ETV Bharat / state

ಸಾವರ್ಕರ್ ನಾಸ್ತಿಕ‌, ದೇವರನ್ನೇ ನಂಬದ ಅವ​ರನ್ನು ಗಣೇಶನ ಪೆಂಡಾಲ್​ನಲ್ಲಿಡುವುದ್ಯಾಕೆ: ಪ್ರಿಯಾಂಕ್​ ಖರ್ಗೆ - ಈಟಿವಿ ಭಾರತ ಕನ್ನಡ

ಗೋಮೂತ್ರ ಕುಡಿಯುವವರ ಬುದ್ಧಿ ಹತ್ಯೆಯಾಗಿದೆ ಎಂದು ಸಾವರ್ಕರ್​ ಹೇಳಿದ್ದರು. ಅವರೇ ಗೋಮಾಂಸ ತಿಂದಿದ್ದರು. ಇಂದು ಅವರ ಮಾತಿಗೆ ತದ್ವಿರುದ್ಧವಾಗಿ ಗೋಹತ್ಯೆ ನಿಷೇಧ ಜಾರಿಗೆ ತಂದಿರುವವರು ಬಿಜೆಪಿಯವರು ಎಂದು ಮಾಜಿ ಸಚಿವ ಪ್ರಿಯಾಂಕ್​ ಖರ್ಗೆ ಆರೋಪಿಸಿದರು.

savarkar-is-atheist-says-congress-leader-priyank-kharge
ಸಾವರ್ಕರ್ ನಾಸ್ತಿಕ‌, ದೇವರನ್ನೇ ನಂಬದ ಅವ​ರನ್ನು ಗಣೇಶನ ಪೆಂಡಾಲ್​ನಲ್ಲಿಇಡುವುದ್ಯಾಕೆ: ಪ್ರಿಯಾಂಕ್​ ಖರ್ಗೆ
author img

By

Published : Aug 24, 2022, 6:10 PM IST

ಬೆಂಗಳೂರು: ಹಿಂದುತ್ವದ ಪಿತಾಮಹ ಸಾವರ್ಕರ್ ನಾಸ್ತಿಕ‌ ಹಾಗೂ ವಿಚಾರವಾದಿ ಆಗಿದ್ದರು. ದುರಂತ ಅಂದರೆ ಬಿಜೆಪಿಯವರಿಗೆ ಇದು ಗೊತ್ತಿಲ್ಲ. ಬಿಜೆಪಿ ಮತ್ತು ಆರ್​​ಎಸ್ಎಸ್​ನವರು ಸಾವರ್ಕರ್ ಹೊಗಳುವಾಗ ತಮಗೆ ಅಗತ್ಯವಿರುವ ವಿಚಾರವನ್ನು ಮಾತ್ರ ಪ್ರಸ್ತಾಪಿಸುತ್ತಾರೆ. ಸಮಗ್ರ ವಿಚಾರವನ್ನು ಬಳಸುವುದೇ ಇಲ್ಲ ಎಂದು ಮಾಜಿ ಸಚಿವ ಪ್ರಿಯಾಂಕ್​ ಖರ್ಗೆ ಕಿಡಿಕಾರಿದರು.

ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಇಂದು ಮಾಧ್ಯಮಗೋಷ್ಟಿ ಉದ್ದೇಶಿಸಿದ ಮಾತನಾಡಿದ ಅವರು, ಬಿಜೆಪಿಯವರು ವಾಟ್ಸ್​ಆ್ಯಪ್​ ರಾಜಕಾರಣದಿಂದ ಆಚೆ ಬರಬೇಕು. ಸಾವರ್ಕರ್ ಗೋಮಾತೆಯನ್ನು ಪೂಜಿಸಬಾರದು, ಗೋವು ಪವಿತ್ರವಲ್ಲ, ಉಪಯುಕ್ತ ಪ್ರಾಣಿ ಎಂದಿದ್ದರು. ಗೋವು ತಾಯಿ ಆಗಿದ್ದರೆ ಅದು ಕೇವಲ ಎತ್ತಿಗೆ ಮಾತ್ರ. ಇದು ದೇವರಲ್ಲ. ದೇಶ ಗೋವನ್ನು ಪೂಜಿಸುವುದನ್ನು ಬಿಡಬೇಕು ಎಂದಿದ್ದರು ಅಂತಾ ಹೇಳಿದರು.

