ETV Bharat / state

'ಸಿ ಟಿ ರವಿ ಅನ್ನೋ ಮತಿಗೆಟ್ಟ ಆಸಾಮಿಯ ಖಜಾನೆ ಕೆಲವೇ ವರ್ಷದಲ್ಲಿ ತುಂಬಿದ್ಹೇಗೆ?' : ಕಾಂಗ್ರೆಸ್​ ಪ್ರಶ್ನೆ

ಪ್ರತಿ ಕುಟುಂಬಕ್ಕೆ ₹10 ಸಾವಿರ ನೀಡಿ ಎನ್ನುವ ಸಿದ್ದರಾಮಯ್ಯ ಸಲಹೆಗೆ ಬುದ್ಧಿ ಭ್ರಮಣೆಯಾದವರಂತೆ ಮಾತನಾಡುವ ಡಿಸಿಎಂ ಅಶ್ವತ್ಥ್ ನಾರಾಯಣ ಹಾಗೂ ಸಿ ಟಿ ರವಿ ಅವರೇ, ಪಿಎಂ ಕೇರ್ಸ್, ಕೊರೊನಾ ಪ್ಯಾಕೇಜ್, ₹20 ಲಕ್ಷ ಕೋಟಿ ಪ್ಯಾಕೇಜ್ ಇವೆಲ್ಲಾ ಎಲ್ಲಿ ಹೋದವು ಎಂದು ಹೇಳಿ, ಇಲ್ಲವೇ ಅವೆಲ್ಲಾ ಭೋಗಸ್ ಎಂದು ಒಪ್ಪಿಕೊಳ್ಳಿ..

State Congress barrage against CT Ravi and DCM Ashwaththanarayana
ಸಿ.ಟಿ ರವಿ ಹಾಗೂ ಡಿಸಿಎಂ ಅಶ್ವತ್ಥನಾರಾಯಣ ವಿರುದ್ಧ ರಾಜ್ಯ ಕಾಂಗ್ರೆಸ್ ವಾಗ್ದಾಳಿ
author img

By

Published : Apr 14, 2021, 7:27 PM IST

Updated : Apr 14, 2021, 9:00 PM IST

ಬೆಂಗಳೂರು : ಚಿಕ್ಕಮಗಳೂರಿನಲ್ಲಿ ಅಬ್ಬೇಪಾರಿಯಂತೆ ತಿರುಗುತ್ತಿದ್ದ ಸಿ ಟಿ ರವಿ ಅನ್ನೋ ಮತಿಗೆಟ್ಟ ಆಸಾಮಿಯ ಖಜಾನೆ ಕೆಲವೇ ವರ್ಷದಲ್ಲಿ ತುಂಬಿದ್ದು ಹೇಗೆ ಎಂದು ಕಾಂಗ್ರೆಸ್​ ಟ್ವಿಟರ್​ನಲ್ಲಿ ಪ್ರಶ್ನಿಸಿದೆ.

State Congress barrage against CT Ravi and DCM Ashwaththanarayana
ಸಿ ಟಿ ರವಿ ಹಾಗೂ ಡಿಸಿಎಂ ಅಶ್ವತ್ಥ್ ನಾರಾಯಣ ವಿರುದ್ಧ ರಾಜ್ಯ ಕಾಂಗ್ರೆಸ್ ಟೀಕೆ

ಬೆಂಗಳೂರು, ಚಿಕ್ಕಮಗಳೂರಿನಲ್ಲಿ ಕೋಟ್ಯಂತರ ಬೆಲೆಯ ಆಸ್ತಿ ಬಂದಿದ್ದು ಹೇಗೆ? ಲೋಕಾಯುಕ್ತ ಕೋರ್ಟ್​ನಲ್ಲಿ 409,420, 120, 463, 466, 120B ಪ್ರಕರಣಗಳು ಇರುವುದೇಕೆ? ಲೂಟಿ ರವಿ ಉತ್ತರಿಸುವರೇ ಎಂದು ಪ್ರಶ್ನಿಸಿದೆ. ಜನತೆ ಸಂಕಷ್ಟದಲ್ಲಿದ್ದಾರೆ.

