ETV Bharat / state

ಗುಂಡಿನ ಮತ್ತೆ ಗಮ್ಮತ್ತು, ಅಳತೆ ಮೀರಿದರೆ ಆಪತ್ತು... ಹೀಗಿದೆ ನೊಡಿ ಕುಡುಕರ ವಿಪತ್ತು!

ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡಿರುವ ಜತೆಗೆ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪೊಲೀಸ್ ಸಿಬ್ಬಂದಿಗಳ ಮೇಲೆ ಕೂಗಾಡಿ, ಕಪಾಳಮೋಕ್ಷ ಮಾಡಿ ಯುವಕರಿಬ್ಬರು ಜೈಲು ಸೇರಿದ್ದಾರೆ.

ಮದ್ಯಪಾನ ಮಾಡಿ ವಾಹನ ಚಲಾಹಿಸಿದಲ್ಲದೆ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಯುವಕರು
author img

By

Published : May 9, 2019, 3:26 AM IST

ಬೆಂಗಳೂರು : ಕುಡಿದ ಮತ್ತಿನಲ್ಲಿ ಟ್ರಾಫಿಕ್ ಪೊಲೀಸರಿಗೆ ಬಾಯಿಗೆ ಬಂದ ಹಾಗೇ ಬೈದಿದಲ್ಲದೇ ಶರ್ಟ್ ಹರಿದು ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕೆಲಸಕ್ಕೆಂದು ಸಿಲಿಕಾನ್ ಸಿಟಿಗೆ ಬಂದು ತಾವಾಯ್ತು ತಮ್ಮ ಕೆಲಸವಾಯ್ತು ಅಂತಿರದೆ, ಮದ್ಯಪಾನ ಮಾಡಿ ವಾಹನ ಚಲಾಯಿಸಿರುವ ಜತೆಗೆ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪೊಲೀಸ್ ಸಿಬ್ಬಂದಿಗಳ ಮೇಲೆ ಕೂಗಾಡಿ, ಕಪಾಳಮೋಕ್ಷ ಮಾಡಿ ಯುವಕರಿಬ್ಬರು ಜೈಲು ಸೇರಿದ್ದಾರೆ.

ಹರಿಯಾಣ ಮತ್ತು ಕೋಲ್ಕತ್ತಾ ಮೂಲದವರಾದ ಆದಿತ್ಯ ಮತ್ತು ರಾಹುಲ್ ತ್ರಿಪಾಠಿ ಎಂಬುವವರು ಕಂಠಪೂರ್ತಿ ಕುಡಿದು ಗಲಾಟೆ ಮಾಡಿಕೊಂಡಿದ್ದಾರೆ. ಇಂಟರ್ನ್​ಶಿಪ್ ಮಾಡಲೆಂದು ಮಹಾನಗರಕ್ಕೆ ಬಂದಿದ್ದ ಯುವಕರು ಕಳೆದ ಶನಿವಾರ ರಾತ್ರಿ ಕಂಠಪೂರ್ತಿ ಕುಡಿದು ಸಿಲ್ಕ್ ಬೋರ್ಡ್​​ನಿಂದ ಮಾರತ್ತಹಳ್ಳಿ ರಸ್ತೆಯಲ್ಲಿ ಬರುವಾಗ ಹೆಚ್​​ಎಸ್ಆ​​ರ್ ಸಂಚಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಮದ್ಯಪಾನ ಮಾಡಿ ವಾಹನ ಚಲಾಹಿಸಿದಲ್ಲದೆ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಯುವಕರು

ತೆಪ್ಪಗೆ ಗಾಡಿಬಿಟ್ಟು ನಂತರ ದಂಡ ಕಟ್ಟಿದ್ದರೆ ಸರಿಹೋಗಿತ್ತು‌, ಆದರೆ ಮದ್ಯದ ಅಮಲಿನಲ್ಲಿದ್ದ ಯುವಕರು ನಡು ರಸ್ತೆಯಲ್ಲೇ ಪೊಲೀಸರ ಬಟ್ಟೆ ಹರಿದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಂತರ ಇವರನ್ನು ಬೆಳ್ಳಂದೂರು ಪೊಲೀಸ್ ಠಾಣೆಗೆ ಕರೆತಂದಾಗ ಅಲ್ಲು ನಾವು ಕಮಿಷನರ್ ಸಂಬಂಧಿಗಳೆಂದು ಕೂಗಾಡಿ ಪೊಲೀಸರಿಗೆ ಕಪಾಳ ಮೋಕ್ಷ ಮಾಡಿದ್ದರಿಂದ ಯುವಕರ ವಿರುದ್ಧ ಕಾನೂನು ಕ್ರಮ ಕೈಗೊಂಡು ಜೈಲಿಗೆ ಕಳಿಹಿಸಿದ್ದಾರೆ.