ಅಲ್ಲದೇ, ಗೋಮೂತ್ರ ಕುಡಿಯುವವರ ಬುದ್ಧಿ ಹತ್ಯೆಯಾಗಿದೆ ಎಂದು ಸಾವರ್ಕರ್​ ಹೇಳಿದ್ದರು. ಅವರೇ ಗೋಮಾಂಸ ತಿಂದಿದ್ದರು. ಇಂದು ಅವರ ಮಾತಿಗೆ ತದ್ವಿರುದ್ಧವಾಗಿ ಗೋಹತ್ಯೆ ನಿಷೇಧ ಜಾರಿಗೆ ತಂದಿರುವವರು ಬಿಜೆಪಿಯವರು. ಈಗ ಇದನ್ನು ವಾಪಸ್ ಪಡೆಯುತ್ತೀರಾ?. ದೇವರನ್ನೇ ನಂಬದ ಸಾವರ್ಕರ್​ರನ್ನು ಇಂದು ಗಣೇಶನ ಪೆಂಡಾಲ್​ನಲ್ಲಿ ಯಾಕೆ ಇಡಲು ತೀರ್ಮಾನಿಸಿದ್ದೀರಿ? ಎಲ್ಲದರಲ್ಲೂ ಕಮಿಷನ್ ಹೊಡೆಯಲು ಮುಂದಾಗಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಸಾರ್ವಜನಿಕ ಗಣೇಶೋತ್ಸವದಲ್ಲಿ ಸಾವರ್ಕರ್ ಉತ್ಸವ ಆಚರಣೆ: ಪ್ರಮೋದ್ ಮುತಾಲಿಕ್

ಬ್ರಿಟಿಷರ ವಿರುದ್ಧ ಸಾವರ್ಕರ್​ ಎಷ್ಟು ಸಾರಿ ಧನಿಯೆತ್ತಿದ್ದಾರೆ: ಕಾಲಾಪಾನಿ, ಶಿಕ್ಷೆ ಆದ ಬಳಿಕ ಸಾವರ್ಕರ್​ ಹೋರಾಟದ ಮನೋಭಾವ ಕಳೆದುಕೊಂಡರು. ಕೈದಿಗಳಿಗೆ ಇಲ್ಲಿ ಕಠಿಣ ಶಿಕ್ಷೆ ನೀಡಲಾಗುತ್ತಿತ್ತು. ಎಣ್ಣೆ ತೆಗೆಸುವ ಕಾರ್ಯ ಮಾಡಲಾಗುತ್ತದೆ. ಬ್ರಿಟಿಷ್ ಅಧಿಕಾರಿಗಳಿಗೆ ಇವರು ಕ್ಷಮೆ ಕೋರುತ್ತಾರೆ ಮತ್ತು ಅವರಿಗೆ ಬೇಕಾದ ರೀತಿ ಇದ್ದ ಕಾರಣ ಕಠಿಣ ಶಿಕ್ಷೆಗೆ ಒಳಗಾಗುವುದಿಲ್ಲ. ಕ್ಲರ್ಕ್, ಪೇಪರ್ ಕೆಲಸ ಮಾಡುತ್ತಾರೆ ಎಂದು ಪ್ರಿಯಾಂಕ್​ ಹೇಳಿದರು.

ಸಾವರ್ಕರ್ ನಾಸ್ತಿಕ‌, ದೇವರನ್ನೇ ನಂಬದ ಅವ​ರನ್ನು ಗಣೇಶನ ಪೆಂಡಾಲ್​ನಲ್ಲಿಇಡುವುದ್ಯಾಕೆ: ಪ್ರಿಯಾಂಕ್​ ಖರ್ಗೆ

