ಬೆಂಗಳೂರು: ರಾಜ್ಯ ಸರ್ಕಾರದ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಹಾಗೂ ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯವು ಶಾಲೆಗಳಲ್ಲಿ ಮಧ್ಯಾಹ್ನದ ಉಪಹಾರ ಯೋಜನೆ ಮತ್ತು ಕ್ಷೀರಭಾಗ್ಯ ಯೋಜನೆಗಳ ಮಹತ್ವದ ಶಿಫಾರಸುಗಳ ಕುರಿತಂತೆ ಪರಿಣಾಮಕಾರಿಯಾದ ಅನುಪಾಲನ ಕೈಗೊಳ್ಳುವ ಬಗ್ಗೆ ಶಿಫಾರಸು ವರದಿ ಸಲ್ಲಿಕೆ ಮಾಡಿದೆ.
![ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಕೈಗೊಂಡ ಪ್ರಮುಖ ಶಿಫಾರಸ್ಸುಗಳು](https://etvbharatimages.akamaized.net/etvbharat/prod-images/kn-bng-03-government-press-note-script-7208077_12122022144831_1212f_1670836711_2.jpg)
ರಾಜ್ಯ ಸರ್ಕಾರದ ಆದೇಶದ ಹಿನ್ನೆಲೆ ಈ ಅಧ್ಯಯನ ನಡೆದಿದ್ದು, ಈ ಮೇಲಿನ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಮತ್ತು ಕ್ಷೀರಭಾಗ್ಯ ಯೋಜನೆಗಳ ಅನುಷ್ಠಾನ, ನಿರ್ವಹಣೆ ಮತ್ತು ಮೇಲ್ವಿಚಾರಣೆಯಲ್ಲಿ ಸುಧಾರಣೆ ತರಲು ಹಾಗೂ ಗುಣಮಟ್ಟ ಮತ್ತು ಉತ್ತಮೀಕರಣ ಸಾಧಿಸಲು ಈ ಕೆಳಕಂಡ ಶಿಫಾರಸುಗಳನ್ನು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ತನ್ನ ಮೌಲ್ಯಮಾಪನ ಅಧ್ಯಯನದಿಂದ ಹಾಗೂ ಸಾಮಾಜಿಕ ನಿರ್ದೇಶನಾಲಯವು ಸಾಮಾಜಿಕ ಪರಿಶೋಧನೆ ನಡೆಸಿ ಈ ಕಚೇರಿಗೆ ವರದಿ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ.
![ಕರ್ನಾಟಕ ಮೌಲ್ಯಮಾಪನದ ಪ್ರಾಧಿಕಾರದ ಶಿಫಾರಸ್ಸುಗಳು](https://etvbharatimages.akamaized.net/etvbharat/prod-images/kn-bng-03-government-press-note-script-7208077_12122022144831_1212f_1670836711_84.jpg)
ಈ ಶಿಫಾರಸುಗಳನ್ನು ಜಿಲ್ಲಾ ಹಂತ, ತಾಲೂಕು ಹಂತ, ಕ್ಲಸ್ಟರ್ ಹಂತ ಮತ್ತು ಶಾಲಾ ಹಂತಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು ಚರ್ಚಿಸಿ, ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಕಾರ್ಯಕ್ರಮದ ಪರಿಣಾಮವನ್ನು ಹೆಚ್ಚಿಸುವಂತೆ ಈ ಮೂಲಕ ಸೂಚಿಸಿದೆ.
![ಕರ್ನಾಟಕ ಮೌಲ್ಯಮಾಪನದ ಪ್ರಾಧಿಕಾರದ ಶಿಫಾರಸ್ಸುಗಳು](https://etvbharatimages.akamaized.net/etvbharat/prod-images/kn-bng-03-government-press-note-script-7208077_12122022144831_1212f_1670836711_64.jpg)
ಸುಧಾರಣಾ ಕ್ರಮಗಳನ್ನು ಅನುಸರಿಸಿ ಉತ್ತಮ ಫಲಿತಾಂಶಗಳನ್ನು ಕಂಡುಕೊಂಡಿರುವ ಬಗ್ಗೆ ದಾಖಲೆ ಸಮೇತ ಈ ಕಚೇರಿಗೆ ಶಾಲಾವಾರು ತಾಲೂಕು ಹಂತ ಮತ್ತು ಜಿಲ್ಲಾ ಹಂತಗಳಲ್ಲಿ ಕ್ರೂಢೀಕರಿಸಿ ಸಂಬಂಧಿಸಿದ ಅಕ್ಷರ ದಾಸೋಹ ಅಧಿಕಾರಿಗಳು ಅನುಸರಣಾ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ. ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಕೈಗೊಂಡ ಅಧ್ಯಯನದ ಪ್ರಮುಖ 25 ಶಿಫಾರಸು ಹಾಗೂ 2021-22 ನೇ ಸಾಲಿನಲ್ಲಿ ಸಾಮಾಜಿಕ ಪರಿಶೋಧನಾ ಅಧ್ಯಯನದ ವರದಿಯ 19 ಶಿಫಾರಸುಗಳನ್ನು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಓದಿ: ಜ್ವಲಂತ ಸಮಸ್ಯೆಗಳಿಗೆ ನಮ್ಮ ಸರ್ಕಾರದಲ್ಲಿ ಶೀಘ್ರ ಪರಿಹಾರ: ಸಚಿವ ಕೆ ಗೋಪಾಲಯ್ಯ