ಬೆಂಗಳೂರು: ಇಂದಿಗೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ ಒಂದು ವರ್ಷವಾಗಿದೆ. ಪುನೀತ್ ಇನ್ನಿಲ್ಲ ಎಂಬ ಸುದ್ದಿಗೆ ಕರುನಾಡೇ ಸ್ತಬ್ದವಾಗಿತ್ತು. ಪವರ್ ಸ್ಟಾರ್ ಮೊದಲನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಸಮಾಧಿಗೆ ವಿಭಿನ್ನ ಬಗೆಯ ಹೂವುಗಳಿಂದ ಅಲಂಕಾರ ಮಾಡಲಾಗಿದೆ. ಅಪ್ಪು ನೆನಪಲ್ಲಿ ಹಲವು ವಿಶೇಷ ಕಾರ್ಯಕ್ರಮಗಳ ನಡೆಯಲಿವೆ.
ಈಗಾಗಲೇ ಕಂಠೀರವ ಸ್ಟುಡಿಯೋದ ಪುನೀತ್ ಸಮಾಧಿ ಬಳಿ ಸಂಗೀತ ನಿರ್ದೇಶಕ ಸಾಧು ಕೋಕಿಲ ನೇತೃತ್ವದಲ್ಲಿ ನಿನ್ನೆ ರಾತ್ರಿ 12ಯಿಂದ ಇಂದು ರಾತ್ರಿ 12ಗಂಟೆಯವರೆಗೂ ಸಂಗೀತ ಸುಧೆ ನಡೆಯುತ್ತಿದೆ. ಬೆಳಗ್ಗೆ 9.30ಕ್ಕೆ ಗಂಟೆಗೆ ಕುಟುಂಬ ಸದಸ್ಯರು ಆಗಮಿಸಲಿದ್ದಾರೆ. ಶಿವರಾಜ್ ಕುಮಾರ್, ಆಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ದೊಡ್ಮನೆ ಕುಟುಂಬದವರು ಪೂಜೆ ಸಲ್ಲಿಸಲಿದ್ದಾರೆ.
ಕಂಠೀರವ ಸ್ಟುಡಿಯೋದ ಪುನೀತ್ ಸಮಾಧಿ ಬಳಿ ಬೆಳಗ್ಗೆಯಿಂದಲೇ ಅಪ್ಪು ಅಭಿಮಾನಿಗಳ ದಂಡೇ ಹರಿದುಬರುತ್ತಿದೆ. ಸುಮಿತ್ರಾ ಎಂಬ ಮಹಿಳಾ ಅಜ್ಜಿಯಿಂದ ಕಡ್ಲೇಪುರಿ ಹಾರ ಮಾಡಿದ್ದು, 15 ದಿನಗಳ ಕಾಲ ಈ ಕಡ್ಲೇಪುರ ಹಾರವನ್ನ ಮಾಡಿದ್ದಾರೆ. ಇದಲ್ಲದೆ, ಕಂಠೀರವ ಸ್ಟುಡಿಯೋದಲ್ಲಿ ಹಲವು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ : ಪುನೀತ್ ರಾಜ್‌ಕುಮಾರ್ ಅಗಲಿಕೆಗಿಂದು ಒಂದು ವರ್ಷ: ಆ ಕರಾಳ ದಿನ ಆಗಿದ್ದೇನು?