ಪ್ರತಿ ಕುಟುಂಬಕ್ಕೆ ₹10 ಸಾವಿರ ನೀಡಿ ಎನ್ನುವ ಸಿದ್ದರಾಮಯ್ಯ ಸಲಹೆಗೆ ಬುದ್ಧಿ ಭ್ರಮಣೆಯಾದವರಂತೆ ಮಾತನಾಡುವ ಡಿಸಿಎಂ ಅಶ್ವತ್ಥ್ ನಾರಾಯಣ ಹಾಗೂ ಸಿ ಟಿ ರವಿ ಅವರೇ, ಪಿಎಂ ಕೇರ್ಸ್, ಕೊರೊನಾ ಪ್ಯಾಕೇಜ್, ₹20 ಲಕ್ಷ ಕೋಟಿ ಪ್ಯಾಕೇಜ್ ಇವೆಲ್ಲಾ ಎಲ್ಲಿ ಹೋದವು ಎಂದು ಹೇಳಿ, ಇಲ್ಲವೇ ಅವೆಲ್ಲಾ ಭೋಗಸ್ ಎಂದು ಒಪ್ಪಿಕೊಳ್ಳಿ.

ಡಿಸಿಎಂ ಅಶ್ವತ್ಥ್ ನಾರಾಯಣ ಅವರೇ, ಕಳೆದ ಒಂದು ವರ್ಷದಿಂದ ಕೊರೊನಾ ಸೋಂಕು ರಾಜ್ಯವನ್ನು ಕಾಡುತ್ತಿದೆ. ಒಂದು ವರ್ಷವಾದರೂ ಸೋಂಕನ್ನು ಎದುರಿಸುವ ಸಿದ್ಧತೆ ಇಲ್ಲದ್ದು ನಿಮ್ಮ ಬೇಜವಾಬ್ದಾರಿ ಅಲ್ಲವೇ? ಸಿದ್ದರಾಮಯ್ಯ ಹೇಳಿದಂತೆ ಪ್ಯಾಕೇಜ್ ಘೋಷಿಸಲಾಗುತ್ತದೆಯೇ ಎಂದು ಪ್ರಶ್ನೆ ಮಾಡುವ ಮೂಲಕ ನಿಮ್ಮದು ಕೈಲಾಗದ ಸರ್ಕಾರ ಎಂಬುದನ್ನ ಒಪ್ಪಿಕೊಂಡಿದ್ದೀರಿ ಎಂದು ಲೇವಡಿ ಮಾಡಿದೆ.

ರಾಜ್ಯದಲ್ಲಿ ಕೊರೊನಾ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಆಕ್ಸಿಜನ್ ಕೊರತೆ, ವೈದ್ಯರ ಕೊರತೆ, ಆ್ಯಂಬುಲೆನ್ಸ್ ಕೊರತೆ, ಪಿಪಿಇ ಕಿಟ್ ಕೊರತೆ, ಬೆಡ್‌ಗಳ ಕೊರತೆ, ಐಸಿಯು ಕೊರತೆ, ಸ್ಮಶಾನದಲ್ಲಿ ಜಾಗದ ಕೊರತೆ, ಸರ್ಕಾರಕ್ಕೆ ಮನುಷ್ಯತ್ವದ ಕೊರತೆ. ರಾಜ್ಯ ಬಿಜೆಪಿ ಸರ್ಕಾರದ ಲಜ್ಜೆಗೆಟ್ಟ ಆಡಳಿತದಲ್ಲಿ ರಾಜ್ಯ ಸ್ಮಶಾನವಾಗುವತ್ತ ಸಾಗುತ್ತಿದೆ ಎಂದು ಆರೋಪಿಸಿದೆ.

Last Updated : Apr 14, 2021, 9:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.