ಬೆಂಗಳೂರು : ಜೂನ್ 5ಕ್ಕೆ ಪರಿಸರ ದಿನಾಚರಣೆ ಕೇವಲ ತೋರಿಕೆಯ ಮಾಡಿ, ಫೋಟೋಗಳಿಗೆ ಪೋಸ್ ಕೊಟ್ಟು ಮನೆ ಸೇರುವ ಜನರ ನಡುವೆ ಇಲ್ಲೊಂದು ಶಾಲೆ ವಿಭಿನ್ನವಾಗಿ ಪರಿಸರ ಕಾಳಜಿಯನ್ನು ತೋರುತ್ತಾ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೇಮವನ್ನು ಬಿತ್ತುತ್ತಿದೆ.
ಬನಶಂಕರಿಯಲ್ಲಿರುವ ಬಿಎನ್ಎಮ್ ವಿದ್ಯಾಸಂಸ್ಥೆಯು ತನ್ನ ಶಾಲೆಯಲ್ಲಿ ಓದುತ್ತಿರುವ ಪ್ರತಿ ತರಗತಿಯ ಮಕ್ಕಳಿಗೂ ಒಂದೊಂದು ರಸ್ತೆಯಲ್ಲಿ ಗಿಡ ನೆಟ್ಟು ಪೋಷಣೆ ಮಾಡುವುದಕ್ಕಾಗಿ ಹಂಚಿದೆ. ಪ್ರತಿ ತರಗತಿಯ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ರಸ್ತೆಗಳಲ್ಲಿ ಗಿಡಗಳನ್ನು ಪೋಷಿಸಿ ಬೆಳೆಸುವ ಜವಾಬ್ದಾರಿಯನ್ನು ವಹಿಸಿದ್ದು, ಶಿಕ್ಷಕರು ಮೇಲ್ವಿಚಾರಕರಾಗಿ ಮಕ್ಕಳಿಗೆ ಸಾಥ್ ನೀಡುತ್ತಿರುವುದು ವಿಶೇಷ.
ವಾರಕ್ಕೊಮ್ಮೆಯಾದರೂ ತರಗತಿಗಳ ನಡುವೆ ಶಿಕ್ಷಕರ ಜೊತೆಗೂಡಿ ಗಿಡಗಳನ್ನು ಗಮನಿಸಿ ಅವುಗಳಿಗೆ ನೀರುಣಿಸುವ ಕಾರ್ಯಗಳನ್ನು ಮಾಡುತ್ತಿರುವುದು ನಿಜಕ್ಕೂ ಎಲ್ಲರೂ ಮೆಚ್ಚುವ ಕಾರ್ಯ. ಪರಿಸರ ಪ್ರೇಮ ತೋರಿಕೆಗಾಗದೇ ನಿಜವಾದ ಕಾಳಜಿಯಿದ್ರೇ ನಮ್ಮ ಬೆಂಗಳೂರು ಮತ್ತಷ್ಟು ಗ್ರೀನಾಗಿ ಕಂಗೊಳಿಸೋದರಲ್ಲಿ ಸಂಶಯವಿಲ್ಲ.