ETV Bharat / state

ಗುರುವಾರ  ಮೈತ್ರಿ ಸರ್ಕಾರದ ಭವಿಷ್ಯ  ‌ನಿರ್ಧಾರ?

ಸ್ಪೀಕರ್​ ರಮೇಶ್ ಕುಮಾರ್​ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಗುರುವಾರ ಬೆಳಗ್ಗೆ 11ಗಂಟೆ ವಿಶ್ವಾಸಮತ ಯಾಚಿಸಲು ಸೂಚನೆ ನೀಡಿದ್ದು,  ಮೈತ್ರಿ ಸರ್ಕಾರದ ಭವಿಷ್ಯ ಅಂದೇ ನಿರ್ಧಾರವಾಗಲಿದೆ.

ಗುರುವಾರ  ಮೈತ್ರಿ ಸರ್ಕಾರದ ಅಳಿವು ಉಳಿವಿನ  ‌ನಿರ್ಧಾರ?
author img

By

Published : Jul 15, 2019, 4:23 PM IST

ಬೆಂಗಳೂರು: ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರದ ಅಳಿವು ಉಳಿವಿನ ‌ನಿರ್ಧಾರ ಗುರುವಾರ ಆಗಲಿದೆ. ಗುರುವಾರ ಬೆಳಗ್ಗೆ 11ಗಂಟೆಗೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚಿಸಲಿದ್ದಾರೆ.

ಇಂದು ಮಧ್ಯಾಹ್ನ 12.30 ಕ್ಕೆ ಆರಂಭವಾಗಬೇಕಿದ್ದ ವಿಧಾನಸಭೆ ಕಲಾಪ ಮಧ್ಯಾಹ್ನ 2.25 ಕ್ಕೆ ಆರಂಭವಾಯಿತು.
ಈ ವೇಳೆ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ, ಗುರುವಾರ ಬೆಳಗ್ಗೆ 11ಗಂಟೆಗೆ ವಿಶ್ವಾಸಮತ ಯಾಚನೆ ಅವಕಾಶ ನೀಡಲಾಗಿದೆ ಎಂದು ಹೇಳಿ ಗುರುವಾರಕ್ಕೆ ಸದನ ಮುಂದೂಡಿದರು.

ಇದಕ್ಕೂ ಮುನ್ನ ಮಾತನಾಡಿದ ರಮೇಶ್ ಕುಮಾರ್, ಈಗ ಕಲಾಪ ನಡೆಯಬೇಕಾ, ಬೇಡವೇ ಅನ್ನೋದು ಪ್ರಶ್ನೆಯಾಗಿದೆ.

ಬಿಜೆಪಿ ನಾಯಕರು ಬಂದು ಬೆಳಗ್ಗೆ ಅವಿಶ್ವಾಸ ನಿರ್ಣಯ ಕ್ಕೆ ಮನವಿ ಮಾಡಿದ್ರು. ಈಗಾಗಲೇ ಸಿಎಂ ಕುಮಾರಸ್ವಾಮಿ ಅವರು ಸಹ ವಿಶ್ವಾಸ ನಿರ್ಣಯ ಮಂಡನೆಗೆ ಮನವಿ ಮಾಡಿರುವುದರಿಂದ ಈ ಎರಡು ವಿಚಾರಗಳು ಒಂದೇ ಆಗಿರುವುದರಿಂದ ಸಿಎಂ ಕೊಟ್ಟ ಮನವಿ ಮೊದಲು ಅಂಗೀಕರಿಸಲು ನಿರ್ಧಾರ ಮಾಡಿದ್ದೇನೆ ಎಂದರು.

ಇದಕ್ಕೂ ಬಿಜೆಪಿ ನಾಯಕರು ಒಪ್ಪಿದ್ದಾರೆ. ಗುರುವಾರ ಬೆಳಗ್ಗೆ ವಿಶ್ವಾಸ ಮತಯಾಚನೆ ಮಾಡಲು ಅವಕಾಶ ಮಾಡಿಕೊಂಡಿದ್ದೇನೆ ಎಂದು ಹೇಳಿದರು. ಪ್ರತಿಪಕ್ಷ ಬಾಗಿಯಾಗದೇ ಸದನ ನಡೆಸುವುದು ಸರಿಯಲ್ಲ. ಪ್ರತಿಪಕ್ಷ ಇಲ್ಲದೇ ಸದನ ನಡೆಸುವುದು ಸಮಾಂಜಸವಲ್ಲ ಎಂದರು.

ವಿಶ್ವಾಸ ಮತಯಾಚನೆ ಪಣಕ್ಕಿಟ್ಟ ಬಳಿಕ ಅವರು ಸೋತೂ ಇಲ್ಲ. ನೀವು ಗೆದ್ದೂ ಇಲ್ಲ. ನೀವು ಸೋತೂ ಇಲ್ಲ. ಅವರು ಗೆದ್ದೂ ಇಲ್ಲ ಎಂದು ಆಡಳಿತ ಹಾಗೂ ಪ್ರತಿಪಕ್ಷದವರಿಗೆ ಹೇಳಿದರು. ಯಾರು ಚದುರಂಗದಲ್ಲಿ ಗೆಲ್ಲುತ್ತಿರೋ ಗೊತ್ತಿಲ್ಲ. ಇತಿಹಾಸ ನೋಡಿ. ನಾನು ಯಾರನ್ನು ಓಲೈಸಲು, ಮೆಚ್ವಿಸಲು ಕೂತಿಲ್ಲ. ಬಳಸುವ ಭಾಷೆಯ ಇತಿಮಿತಿಯಿರಲಿ. ನನ್ನಲ್ಲಿ ಇರುವ ಸೂಕ್ಷ್ಮತೆ ಗಮನಿಸಿ ಎಂದು ಸ್ಪೀಕರ್​ ರಮೇಶ್​ ಕುಮಾರ್​​​ ಹೇಳಿದರು.

