ETV Bharat / state

ಬ್ಯಾಂಕ್​ನನಿಂದ ಹಣ ಡ್ರಾ ಮಾಡಿ ತರುವಾಗ ಇರಲಿ ಎಚ್ಚರ... ಯಾಕಂದ್ರೆ!?

author img

By

Published : Dec 26, 2019, 6:24 PM IST

ದ್ವಿಚಕ್ರ ವಾಹನದಲ್ಲಿ ಇಟ್ಟಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಕಳ್ಳರ ತಂಡವೊಂದು ದೋಚಿದ ಪ್ರಕರಣ ಹೆಚ್​ಎಎಲ್​ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Thieves robbery lakhs of rupees in bangalore
ಹಣ ದೋಚಿ ಬೈಕ್​ನಲ್ಲಿ ಪರಾರಿಯಾಗುತ್ತಿರುವುದು

ಬೆಂಗಳೂರು: ಬ್ಯಾಂಕ್​ನಿಂದ ಹಣ ಡ್ರಾ ಮಾಡಿಕೊಂಡ ಕ್ಷಣಮಾತ್ರದಲ್ಲಿ ಬೈಕ್​ನಲ್ಲಿ ಬಂದ ಕಳ್ಳರ ತಂಡ ಲಕ್ಷಾಂತರ ರೂಪಾಯಿ ದುಡ್ಡನ್ನು ಎಗರಿಸಿದೆ.

ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡ ಸಂಜಯಕುಮಾರ್

ಇಲ್ಲಿನ ವಿಜ್ಞಾನ ನಗರದ ಮುಖ್ಯ ರಸ್ತೆಯಲ್ಲಿರುವ ಬ್ಯಾಂಕ್​ನಿಂದ ಸಂಜಯಕುಮಾರ್ ಎಂಬುವವರು ಡಿಸೆಂಬರ್ 24ರಂದು ₹ 4 ಲಕ್ಷ ಹಣ ಡ್ರಾ ಮಾಡಿದ್ದಾರೆ. ನಂತರ ₹ 50 ಸಾವಿರ ಜೇಬಿನಲ್ಲಿಟ್ಟು, ಉಳಿದ ಹಣವನ್ನು ದ್ವಿಚಕ್ರ ವಾಹನದಲ್ಲಿ ಇಟ್ಟಿದ್ದಾರೆ. ಇದನ್ನೇ ಕಾಯುತ್ತಿದ್ದ ಕಳ್ಳರು ಅವರ ಬೆನ್ನುಬಿದ್ದಿದ್ದಾರೆ. ಕೊಂಚ ದೂರದಲ್ಲಿನ ಅಂಗಡಿ ಮಾಲೀಕರಿಗೆ ಜೇಬಿನಲ್ಲಿದ್ದ ₹50 ಸಾವಿರ ಹಣ ಕೊಡಲು ಹೋಗಿ ಬರುವಷ್ಟರಲ್ಲಿ ಉಳಿದ ಹಣ ಎಗರಿಸಿ ಕಳ್ಳರು ಮಾಯವಾಗಿದ್ದಾರೆ.

6 ಜನರ ಖದೀಮರ ತಂಡ ಈ ಕೃತ್ಯದಲ್ಲಿ ಪಾಳ್ಗೊಂಡಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಹೆಚ್​ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.

Intro:ಬ್ಯಾಂಕ್ ನಲ್ಲಿ ಹಣ ಡ್ರಾ ಮಾಡುವ ಮುನ್ನ ಎಚ್ಚರ ಎಚ್ಚರ
ಕ್ಷಣಾರ್ಧದಲ್ಲಿ ಹಣ ಎಗರಿಸ್ತಾರೆ ಆ ಗ್ಯಾಂಗ್

