ETV Bharat / state

ರಾಜಕಾಲುವೆ ಒತ್ತುವರಿ: 714 ಕಟ್ಟಡಗಳ ತೆರವಿಗೆ ಪಟ್ಟಿ ಸಿದ್ಧಪಡಿಸಿದ ಬಿಬಿಎಂಪಿ...! - ಬೆಂಗಳೂರಿನಲ್ಲಿ ಭಾರಿ ಮಳೆ,

ಬೆಂಗಳೂರು ನಗರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿ ಸುಮಾರು 714 ಕಟ್ಟಡಗಳು ತಲೆ ಎತ್ತಿದ್ದು, ಒತ್ತುವರಿ ಜಾಗ ತೆರವುಗೊಳಿಸಲು ಬಿಬಿಎಂಪಿ ಮತ್ತೆ ಪಟ್ಟಿ ಸಿದ್ಧಪಡಿಸಿದೆ.

714 ಕಟ್ಟಡಗಳು ತೆರವಿಗೆ ಪಟ್ಟಿ ಸಿದ್ಧಪಡಿಸಿದ ಬಿಬಿಎಂಪಿ

author img

By

Published : Nov 24, 2021, 10:31 AM IST

ಬೆಂಗಳೂರು: ನಗರದಲ್ಲಿ ಎರಡ್ಮೂರು ತಾಸು ಮಳೆ ಸುರಿದರೂ ತಗ್ಗುಪ್ರದೇಶಗಳು ಕೆರೆಯಂತಾಗುತ್ತವೆ. ರಸ್ತೆಗಳು ತುಂಬುತ್ತವೆ. ಜನಜೀವನವೇ ಅಸ್ತವ್ಯಸ್ತವಾಗಿ ಪ್ರವಾಹದ ರೀತಿ ಗೋಚರಿಸುತ್ತದೆ. ಆದರೆ, ಹೀಗಾದಾಗೆಲ್ಲ ಬಿಬಿಎಂಪಿ ರಾಜಕಾಲುವೆ ಒತ್ತುವರಿಯ ರಾಗ ಎಳೆದು, ಮಳೆ ನಿಂತಾಗ ಮತ್ತೆ ಮರೆತುಬಿಡುವುದು ಸಾಮಾನ್ಯವಾಗಿದೆ.

RajaKaluve Encroachment, Bangalore RajaKaluve Encroachment, BBMP news, Bengaluru heavy rain, RajaKaluve Encroachment news, ರಾಜಕಾಲುವೆ ಅತಿಕ್ರಮಣ, ಬೆಂಗಳೂರು ರಾಜಕಾಲುವೆ ಅತಿಕ್ರಮಣ, ಬಿಬಿಎಂಪಿ ಸುದ್ದಿ, ಬೆಂಗಳೂರಿನಲ್ಲಿ ಭಾರಿ ಮಳೆ, ರಾಜಕಾಲುವೆ ಒತ್ತುವರಿ ಸುದ್ದಿ,
714 ಕಟ್ಟಡಗಳು ತೆರವಿಗೆ ಪಟ್ಟಿ ಸಿದ್ಧಪಡಿಸಿದ ಬಿಬಿಎಂಪಿ

ಕಟ್ಟಡದ ನಕ್ಷೆ ಮಂಜೂರು ಮಾಡುವಾಗಲೂ, ನಿಯಮ ಉಲ್ಲಂಘನೆಯಾದಾಗಲೂ ಕ್ರಮ ಕೈಗೊಳ್ಳದೇ ಅಧಿಕಾರಿಗಳು ಮೌನ ವಹಿಸಿದ ಕಾರಣ ಇಂದು ನಿವಾಸಿಗಳು ಪರದಾಡಬೇಕಾಗಿದೆ. ಇದೀಗ ಕಳೆದ ವಾರದಲ್ಲಿ ಸುರಿದ ಧಾರಾಕಾರ ಮಳೆಗೆ ಯಲಹಂಕ ವಲಯ ತತ್ತರಿಸಿದೆ. ಮತ್ತೆ‌ ರಾಜಕಾಲುವೆ ಒತ್ತುವರಿಯ ವಿಚಾರ ಮುನ್ನೆಲೆಗೆ ಬಂದಿದೆ.

