ಬೆಂಗಳೂರು : ಉದ್ಯಾನ ನಗರಿಯಲ್ಲಿ ಇಂದೂ ಕೂಡ ಮಳೆ ಮುಂದುವರೆದಿದ್ದು, ನಗರದ ಬಹತೇಕ ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ.
ಲಾಲ್ಬಾಗ್ ಪ್ರದೇಶದಲ್ಲಿ ರಸ್ತೆಗಳು ಜಲಾವೃತವಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಇನ್ನುಳಿದಂತೆ ಹೆಬ್ಬಾಳ, ಯಶವಂತಪುರ, ಶೇಷಾದ್ರಿಪುರಂ, ಮೆಜೆಸ್ಟಿಕ್, ಮಲ್ಲೇಶ್ವರಂ ಹಾಗೂ ಜಯನಗರದಲ್ಲಿಯೂ ಧಾರಾಕಾರ ಮಳೆಯಾಗಿದೆ. ಇದುವರೆಗೆ ಮಳೆಯಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.
ನಿತ್ಯ ಸಂಜೆ ಹೊತ್ತು ಮಳೆಯಾಗುತ್ತಿರುವುದರಿಂದ ಕೆಲಸ ಮುಗಿಸಿ ಕಚೇರಿಗಳಿಂದ ಮನೆಗೆ ತೆರಳಲು ಜನ ಹರಸಾಹಸಪಡುವಂತಾಗಿದೆ. ಇನ್ನು, ಟ್ರಾಫಿಕ್ ಜಾಮ್ನಿಂದಾಗಿ ವಾಹನ ಸವಾರರು ಗಂಟೆಗಟ್ಟಲೆ ಕಾಯಬೇಕಾಗಿದೆ. ಜೊತೆಗೆ, ವೀಕೆಂಡ್, ಹಬ್ಬ ಅಂತ ಊರಿಗೆ ತೆರಳುತ್ತಿರುವವರಿಗೂ ವರುಣ ಅಡ್ಡಿಪಡಿಸಿದ್ದಾನೆ.