ವೈಟ್ ಫಿಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ಮಾತನಾಡಿ ಆದಿತ್ಯ ಹಾಗೂ ರಾಹುಲ್ ತ್ರಿಪಾಠಿ ಮೂಲತಃ ಕೋಲ್ಕತ್ತಾ ಹಾಗೂ ಹರಿಯಾಣದವರು, ಲ್ಯಾಂಡ್ ಮಾರ್ಕ್ ಕಾಲೇಜ್​​ನಲ್ಲಿ ಇಂಟರ್ನ್​ಶಿಪ್ ಮಾಡುತ್ತಿದ್ದಾರೆ, ಕಳೆದ ಶನಿವಾರ ರಾತ್ರಿ ಕಂಠಪೂರ್ತಿ ಕುಡಿದು ಸಿಲ್ಕ್ ಬೋರ್ಡ್​ನಿಂದ ಮಾರತ್ತಹಳ್ಳಿ ರಸ್ತೆಯಲ್ಲಿ ಬರುವಾಗ ಹೆಚ್​​ಎಸ್​​ಆರ್ ಸಂಚಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದು ಪೊಲೀಸರ ಜೊತೆಗೆ ಕಿರಿಕ್ ಮಾಡಿಕೊಂಡಿದ್ದಾರೆ.

ಠಾಣೆಗೆ ಕರೆದುಕೊಂಡು ಬಂದಾಗ ನಾವು ಕಮಿಷನರ್ ಮಕ್ಕಳು ಎಂದು ಸುಳ್ಳು ಹೇಳಿದ್ದಲ್ಲದೆ, ಪೊಲೀಸ್ ಪೇದೆಯ ಬಟ್ಟೆಯನ್ನು ಹರಿದಿದ್ದಾರೆ. ಅವಾಚ್ಯ ಪದಗಳಿಂದ ಮಾತಾನಾಡಿ, ಕೆಲಸದಿಂದ ತೆಗೆದುಹಾಕುವೆ ನೋಡಿ ಎಂದು ಪೊಲೀಸರಿಗೆ ಬೆದರಿಕೆ‌ ಹಾಕಿದ್ದಾರೆ. ಯುವಕರ ರಂಪಾಟದ ದೃಶ್ಯಗಳನ್ನು‌ ನ್ಯಾಯಧೀಶರಿಗೆ ಮತ್ತು ಕಾಲೇಜಿನ ಆಡಳಿತ ಮಂಡಳಿಗೆ ತೋರಿಸಿ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳವಂತೆ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.

Intro:ಕೆಲಸಕ್ಕೆಂದು ಬೆಂಗಳೂರಿಗೆ ಬಂದು,ಕುಡಿದ ಮತ್ತಿ‍ಯಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿ ಸ್ಲೇಟ್ ಹಿಡಿದು ಕೃಷ್ಣನ ಜನ್ಮಸ್ಥಾನ ಸೇರಿದ ಯುವಕರು.

