ETV Bharat / state

ಸಹಚರನನ್ನೇ ಅಪಹರಿಸಿ ಹಣಕ್ಕೆ ಬೇಡಿಕೆ.. ಕಿಡ್ನ್ಯಾಪ್​ ಪ್ರಕರಣ ಭೇದಿಸಲು ಹೊರಟ ಖಾಕಿಗೆ ಸಿಕ್ಕಿ ಬಿದ್ದಿದ್ದು ವಂಚನೆ ಜಾಲ..! - Six arrested in connection with a Kidnapp case

ರಾಘವೇಂದ್ರ ಅವರ ಮೊಬೈಲ್ ಮುಖಾಂತರವೇ ಸಹೋದರ ಈಶ್ವರ್​ಗೆ ಆರೋಪಿಗಳು ಕರೆ ಮಾಡಿ ಮೂರು ಲಕ್ಷ ರೂಪಾಯಿ ಹಣ ನೀಡದಿದ್ದರೆ ಸಹೋದರನನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ.‌ ಇದರಿಂದ ಹೆದರಿ ಪೊಲೀಸರಿಗೆ ಈಶ್ವರ್ ದೂರು ನೀಡಿದ್ದರು‌‌.

ಸಹಚರನನ್ನೇ ಅಪಹರಿಸಿ ಹಣಕ್ಕೆ ಬೇಡಿಕೆ
ಸಹಚರನನ್ನೇ ಅಪಹರಿಸಿ ಹಣಕ್ಕೆ ಬೇಡಿಕೆ
author img

By

Published : Aug 27, 2021, 7:34 PM IST

ಬೆಂಗಳೂರು: ಯಶವಂತಪುರದ‌ ಮೋಹನ್‌ ನಗರದ ನಿವಾಸಿ ರಾಘವೇಂದ್ರ ಎಂಬಾತನನ್ನು ಕಿಡ್ನ್ಯಾಪ್ ಮಾಡಿದ ಆರೋಪದಡಿ ಪ್ರಕರಣ ಕಿಂಗ್​ಪಿನ್​ಗಳಾದ ಕಿರಣ್, ಸುರೇಶ್ ಹಾಗೂ ಅಪಹರಣಕ್ಕೆ ಸುಪಾರಿ ಪಡೆದ ಉಮಾನಾಥ್, ಶಿವಣ್ಣ, ಸಂದೀಪ್ ಹಾಗೂ ಅನಿಲ್ ಎಂಬುವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ‌.

ಯಶವಂತಪುರದ ಮೋಹನ್ ನಗರದ ನಿವಾಸಿ ರಾಘವೇಂದ್ರ ಮನೆಗೆ ಆಗಸ್ಟ್ 17ರ ರಾತ್ರಿ, ಪೊಲೀಸರ ಸೋಗಿನಲ್ಲಿ ನುಗ್ಗಿದ ಆರೋಪಿಗಳು ರಾಘವೇಂದ್ರನನ್ನು ಥಳಿಸಿ ಕಾರಿನಲ್ಲಿ ಅಪಹರಿಸಿದ್ದರು.‌ ರಾತ್ರಿಯೆಲ್ಲ ಕಾರಿನಲ್ಲಿ ಸುತ್ತಾಡಿಸಿ, ಬಿಡದಿ ಲಾಡ್ಜ್​ವೊಂದರಲ್ಲಿ ಕೂಡಿಹಾಕಿದ್ದರು.

ರಾಘವೇಂದ್ರ ಅವರ ಮೊಬೈಲ್ ಮುಖಾಂತರವೇ ಸಹೋದರ ಈಶ್ವರ್​ಗೆ ಆರೋಪಿಗಳು ಕರೆ ಮಾಡಿ ಮೂರು ಲಕ್ಷ ರೂಪಾಯಿ ಹಣ ನೀಡದಿದ್ದರೆ ಸಹೋದರನನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ.‌ ಇದರಿಂದ ಹೆದರಿ ಪೊಲೀಸರಿಗೆ ಈಶ್ವರ್ ದೂರು ನೀಡಿದ್ದರು‌‌.

ತಕ್ಷಣ ಕಾರ್ಯಪ್ರವೃತ್ತರಾದ ಯಶವಂತಪುರ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್ ಕೆ.ಸುರೇಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬಿಡದಿ ಬಳಿ ಓರ್ವನನ್ನು ಬಂಧಿಸಿದೆ. ಉಳಿದ ಆರೋಪಿಗಳನ್ನು ತಮಿಳುನಾಡಿನಲ್ಲಿ ಬಂಧಿಸಿದೆ‌.

ಔಷಧದ ಹೆಸರಲ್ಲಿ ವಂಚನೆ ಮಾಡುತ್ತಿದ್ದ ಚಾಲಾಕಿಗಳು:

ಅಪಹರಣಕ್ಕೆ ಒಳಗಾದ ರಾಘವೇಂದ್ರ ಜೊತೆಗೆ ಕಿರಣ್, ಸುರೇಶ್ ಸಹ ಬಿಪಿ, ಶುಗರ್ ಸೇರಿದಂತೆ ಇನ್ನಿತರ ಕಾಯಿಲೆಯಿರುವ ನಾಗರಿಕರನ್ನೇ ಗುರಿಯಾಗಿಸಿಕೊಂಡು ಆರ್ಯುವೇದ ಔಷಧ ನೀಡುವ ಸೋಗಿನಲ್ಲಿ ಅವರಿಂದ ಮೊಬೈಲ್ ನಂಬರ್ ಪಡೆಯುತ್ತಿದ್ದರು‌. ಇದನ್ನು ವಂಚನೆ ಜಾಲದ ಆರೋಪಿಗಳಿಗೆ 50 ರಿಂದ 100 ರೂಪಾಯಿಗೆ ನೀಡುತ್ತಿದ್ದರು.

ವಂಚನೆ ಜಾಲದಲ್ಲಿ ಸಕ್ರಿಯವಾಗಿ ತೊಡಸಿಕೊಂಡಿದ್ದ ರಾಘವೇಂದ್ರ ಕಳೆದ ತಿಂಗಳು ಲಕ್ಷಾಂತರ ರೂಪಾಯಿ ಸಂಪಾದಿಸಿದ್ದ. ಇದರಿಂದ ಕುಪಿತಗೊಂಡ ಸಹ ವಂಚಕರಾದ ಕಿರಣ್ ಹಾಗೂ ಸುರೇಶ್, ರಾಘವೇಂದ್ರನನ್ನು ಅಪಹರಿಸಿದರೆ ಹೆಚ್ಚು ಹಣ ಸಂಪಾದಿಸಬಹುದು ಎಂದು ಅರಿತು ಅಪಹರಣಕಾರರಿಗೆ ಸುಪಾರಿ ನೀಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ‌.

ವಯೋಸಹಜ ಖಾಯಿಲೆ ಇರುವ ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡು ಈ ಹಿಂದೆ ತಿಲಕ್ ನಗರ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ‌.

ಓದಿ: ಮೈಸೂರು ಚಿನ್ನಾಭರಣ ಅಂಗಡಿ ದರೋಡೆ ಪ್ರಕರಣದಲ್ಲಿ 6 ಜನರ ಬಂಧನ : ಡಿಜಿಪಿ ಪ್ರವೀಣ್ ಸೂದ್

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.