ನೆಲಮಂಗಲ: ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ರೈತರಿಗೆ ₹99 ರೂಪಾಯಿ ಮೌಲ್ಯದ ಸಿದ್ಧಾರ್ಥ ಆರೋಗ್ಯ ಕಾರ್ಡ್ ವಿತರಣೆಗೆ ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಶುಕ್ರವಾರ ಚಾಲನೆ ನೀಡಿದರು.
ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವ ನಿಟ್ಟಿನಿಂದ ಸಿದ್ಧಾರ್ಥ ಆರೋಗ್ಯ ಕಾರ್ಡ್ ಮೂಲಕ ಕಡಿಮೆ ದರದಲ್ಲಿ, ಉಚಿತವಾಗಿ ಆಸ್ಪತ್ರೆಯ ಸೇವೆಗಳನ್ನು ಒದಗಿಸುವ ಹೆಲ್ತ್ ಕಾರ್ಡ್ ರೈತರಿಗೆ ನೀಡಲು ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಒಡೆತನದ ಶ್ರೀ ಸಿದ್ಧಾರ್ಥ್ ಶಿಕ್ಷಣ ಸಂಸ್ಥೆ ಮುಂದಾಗಿದ್ದು, 'ಕಾಡ್೯ ಚಿಕ್ಕದು, ಸೌಲಭ್ಯ ದೊಡ್ಡದು' ಎಂಬ ಧ್ಯೇಯವಾಕ್ಯದೊಂದಿಗೆ ಸಿದ್ಧಾರ್ಥ ಹೆಲ್ತ್ ಕಾರ್ಡ್ ಗೆ ಚಾಲನೆ ದೊರೆತಿ್ದೆ.
ನೆಲಮಂಗಲ ತಾಲೂಕಿನ ಟಿ. ಬೇಗೂರು ಗ್ರಾಮದ ಬಳಿಯಿರುವ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ರೈತರಿಗೆ ₹99 ರೂಪಾಯಿ ಮೌಲ್ಯದ ಸಿದ್ಧಾರ್ಥ ಆರೋಗ್ಯ ಕಾರ್ಡ್ ವಿತರಣೆಗೆ ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಚಾಲನೆ ನೀಡಿದರು.
ಕಾರ್ಡಿನಿಂದ ಪ್ರತಿದಿನ ಉಚಿತ ತಪಾಸಣೆ, ಡಾಕ್ಟರ್ ಮತ್ತು ನರ್ಸ್ಗಳ ವೈದ್ಯಕೀಯ ಶುಲ್ಕ, ವಾಡ್೯ ಮತ್ತು ಬೆಡ್ ಚಾಜ್೯, ಹೆರಿಗೆ ಸೌಲಭ್ಯ, ಸಾಮಾನ್ಯ ರೋಗ, ಸಕ್ಕರೆ ಕಾಯಿಲೆ ಸೇರಿದಂತೆ ಹಲವು ಚಿಕಿತ್ಸೆಗಳು ಉಚಿತವಾಗಿದೆ, ಇನ್ನೂ ಈ ಕಾಡ್೯ ಹೊಂದಿದ ಒಳರೋಗಿಗಳಿಗೆ ಆಸ್ಪತ್ರೆಯಲ್ಲಾಗುವ ಎಲ್ಲಾ ಅಪರೇಶನ್, ರಕ್ತ ಪರೀಕ್ಷೆ, ಎಕ್ಸ ರೇ, ಸ್ಕ್ಯಾನಿಂಗ್, ಸಿ.ಟಿ. ಸ್ಕ್ಯಾನ್, ಎಂ.ಆರ್.ಐ ಶೇಕಡಾ 50ರಷ್ಟು ರಿಯಾಯಿತಿ ನೀಡಲಾಗಿದೆ.