Intro:ಬೆಂಗಳೂರು : ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರದ ಅಳಿವು ಉಳಿವಿನ ‌ನಿರ್ಧಾರ ಗುರುವಾರ ಆಗಲಿದೆ.Body:ಗುರುವಾರ ಬೆಳಿಗ್ಗೆ 11 ಗಂಟೆ ಗೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚಿಸಲಿದ್ದಾರೆ.
ಇಂದು ಮಧ್ಯಾಹ್ನ 12.30 ಕ್ಕೆ ಆರಂಭವಾಗಬೇಕಿದ್ದ ವಿಧಾನಸಭೆ ಕಲಾಪ ಮಧ್ಯಾಹ್ನ 2.25 ಕ್ಕೆ ಆರಂಭವಾಯಿತು.
ಈ ವೇಳೆ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ, ಗುರುವಾರ ಬೆಳಗ್ಗೆ 11ಗಂಟೆಗೆ ವಿಶ್ವಾಸಮತ ಯಾಚನೆ ಅವಕಾಶ ನೀಡಲಾಗಿದೆ ಎಂದು ಹೇಳಿ ಸದನವನ್ನು ಗುರುವಾರಕ್ಕೆ ಸದನವನ್ನು ಮುಂದೂಡಿದರು
ಇದಕ್ಕೂ ಮುನ್ನ ಮಾತನಾಡಿದ ರಮೇಶ್ ಕುಮಾರ್, ಈಗ ಕಲಾಪ ನಡೆಯಬೇಕಾ, ಬೇಡವಾ ಅನ್ನೋದು ಪ್ರಶ್ನೆಯಾಗಿದೆ.
ಬಿಜೆಪಿ ನಾಯಕರು ಬಂದು ಬೆಳಿಗ್ಗೆ ಅವಿಶ್ವಾಸ ನಿರ್ಣಯ ಕ್ಕೆ ಮನವಿ ಮಾಡಿದ್ರು. ಈಗಾಗಲೇ ಸಿಎಂ ಕುಮಾರಸ್ವಾಮಿ ಅವರು ಸಹ ವಿಶ್ವಾಸ ನಿರ್ಣಯ ಮಂಡನೆ ಗೆ ಮನವಿ ಮಾಡಿರುವುದರಿಂದ ಈ ಎರಡು ವಿಚಾರಗಳು ಒಂದೇ ಆಗಿರುವುದರಿಂದ ಸಿಎಂ ಕೊಟ್ಟ ಮನವಿ ಮೊದಲು ಅಂಗೀಕರಿಸಲು ನಿರ್ಧಾರ ಮಾಡಿದ್ದೇನೆ ಎಂದರು.
ಇದಕ್ಕೂ ಬಿಜೆಪಿ ನಾಯಕರು ಒಪ್ಪಿದ್ದಾರೆ. ಗುರುವಾರ ಬೆಳಿಗ್ಗೆ ವಿಶ್ವಾಸ ಮತಯಾಚನೆ ಮಾಡಲು ಅವಕಾಶ ಮಾಡಿಕೊಂಡಿದ್ದೇನೆ ಎಂದು ಹೇಳಿದರು.
ಪ್ರತಿಪಕ್ಷ ಬಾಗಿಯಾಗದೇ ಸದನ ನಡೆಸುವುದು ಸರಿಯಲ್ಲ. ಪ್ರತಿಪಕ್ಷ ಇಲ್ಲದೇ ಸದನ ನಡೆಸುವುದು ಸಮಾಂಜಸವಲ್ಲ ಎಂದರು.
ವಿಶ್ವಾಸ ಮತಯಾಚನೆ ಪಣಕ್ಕಿಟ್ಟ ಬಳಿಕ ಅವರು ಸೋತೂ ಇಲ್ಲ. ನೀವು ಗೆದ್ದು ಇಲ್ಲ. ನೀವು ಸೋತೂ ಇಲ್ಲ. ಅವರು ಗೆದ್ದೂ ಇಲ್ಲ ಎಂದು ಆಡಳಿತ ಹಾಗೂ ಪ್ರತಿಪಕ್ಷದವರಿಗೆ ಹೇಳಿದರು.
ಯಾರು ಚದುರಂಗದಲ್ಲಿ ಗೆಲ್ಲುತ್ತಿರೋ ಗೊತ್ತಿಲ್ಲ. ಇತಿಹಾಸ ನೋಡಿ. ನಾನು ಯಾರನ್ನು ಓಲೈಸಲು, ಮೆಚ್ವಿಸಲು ಕೂತಿಲ್ಲ.
ಬಳಸುವ ಭಾಷೆಯ ಇತಿಮಿತಿಯಿರಲಿ. ನನ್ನಲ್ಲಿ ಇರುವ ಸೂಕ್ಷ್ಮತೆ ಗಮನಿಸಿ ಎಂದು ಹೇಳಿದರು.

Conclusion:

For All Latest Updates

TAGGED:

ಕಲಾಪ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.