ಬೆಂಗಳೂರು: ಅಜ್ಜಿಯಂದಿರನ್ನು ಟಾರ್ಗೆಟ್ ಮಾಡಿಕೊಂಡು ಪಿಂಚಣಿ ಕೊಡಿಸುವುದಾಗಿ ಆಸೆ ತೋರಿಸಿ ಚಿನ್ನಾಭರಣ ಬಿಚ್ಚಿಸಿಕೊಂಡು ಮೋಸ ಮಾಡುತ್ತಿದ್ದ ಖತರ್ನಾಕ್ ಆರೋಪಿಯನ್ನು ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಂಜೇಶ್ ಬಂಧಿತ ಆರೋಪಿ. ವೃದ್ದಾಪ್ಯ ವೇತನ ಕೊಡಿಸುವ ಸೋಗಿನಲ್ಲಿ ದಾರಿಯಲ್ಲಿ ಹೋಗುತ್ತಿದ್ದ ಅಜ್ಜಿಯಂದಿರನ್ನು ಪರಿಚಯಿಸಿಕೊಳ್ಳುತ್ತಿದ್ದ. ಇದೇ ರೀತಿ ಕೆ.ಪಿ.ಅಗ್ರಹಾರ ಠಾಣಾ ವ್ಯಾಪ್ತಿಯ ವಿದ್ಯಾರಣ್ಯಪುರ ಬಳಿಯ ನಡೆದುಕೊಂಡು ಹೋಗುತ್ತಿದ್ದ ವಯಸ್ಸಾದ ಮಹಿಳೆಯರನ್ನು ಪರಿಚಯಿಸಿಕೊಂಡು ಪಿಂಚಣಿ ಕೊಡಿಸುವುದಾಗಿ ನಂಬಿಸಿ ಕರೆದುಕೊಂಡು ಆಕೆ ಧರಿಸಿದ್ದ 57 ಗ್ರಾಂ. ಮೌಲ್ಯದ ಚಿನ್ನದ ಸರ ಬಿಚ್ಚಿಸಿಕೊಂಡು ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ನೀಡಿದ ದೂರಿನ್ವನಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯು ಸಿದ್ದಾಪುರ, ಬೊಮ್ಮನಹಳ್ಳಿ, ಹೆಬ್ಬಗೋಡಿ, ರಾಜಾನುಕುಂಟೆ ಹಾಗೂ ಶಿವಮೊಗ್ಗ ಠಾಣೆ ಸೇರಿದಂತೆ ಎಂಟು ಪ್ರಕರಣಗಳಿಂದ ಒಟ್ಟು 16,55 ಲಕ್ಷ ಮೌಲ್ಯದ 317 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿಕೊಡಲಾಗಿದೆ. ಕೃತ್ಯಕ್ಕೆ ಬಳಸಿದ್ದ ಬೈಕ್ ವಶಕ್ಕೆ ಪಡೆದುಕೊಳ್ಳಲಾಗಿದೆ.ಆರೋಪಿಯು ಈ ಹಿಂದೆ ಕೆಂಗೇರಿ ಹಾಗೂ ಬಾಗಲಗುಂಟೆ ಪೊಲೀಸರಿಂದ ದಸ್ತಗಿರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.