ಬ್ಯಾಂಕ್ ನಲ್ಲಿ ಹಣ ಡ್ರಾ ಮಾಡುವ ಮುನ್ನ ಬಹಳ ಜಾಗೃತೆಯಿಂದ ಕೂಡಿರಬೇಕು.. ಯಾಕಂದ್ರೆ ಸಿಲಿಕಾನ್ ಸಿಟಿಗೆ ಓಜಿಕುಪ್ಪಂ ರೀತಿಯಲ್ಲಿ ಮತ್ತೊಂದು ಗ್ಯಾಂಗ್ ಎಂಟ್ರಿ ಕೊಟ್ಟಿದ್ದು ಈ ಖದೀಮರು ಬ್ಯಾಂಕಿನಲ್ಲಿ ಹಣ ಡ್ರಾ ಮಾಡುವವರನ್ನೇ ಟಾರ್ಗೇಟ್ ಮಾಡಿ ಕ್ಷಣಾರ್ಧದಲ್ಲಿ ಹಣವನ್ನ ಎಗರಿಸಿ ಎಸ್ಕೆಪ್ ಆಗ್ತಾರೆ.

ಇದೇ ತಿಂಗಳ 24 ರಂದು ಮಧ್ಯಾಹ್ನ 1 ಗಂಟೆಗೆ ಎಚ್ ಎ ಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ವಿಜ್ಞಾನನಗರ ಮುಖ್ಯ ರಸ್ತೆಯಲ್ಲಿರುವ ಹೆಚ್ ಡಿ ಎಫ್ ಸಿ ಬ್ಯಾಂಕ್ ನಿಂದ ಸಂಜಯ್ ಕುಮಾರ್ 4 ಲಕ್ಷ ಹಣ ಡ್ರಾ ಮಾಡಿದ್ದರು.‌

ನಂತ್ರ ಸಂಜಯ್ 50 ಸಾವಿರ ಹಣವನ್ನ ಜೇಬಿನಲ್ಲಿಟ್ಟುಕೊಂಡು ಉಳಿದ ಹಣವನ್ನ ತನ್ನ ಸೂಜುಕಿ ಆಕ್ಸಿಸ್ ಬೈಕ್ ಡಿಕ್ಕಿಯಲ್ಲಿಟ್ಟು ಅಲ್ಲೆ ವಿಜ್ಞಾನ ರಸ್ತೆಯಲ್ಲಿರುವ ಮಾತಾಜಿ ಹಾರ್ಡ್‌ವೇರ್ ಅಂಗಡಿ ಮಾಲೀಕನಿಗೆ 50 ಸಾವಿರ ಹಣ ಕೊಡಲು ಅಂಗಡಿ ಮುಂದೆ ಬೈಕ್ ನಿಲ್ಲಿಸಿ ತೆರಳಿದ್ದರು. ಬೈಕ್ ನಿಲ್ಲಿಸಿ ಅಂಗಡಿ ಬಳಿ ತೆರಳುತ್ತಿದ್ದಂತೆ ಪಾಲೋ ಮಾಡಿಕೊಂಡು ಬಂದ 2 ಆಕ್ಟೀವ್ ಹೊಂಡಾ ಬೈಕ್ ಹಾಗೂ 1 ಹೊಂಡಾ ಯುನಿಕಾನ್ ಬೈಕ್ ನಲ್ಲಿ ಬಂದ 6 ಜನ ಖದೀಮರು ಕ್ಷಣಾರ್ಧದಲ್ಲಿ ಬೈಕ್ ಡಿಕ್ಕಿ ತೆಗೆದು 3 ಲಕ್ಷದ 50 ಸಾವಿರ ಹಣ ದೋಚಿ ಎಸ್ಕೇಪ್ ಆಗಿದ್ದಾರೆ.

ಇನ್ನು ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಂಜಯ್ ಕುಮಾರ್ ಎಚ್ ಎ ಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು ಪೊಲೀಸರು ಆರೋಪಿಗಳಿಗೆ ಹುಡುಕಾಟ ನಡೆಸಿದ್ದಾರೆBody:KN_BNG_08_BANK_7204498Conclusion:KN_BNG_08_BANK_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.