಲೆ ಹೆಚ್ಚಾಗುತ್ತದೆ. ಆರ್ಥಿಕತೆ ಹದಗೆಡುತ್ತಿದ್ದು, ಚಿನ್ನದ ಬೆಲೆ ಏರಿಕೆಗೆ ಕಾರಣ ಎಂದು ಚಿನ್ನ ಮಾರಾಟಗಾರ ಸಂಘದ ಸದಸ್ಯ ರವಿಕುಮಾರ್ ಹೇಳಿದರು.
ಇದೆ ಸಂದರ್ಭದಲ್ಲಿ ಮಾತನಾಡಿದ ಇವರು ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ ಅಗತ್ಯವಿರುವಷ್ಟು ಆಭರಣ ಖರೀದಿ ಮಾಡಬೇಕು ಎಂದು ಇವರು ಸಲಹೆ ನೀಡಿದರು.