ಬೆಂಗಳೂರು: ಕೊರಾನಾದಿಂದಾಗಿ ಕಲುಬುರಗಿಗೆ ಸದ್ಯಕ್ಕೆ ಬರೋಲ್ಲಾ, ಈ ಕೊರೊನಾ ಖಾಯಿಲೆ ಮುಗೀಲಿ ಆಮೇಲೆ ಬರ್ತೇನೆ ಎಂದು ವಿಧಾನ ಪರಿಷತ್ನಲ್ಲಿ ಸದಸ್ಯರೊಬ್ಬರ ಪ್ರಶ್ನೆಗೆ ರಮೇಶ್ ಜಾರಕಿಹೊಳಿ ಉತ್ತರಿಸಿದ್ದಾರೆ.
ಬಿಜೆಪಿ ಸದಸ್ಯ ತಿಪ್ಪಣ್ಣ ಕಮಕನೂರ ಕಲಬುರಗಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಸ್ಥಳ ಪರಿಶೀಲನೆ ಮಾಡುವಂತೆ ಆಹ್ವಾನ ನೀಡಿದರು. ಈ ವೇಳೆ ಕೊಂಚ ಆತಂಕದಿಂದಲೇ ಉತ್ತರಿಸಿದ ಸಚಿವರು ಕೊರೊನಾ ಎಲ್ಲಾ ಮುಗೀಲಿ ಆಮೇಲೆ ಬಂದು ಸ್ಥಳ ಭೇಟಿ ಮಾಡಿ ಪರಿಶೀಲಿಸುವೆ ಎಂದರು.
ಈ ಮೂಲಕ ಕೊರೊನಾ ವೈರಸ್ಗೆ ಹೆದರಿ ಕಲ್ಬುರ್ಗಿಗೆ ಸದ್ಯಕ್ಕೆ ಬರಲ್ಲ ಎಂಬುದನ್ನು ರಮೇಶ್ ಜಾರಕಿಹೊಳಿ ನೇರವಾಗಿ ಸದನದಲ್ಲಿಯೇ ಹೇಳಿದ್ದಾರೆ. ಈ ಹಿಂದೆ ಕೊರೊನಾಕ್ಕೆ ಭಯ ಗೊಂಡು ಕಲ್ಬುರ್ಗಿಗೆ ಹೋಗಲ್ಲ ಎಂದಿದ್ದ ಡಿಸಿಎಂ ಗೋವಿಂದ ಕಾರಜೋಳ ದೊಡ್ಡ ಮಟ್ಟದಲ್ಲಿ ಮುಜುಗರಕ್ಕೆ ಒಳಗಾಗಿದ್ದರು. ಈ ಬೆನ್ನಲ್ಲೇ ರಮೇಶ್ ಜಾರಕಿಹೊಳಿಯಿಂದಲೂ ಇದೇ ಉತ್ತರ ಬಂದಿದ್ದು ವಿಪರ್ಯಾಸ.