ಬೆಂಗಳೂರು: ಇಂದು ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಿದ್ದು, ದಕ್ಷಿಣ ಒಳನಾಡಿನಲ್ಲಿ ಕೆಲವು ಕಡೆ ಮಾತ್ರ ಮಳೆಯಾಗಿದೆ. ಹಳಿಯಾಳದಲ್ಲಿ 5 ಸೆಂಮೀ, ದಾರವಾಡದಲ್ಲಿ 5 ಸೆಂಮೀ, ಬೈಲಹೊಂಗಲದಲ್ಲಿ 4 ಸೆಂಮೀ, ಗದಗದಲ್ಲಿ 2 ಸೆಂಮೀ, ಶೃಂಗೇರಿಯಲ್ಲಿ 2 ಸೆಂಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹವಾಮಾನ ಮುನ್ಸೂಚನೆ ವಿಭಾಗದ ನಿರ್ದೇಶಕ ಸಿ.ಎಸ್. ಪಾಟೀಲ ಮಾತನಾಡಿ, ಉತ್ತರ ಒಳನಾಡಿನಲ್ಲಿ ಹಾಗೂ ಉ. ಒಳನಾಡಿನಿಂದ ಕೇರಳದವರೆಗೆ ದಟ್ಟ ಮೋಡ ಕವಿದಿದೆ. ಇದರ ಪರಿಣಾಮದಿಂದ ಕರಾವಳಿ ಜಿಲ್ಲೆಗಳಲ್ಲಿ ಮೇ 7 ರಿಂದ ಮೇ 11 ರವರೆಗೆ ಎಲ್ಲ ಕಡೆಗಳಲ್ಲಿ ಮಳೆಯಾಗಲಿದೆ. ಉ. ಒಳನಾಡಿನಲ್ಲಿ ಮೇ 7 ರಿಂದ ಮೇ 11 ರವರೆಗೆ ಕೆಲವು ಕಡೆ ಮಳೆಯಾಗಲಿದೆ.
ದಕ್ಷಿಣ ಒಳನಾಡಿನಲ್ಲಿ ಮೇ 7 ರಿಂದ 9 ರವರೆಗೆ ಕೆಲವು ಕಡೆ ಹಾಗೂ ಮೇ 11 ರವರೆಗೆ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳವರೆಗೆ ಗರಿಷ್ಠ ಉಷ್ಣಾಂಶ 34, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಂಟಿಗ್ರೇಡ್ ಇರುವ ಸಾಧ್ಯತೆ ಇದೆ ಎಂದರು.