ಓದಿ: Big Ghol Fish: ಉಡುಪಿ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಬೃಹತ್​ ಆಕಾರದ ಗೋಳಿ ಮೀನು!

ರಾಜಕಾಲುವೆ ಒತ್ತುವರಿ ಮಾಡಿ ಅಕ್ರಮವಾಗಿ ನಿರ್ಮಾಣ ಮಾಡಿರುವ ಕಟ್ಟಡಗಳ ಬಗ್ಗೆ ಬಿಬಿಎಂಪಿ ಚೀಫ್ ಇಂಜಿನಿಯರ್ (ಮಳೆನೀರುಗಾಲುವೆ ವಿಭಾಗ) ದಿಂದ ಪಟ್ಟಿ ಸಿದ್ಧಪಡಿಸಲಾಗಿದೆ. ಆ ಪ್ರಕಾರ 714 ಕಟ್ಟಡಗಳು ರಾಜಕಾಲುವೆಯ ಜಾಗದಲ್ಲಿ ಕಟ್ಟಡ ನಿರ್ಮಿಸಿದ್ದು, ತೆರವು ಮಾಡಲು ಬಾಕಿ ಇದೆ ಎಂದು ಉಲ್ಲೇಖಿಸಲಾಗಿದೆ.

ಬಿಬಿಎಂಪಿಯ ಪೂರ್ವವಲಯದಲ್ಲಿ 110 ಕಟ್ಟಡ, ಪಶ್ಚಿಮ ವಲಯದಲ್ಲಿ 59, ದಕ್ಷಿಣ ವಲಯದಲ್ಲಿ 20, ಕೋರಮಂಗಲ ವ್ಯಾಲಿ ವಲಯ 3 ಕಟ್ಟಡ, ಯಲಹಂಕ 103, ಮಹಾದೇವಪುರ 184 ವಲಯ, ಬೊಮ್ಮನಹಳ್ಳಿ 92 ಕಟ್ಟಡಗಳು, ಆರ್ ಆರ್ ನಗರ 9 ಕಟ್ಟಡಗಳು, ದಾಸರಹಳ್ಳಿ 134 ಕಟ್ಟಡಗಳು ರಾಜಕಾಲುವೆ ಜಾಗವನ್ನು ಒತ್ತುವರಿ ಮಾಡಿವೆ.

ಓದಿ: ಬೆಳ್ಳಂಬೆಳಗ್ಗೆ ಎಸಿಬಿ ಬಿಗ್ ಶಾಕ್: ರಾಜ್ಯದೆಲ್ಲೆಡೆ ಏಕಕಾಲಕ್ಕೆ 60 ಕಡೆ ದಾಳಿ

ಆರಂಭದಲ್ಲಿ 2,626 ಕಟ್ಟಡಗಳು ಒತ್ತುವರಿ ಮಾಡಿಕೊಂಡಿದ್ದವು. ಈ ಪೈಕಿ 2016-17 ರ ಸಮೀಕ್ಷೆ ವೇಳೆಗೆ 426 ಕಟ್ಟಡಗಳನ್ನು ತೆರವು ಮಾಡಲಾಗಿತ್ತು. 2018-19 ರ ವೇಳೆಗೆ 1,484 ಕಟ್ಟಡಗಳ ಒತ್ತುವರಿ ತೆರವು ಮಾಡಲಾಗಿದ್ದು, ಸದ್ಯ 714 ಕಟ್ಟಡಗಳ ಒತ್ತುವರಿ ತೆರವು ಬಾಕಿ ಇದೆ ಎಂದು ಬಿಬಿಎಂಪಿ ಪಟ್ಟಿ ಸಿದ್ಧಪಡಿಸಿದೆ.

ರಾಜಕಾಲುವೆ ಒತ್ತುವರಿ ತೆರವು ವೇಳೆಯೂ ಕೇವಲ ಬಡ, ಮಧ್ಯಮ ವರ್ಗದ ಜನರ ಮನೆಗಳನ್ನು ಕೆಡವಿ ಪ್ರಭಾವಿಗಳ ಕಟ್ಟಡಗಳಿಗೆ ವಿನಾಯಿತಿ ಕೊಡುವ ಬಗ್ಗೆಯೂ ಬಿಬಿಎಂಪಿ ವಿರುದ್ಧ ಸಾಕಷ್ಟು ಆರೋಪಗಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.