ಜೈಲಿಗೆ ತೆರಳಿದ ಎರಡೇ ತಿಂಗಳಲ್ಲಿ ಕ್ಷಮಾಪಣೆ ಪತ್ರ ಬರೆಯುತ್ತಾರೆ. ಇದಾದ ನಂತರವೂ ಆರು ಬಾರಿ ಕ್ಷಮಾಪಣೆ ಪತ್ರ ಬರೆಯುತ್ತಾರೆ. ಸಾವರ್ಕರ್ ಸೋದರರು ಬ್ರಿಟಿಷ್ ಅಧಿಕಾರಿಗಳು ನೀಡುವ ಕೆಲಸ ಮಾಡುತ್ತೇವೆ. ಬ್ರಿಟಿಷರನ್ನು ಬಿಟ್ಟರೆ ದೇಶಕ್ಕೆ ಭವಿಷ್ಯವಿಲ್ಲ ಎಂಬ ನಂಬಿಕೆ ಅಂದು ಅವರದ್ದಾಗಿತ್ತು. ದಯವಿಟ್ಟು ನಮ್ಮ ಬಿಡುಗಡೆಯನ್ನು ಪರಿಗಣಿಸಿ ಎಂದು ಪತ್ರದಲ್ಲಿ ಬೇಡಿಕೊಂಡಿದ್ದರು. ಪದೇ ಪದೇ ಅವರು ಕ್ಷಮಾಪಣೆ ಪತ್ರ ಬರೆಯುತ್ತಿದ್ದಾರೆ, ಅವರನ್ನು ಬಿಟ್ಟುಬಿಡಿ ಎಂದೇ ಗಾಂಧಿ ಹೇಳಿದ್ದರು. ಇಷ್ಟೊಂದು ಬೇಡಿಕೊಂಡು ಜೈಲಿಂದ ಆಚೆ ಬಂದು ಇವರು ಸಾಧಿಸಿದ್ದಾದರೂ ಏನು ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಸಾವರ್ಕರ್ ಪುತ್ಥಳಿ ಬದಲಿಗೆ ಸರ್ಕಲ್ ನಿರ್ಮಾಣ ಒಳ್ಳೆಯದು: ಶಾಸಕ‌ ರಘುಪತಿ ಭಟ್

ಇಂದು ಬಿಜೆಪಿಯವರು ಸಾವರ್ಕರ್ ಕ್ಷಮಾಪಣೆ ಪತ್ರ ಬರೆದಿದ್ದು, ಮರಳಿ ಹೊರಗೆ ಬಂದು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಬೇಕು ಎಂಬುದಾಗಿತ್ತು ಹಾಗೂ ಇದು ಸಾವರ್ಕರ್ ಅವರ ಮಾಸ್ಟರ್ ಸ್ಟ್ರೋಕ್ ಆಗಿತ್ತು ಎಂದು ವಾದಿಸುತ್ತಾರೆ. ಆದರೆ, ಇದೆಲ್ಲ ಸುಳ್ಳು. ಅವರ ದೇಶಕ್ಕೋಸ್ಕರ ಎಷ್ಟು ತ್ಯಾಗ ಮಾಡಿದ್ದಾರೆ. ಬ್ರಿಟಿಷರ ವಿರುದ್ಧ ಅವರು ಎಷ್ಟು ಸಾರಿ ಧನಿಯೆತ್ತಿದ್ದಾರೆ ಎಂಬ ದಾಖಲೆ ನೀಡಿದರೆ ನಾವು ಸಹ ತಲೆಬಾಗಿಸುತ್ತೇವೆ ಎಂದು ಸವಾಲು ಹಾಕಿದರು.

