ಬೆಂಗಳೂರು: ಕೊರೊನಾ ಮಹಾಮಾರಿ ವ್ಯಾಪಕವಾಗಿ ಹಬ್ಬುತ್ತಿದ್ದು, ಸದ್ಯ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ವಲಸಿಗರು ಮನೆಯಲ್ಲೇ ಕ್ವಾರಂಟೈನ್ ಆಗಬೇಕು ಎಂದು ಆರೋಗ್ಯ ಇಲಾಖೆ ಹಾಗೂ ಸರ್ಕಾರ ಸೂಚನೆ ನೀಡಿದೆ.
ಆದರೆ 14 ದಿನಗಳ ಕಾಲ ನಿಯಮವನ್ನ ಪಾಲನೆ ಮಾಡದೆ ಬೆಂಗಳೂರಲ್ಲಿ ಸುಮಾರು 915 ಮಂದಿ ಆರೋಗ್ಯ ಇಲಾಖಾಧಿಕಾರಿಗಳ ಕಣ್ತಪ್ಪಿಸಿ ಓಡಾಟ ನಡೆಸಿದ್ದಾರೆ. ಹೀಗಾಗಿ 915 ಮಂದಿಯ ಮೇಲೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
ಆರೋಗ್ಯ ಇಲಾಖೆ ಹಾಗೂ ಸರ್ಕಾರದ ನಿಯಮದ ಪ್ರಕಾರ ಸೋಂಕು ಇರುವ ವ್ಯಕ್ತಿಗಳ ಜೊತೆ ಸಂಪರ್ಕ ಹೊಂದಿದವರನ್ನ ಮೊದಲು ಆರೋಗ್ಯ ಇಲಾಖೆಯವರೇ ಪತ್ತೆ ಹಚ್ಚಿ ಹೋಟೆಲ್ ಕ್ವಾರಂಟೈನ್ ಮಾಡುತ್ತಿದ್ದರು. ಆದರೆ ಸದ್ಯ ಅಪಾಯದ ವರ್ಗದಲ್ಲಿರುವವರನ್ನ ಹೋಟೆಲ್ ಕ್ವಾರಂಟೈನ್ ಒಳಪಡಿಸಿ ಉಳಿದವರನ್ನ ಮನೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಇದೀಗ ನಿಯಮ ಉಲ್ಲಂಘಿಸಿದ್ದು, ಅಂತವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.