ETV Bharat / state

ಬಿಬಿಎಂಪಿ ನೌಕರರ ರಜಾ ದಿನಗಳಿಗೆ ಕೊಕ್ಕೆ: ಮಳೆ ತುರ್ತು ಪರಿಸ್ಥಿತಿ ಎದುರಿಸಲು ಸಿದ್ಧವಾಗುವಂತೆ ಸೂಚನೆ

author img

By

Published : Oct 23, 2020, 8:32 PM IST

ಕೋವಿಡ್ ನಿರ್ವಹಣೆ, ಮಳೆ ಅನಾಹುತ ಮುಂತಾದ ಮುಂಜಾಗ್ರತಾ ಕ್ರಮಗಳಿಗೆ ಪ್ರಾಮುಖ್ಯತೆ ಕೊಡಬೇಕಾಗಿರುವುದರಿಂದ ರಜೆ ತೆಗೆದುಕೊಳ್ಳಬಾರದು, ಅನುಮತಿ ಪಡೆಯದೇ ನೌಕರರು ಕೇಂದ್ರ ಸ್ಥಾನವನ್ನು ಬಿಟ್ಟು ತೆರಳಬಾರದು ಎಂದು ಮೊಬೈಲ್ ಫೋನ್ ಅನ್ನು ಕಡ್ಡಾಯವಾಗಿ ಸಕ್ರಿಯವಾಗಿ ಇಟ್ಟುಕೊಳ್ಳಬೇಕು ಎಂದು ಬಿಬಿಎಂಪಿ ಸೂಚಿಸಿದೆ.

rain-effect-bbmp-employees-holidays-canceled
ಬಿಬಿಎಂಪಿ ನೌಕರರ ರಜಾ ದಿನಗಳಿಗೆ ಕೊಕ್ಕೆ, ಮಳೆ ತುರ್ತು ಪರಿಸ್ಥಿತಿಗೆ ಸಿದ್ಧವಿರಲು ಸೂಚನೆ..

ಬೆಂಗಳೂರು: ನಗರದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಆದ ಕಾರಣ ಹಬ್ಬ, ಎರಡನೇ ಶನಿವಾರ, ಕನ್ನಡ ರಾಜ್ಯೋತ್ಸವ ಸೇರಿದಂತೆ ಸಾಲು ಸಾಲು ರಜೆಗಳನ್ನು ಬಿಬಿಎಂಪಿ ರದ್ದು ಮಾಡಿದೆ.

24-010-2020 ರಿಂದ 2-11-20 ರವರೆಗೆ ಸಾಲು ಸಾಲು ರಜೆಗಳು ಇವೆ. ಆದರೆ, ಕೋವಿಡ್ ನಿರ್ವಹಣೆ, ಮಳೆ ಅನಾಹುತ ಮುಂತಾದ ಮುಂಜಾಗೃತಾ ಕ್ರಮಗಳಿಗೆ ಪ್ರಾಮುಖ್ಯತೆ ಕೊಡೆಬೇಕಾಗಿರುವುದರಿಂದ ರಜೆ ತೆಗೆದುಕೊಳ್ಳಬಾರದು, ಅನುಮತಿ ಪಡೆಯದೇ ನೌಕರರು ಕೇಂದ್ರ ಸ್ಥಾನ ಬಿಟ್ಟು ತೆರಳಬಾರದು ಎಂದು, ಮೊಬೈಲ್ ಫೋನ್ ಅನ್ನು ಕಡ್ಡಾಯವಾಗಿ ಸಕ್ರಿಯವಾಗಿ ಇಟ್ಟುಕೊಳ್ಳಬೇಕು ಎಂದು ಬಿಬಿಎಂಪಿ ಸೂಚಿಸಿದೆ.

ಇದನ್ನು ಓದಿ: ಹೊಸಕೆರೆಹಳ್ಳಿಯಲ್ಲಿ ಎನ್​ಡಿಆರ್​ಎಫ್ ತಂಡ, ಬೋಟ್ ಸಹಿತ 20 ಸಿಬ್ಬಂದಿ ನಿಯೋಜನೆ

ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣೆ ಮತ್ತು ಶಿಕ್ಷಕರ ಚುನಾವಣೆಯಲ್ಲಿ ಕರ್ತವ್ಯದಲ್ಲಿರುವ ಸಿಬ್ಬಂದಿ ವರ್ಗದವರಿಗೆ ರಜಾ ದಿನಗಳಲ್ಲಿಯೂ ಕೆಲಸ ನಿರ್ವಹಿಸುವಂತೆ ಸುತ್ತೋಲೆ ಹೊರಡಿಸಿದೆ.

ಇದನ್ನು ಓದಿ: ಹೊಳೆಯಂತಾದ 'ಹೊಸಕೆರೆ'ಹಳ್ಳಿ: ವರುಣನ ಆರ್ಭಟಕ್ಕೆ ಹೊಳೆಯಾದ ರಸ್ತೆಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.