ಸಾವರ್ಕರ್ ಪಿಂಚಣಿ ಯಾಕೆ ಪಡೆದರು?: ಬಿಜೆಪಿಯವರು ಸ್ವಲ್ಪ ಇತಿಹಾಸ ಓದಿಕೊಳ್ಳಬೇಕು. ಕ್ಷಮಾಪಣೆ ಪತ್ರ ಬರಿ ಎಂದು ಗಾಂಧಿಯವರೇ ಸಾವರ್ಕರ್​ಗೆ ಸಲಹೆ ನೀಡಿದ್ದರೂ ಎಂದು ಬಿಜೆಪಿ ಹೇಳುತ್ತದೆ. ಇದು ಶುದ್ಧ ಸುಳ್ಳು. ಸಾವರ್ಕರ್ ಸಹೋದರರು ಸಂಪೂರ್ಣವಾಗಿ ಬ್ರಿಟಿಷರಿಗೆ ಶರಣಾಗತರಾಗಿದ್ದರು. ಜೈಲಿನಿಂದ ಆಚೆ ಬರುವ ಉದ್ದೇಶಕ್ಕಾಗಿ ಮಾತ್ರ ಪತ್ರ ಬರೆದಿದ್ದರು. ಆಚೆ ಬಂದು ದೇಶದ ಸ್ವಾತಂತ್ರ್ಯಕ್ಕೆ ಹೋರಾಡುವ ಯಾವುದೇ ಉದ್ದೇಶ ಅವರಿಗೆ ಇರಲಿಲ್ಲ. ಕ್ಷಮಾಪಣೆಯನ್ನು ಮಾಸ್ಟರ್ ಸ್ಟ್ರೋಕ್ ಎಂದು ಬಿಜೆಪಿ ಬಣ್ಣಿಸಿದೆ. ಆದರೆ, ಜೈಲಿನಿಂದ ಆಚೆ ಬಂದ ಮೇಲೆ ಪಿಂಚಣಿ ಯಾಕೆ ಪಡೆದರು. ಪಿಂಚಣಿ ಹೆಚ್ಚಿಸುವಂತೆ ಪತ್ರವನ್ನು ಯಾಕೆ ಬರೆದರು ಎಂದು ಕಿಡಿಕಾರಿದರು.

ಕ್ವಿಟ್ ಇಂಡಿಯಾ ಚಳವಳಿಯನ್ನು ಯಾಕೆ ಬೆಂಬಲಿಸಲಿಲ್ಲ?: ಸಾವರ್ಕರ್ ಅವರು ಬ್ರಿಟಿಷರ ಸೇನೆಗೆ ಲಕ್ಷಾಂತರ ಮಂದಿಯನ್ನು ಸೇರ್ಪಡೆ ಮಾಡಿದ್ದರು. ನಾವು ಅವರಿಗಾಗಿ ಕಾರ್ಯನಿರ್ವಹಿಸಬೇಕು ಎಂದು ಬಹಿರಂಗ ಕರೆ ಕೊಟ್ಟಿದ್ದರು. ನಾನು ಬ್ರಿಟಿಷರ ಸೇನೆಗೆ ಒಂದು ಲಕ್ಷ ಮಂದಿಯನ್ನು ಸೇರ್ಪಡೆ ಮಾಡಿದ್ದೆ ಎಂದು ಅವರೇ ಬರೆದುಕೊಂಡಿದ್ದಾರೆ. ಇತಿಹಾಸದಲ್ಲಿರುವ ಪ್ರತಿಯೊಂದು ದಾಖಲೆಯು ಸಾವರ್ಕರ್ ದೇಶಕ್ಕಾಗಿ ಹೋರಾಡಿಲ್ಲ ಎಂಬುದನ್ನು ತೋರಿಸುತ್ತದೆ. ಸಾವರ್ಕರ್ ನಿಜವಾದ ದೇಶಪ್ರೇಮಿಯಾಗಿದ್ದರೆ ಕ್ವಿಟ್ ಇಂಡಿಯಾ ಚಳವಳಿಯನ್ನು ಯಾಕೆ ಬೆಂಬಲಿಸಲಿಲ್ಲ. ಸಾಕಷ್ಟು ಕಡೆ ಮುಸ್ಲಿಂ ಲೀಗ್ ಜೊತೆ ಸೇರ್ಪಡೆಯಾಗಿ ಸರ್ಕಾರ ನಡೆಸಿದ ಇತಿಹಾಸ ಇದೆ ಎಂದು ಪ್ರಿಯಾಂಕ್​ ಖರ್ಗೆ ಆರೋಪಿಸಿದರು.

ಇದನ್ನೂ ಓದಿ: ಸಾವರ್ಕರ್ ಫ್ಲೆಕ್ಸ್ ಗಾಳಿಗೆ ಹರಿದರೂ ಕಿಡಿಗೇಡಿಗಳ ಕೃತ್ಯ ಎಂದ ಬಿಜೆಪಿ ಕಾರ್ಯಕರ್ತರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.