ಬೆಂಗಳೂರು: ಆಕಸ್ಮಿಕವಾಗಿ 2 ಸೆಂಟಿ ಮೀಟರ್ ಬಾಟಲ್ ರಬ್ಬರ್ ಮುಚ್ಚಳ ನುಂಗಿದ್ದ 8 ತಿಂಗಳ ಮಗುವಿನ ಗಂಟಲಿನಿಂದ ಹೊರ ತೆಗೆಯುವಲ್ಲಿ ಫೋರ್ಟಿಸ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ. ಇಎನ್‌ಟಿ ತಜ್ಞ ಡಾ. ಎಚ್. ಕೆ. ಸುಶೀನ್ ದತ್ ಹಾಗೂ ಡಾ ನರೇಂದ್ರನಾಥ್ ತಂಡ ಯಶಸ್ವಿ ಚಿಕಿತ್ಸೆ ನಡೆಸಿದ್ದು, ಮಗುವಿನ ಪ್ರಾಣ ಉಳಿಸಿ ಧನ್ಯತೆ ಮರೆದಿದ್ದಾರೆ.
ಬಾಟಲ್ ರಬ್ಬರ್ ತಂದ ಆಪತ್ತೇನು? : ಡಾ ನರೇಂದ್ರನಾಥ್ ಮಾತನಾಡಿ, 8 ತಿಂಗಳ ಗಂಡು ಮಗು ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಕೈಗೆ ಸಿಕ್ಕಿದ ರಬ್ಬರ್ ಬಾಟಲ್‌ನ ಮುಚ್ಚಳ ನುಂಗಿದೆ. ಆದರೆ, ಆ ಕ್ಷಣಕ್ಕೆ ಮಗುವಿಗೆ ಯಾವುದೇ ಸಮಸ್ಯೆಯಾಗಿಲ್ಲ. ಇದು ಪೋಷಕರಿಗೂ ತಿಳಿದಿಲ್ಲ. ಆದರೆ, ಒಂದು ವಾರದೊಳಗೆ ಮಗುವಿನ ದನಿಯೂ ಕ್ಷೀಣಿಸುತ್ತ ಬಂದಿದೆ, ಮಗುವಿನ ಆರೋಗ್ಯವೂ ಹದಗೆಟ್ಟಿದ್ದರಿಂದ ಆಹಾರ ಸೇವಿಸುವುವದನ್ನು ಬಿಟ್ಟಿದೆ. ಗಂಟಲಿನಿಂದ ಶಿಳ್ಳೆಯ ರೀತಿಯಲ್ಲಿ ದನಿ ಹೊರಡುತ್ತಿತ್ತು. ಇದರಿಂದ ಗಾಬರಿಗೊಂಡಿದ್ದ ಪೋಷಕರು ಫೋರ್ಟಿಸ್ ಆಸ್ಪತ್ರೆಗೆ ಕರೆ ತಂದಿದ್ದರು.
ಪ್ರಾರಂಭದಲ್ಲಿ ಶ್ವಾಸಕೋಶದ ಸಮಸ್ಯೆ ಇರಬಹುದು ಎಂದು ಉಹಿಸಿದ್ದೆವು. ಆದರೆ, ಕೆಲ ಅನುಮಾನದಿಂದ ಲಾರಿಂಗೋ ಸ್ಕೋಪಿ ಮೂಲಕ ಗಂಟಲಿನ ಪರೀಕ್ಷೆ ನಡೆಸಿದೆವು. ಆ ವೇಳೆ 2 ಸೆಂ.ಮೀ ಅಗಲದ ಬಿಳಿ ಆಕಾರದ ಮುಚ್ಚಳ ಇರುವುದು ಕಂಡಿತು. ಕೂಡಲೇ ಆ ಮುಚ್ಚಳ ತೆಗೆದು ಹಾಕುವಲ್ಲಿ ಯಶಸ್ವಿಯಾದೆವು.
ಒಂದು ವೇಳೆ, ಈ ವಿಷಯ ಗೊತ್ತಾಗದೇ, ಕೇವಲ ಮಾತ್ರ ಇಂಜಕ್ಷನ್ ನೀಡಿದ್ದರೆ, ಮುಂದಿನ ದಿನಗಳಲ್ಲಿ ಅನ್ನನಾಳದ ಮೇಲ್ಭಾಗ, ಎದೆಯ ಸೋಂಕು ಅಥವಾ ಶ್ವಾಸಕೋಶದ ಸೋಂಕು ಇತ್ಯಾದಿ ಬಹುದೊಡ್ಡ ಆರೋಗ್ಯ ಸಮಸ್ಯೆಗೆ ಈ ಮಗು ತುತ್ತಾಗುತ್ತಿತ್ತು ಎಂದು ಹೇಳಿದ್ದಾರೆ.
ಡಾ. ಎಚ್ ಕೆ ಸುಶೀನ್ ದತ್ ಮಾತನಾಡಿ, ಮನೆಯಲ್ಲಿ ಸಣ್ಣ ಮಕ್ಕಳ ಕೈಗೆ ಅಟಿಕೆ, ಪ್ಲಾಸಿಕ್ ದಂಥ ಸಣ್ಣ ಪದಾರ್ಥಗಳು ಸಿಗದಂತೆ ಎಚ್ಚರಿಕೆ ವಹಿಸುವುದು ಅವಶ್ಯಕ. ಮಕ್ಕಳು ತಿಳಿಯದೇ ಅದನ್ನು ನುಂಗಬಹುದು. ಹೀಗಾಗಿ ಮನೆಯಲ್ಲಿ ಪೋಷಕರು ಮಗುವಿನ ಆರೈಕೆ ಬಗ್ಗೆ ಹೆಚ್ಚು ಗಮನ ನೀಡಬೇಕು ಎಂದು ಸಲಹೆ ನೀಡಿದ್ದಾರೆ.
ಪೋಷಕರು ಖುಷ್: ಫೋರ್ಟಿಸ್ ಆಸ್ಪತ್ರೆ ವೈದ್ಯರು ಮಗುವನ್ನೂ ರಕ್ಷಿಸಿದಕ್ಕೆ ಪೋಷಕರು ಖುಷಿಪಟ್ಟು ವೈದ್ಯರಿಗೆ ತಿಳಿಸಿದ್ದಾರೆ. ಈ ವೇಳೆ ಪೋಷಕರು ತಮ್ಮ ಮಗುವನ್ನೂ ಮುದ್ದಾಡಿ ತಮ್ಮ ವಶಕ್ಕೆ ಪಡೆದರು.
ಇದನ್ನೂ ಓದಿ:ಶೈಕ್ಷಣಿಕ ಸಾಧನೆ ಅದ್ಭುತ.. ಸರ್ಕಾರಿ ಮೆಡಿಕಲ್ ಸೀಟ್ ಪಡೆದಿರುವ ಬಡ ವಿದ್ಯಾರ್ಥಿನಿಗೆ ಬೇಕಿದೆ ನೆರವು