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ ಎಂದು ಎಷ್ಟೇ ಹೇಳಿದರು ನಮ್ಮ ಜನ ಕೇಳದೆ ಮದ್ಯಪಾನ ಮಾಡಿ ವಾಹನ ಚಲಾಯಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಾಗ ಪೈನ್ ಕಟ್ಟುತ್ತಾರೆ. ಆದರೆ ಇಬ್ಬರು ಯುವಕರು ಕುಡಿದು ಗಾಡಿ ಹೋಡಿಸಿಕೊಂಡು ಬಂದು ಪೊಲೀಸರಿಗೆ ಸಿಕ್ಕಿಬಿದ್ದಾಗ ಅವರನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿ ಇದೀಗ ಜೈಲು ಸೇರಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿಗಳ ಮೇಲೆ ಕೂಗಾಡಿ, ಕಪಾಳ ಮೋಕ್ಷ ಮಾಡಿದ ತಪ್ಪಿಗೆ ಕೈಯಲ್ಲಿ ಸ್ಲೇಟ್ ಹಿಡಿದು ಕೃಷ್ಣನ ಜನ್ಮಸ್ಥಾನ ಸೇರಿರುವ ಇವರ ಹೆಸರು ಆಧಿತ್ಯ ಹಾಗೂ ರಾಹುಲ್ ತ್ರಿಪಾಠಿ. ಮೂಲತಹ ಕೊಲ್ಕತ್ತ ಹಾಗೂ ಹರಿಯಾಣ ಮೂಲದವರಾದ ಇವರು ಗೋವಾದ ಕಾಲೇಜು ಒಂದರಲ್ಲಿ ಪದವಿ ಮುಗಿಸಿ ಬೆಂಗಳೂರಿನಲ್ಲಿ ಇಂಟ್ರನ್ ಶಿಪ್ ಮಾಡಲೆಂದು ಬಂದಿದ್ದರು. ಹೀಗೆ ಬಂದವರು ಸುಮ್ಮನಿರದೆ ಕಳೆದ ಶನಿವಾರ ರಾತ್ರಿ ಕಂಠಪೂರ್ತಿ ಕುಡಿದು ಸಿಲ್ಕ್ ಬೋರ್ಡ್ ನಿಂದ ಮಾರತ್ತಹಳ್ಳಿ ರಸ್ತೆಯಲ್ಲಿ ಬರುವಾಗ ಹೆಚ್.ಎಸ್.ಆರ್. ಸಂಚಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಬೈಟ್: ಅಬ್ದುಲ್ ಅಹದ್, ಡಿಸಿಪಿ

ಪೊಲೀಸರ ಕೈಗೆ ಸಿಕ್ಕಬಿದ್ದ ಇವರು ತೆಪ್ಪಗೆ ಗಾಡಿಬಿಟ್ಟು ನಂತರ ಪೈನ್ ಕಟ್ಟಿದ್ದರೆ ಸರಿಹೋಗಿತ್ತು‌. ಆದರೆ ಮದ್ಯದ ಅಮಲಿನಲ್ಲಿದ್ದ ಇವರು ನಡು ರಸ್ತೆಯಲ್ಲೆ ಪೊಲೀಸರ ಬಟ್ಟೆ ಹರಿದು ಅವ್ಯಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಂತರ ಇವರನ್ನು ಬೆಳ್ಳಂದೂರು ಪೊಲೀಸ್ ಠಾಣೆಗೆ ಕರೆತಂದಾಗ ಅಲ್ಲು ನಾವು ಕಮಿಷನರ್ ಸಂಬಂದಿಗಳೆಂದು ಕೂಗಾಡಿ ಪೊಲೀಸರಿಗೆ ಕಪಾಳ ಮೋಕ್ಷ ಮಾಡಿದ್ದರಿಂದ ಇವರ ವಿರುದ್ದ ಕಾನೂನು ಕ್ರಮ ಕೈಗೊಂಡು ಜೈಲಿಗೆ ಕಳಿಹಿಸಿದ್ದಾರೆ.

Body:ವೈಟ್ ಫಿಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ಮಾತನಾಡಿ ಆಧಿತ್ಯ ಹಾಗೂ ರಾಹುಲ್ ತ್ರಿಪಾಠಿ. ಮೂಲತಹ ಕೊಲ್ಕತ್ತ ಹಾಗೂ ಹರಿಯಾಣ ಮೂಲದವರಾದ ಇವರು ಗೋವಾದ ಕಾಲೇಜು ಒಂದರಲ್ಲಿ ಪದವಿ ಮುಗಿಸಿ ಬೆಂಗಳೂರಿನಲ್ಲಿ ಇಂಟನ್ ಶಿಪ್ ಮಾಡಲೆಂದು ಬಂದಿದ್ದರು. ಹೀಗೆ ಬಂದವರು ಸುಮ್ಮನಿರದೆ ಕಳೆದ ಶನಿವಾರ ರಾತ್ರಿ ಕಂಠಪೂರ್ತಿ ಕುಡಿದು ಸಿಲ್ಕ್ ಬೋರ್ಡ್ ನಿಂದ ಮಾರತ್ತಹಳ್ಳಿ ರಸ್ತೆಯಲ್ಲಿ ಬರುವಾಗ ಹೆಚ್.ಎಸ್.ಆರ್. ಸಂಚಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದು ಪೊಲೀಸರ ಜೊತೆಗೆ ಕಿರಿಕ್ ಮಾಡಿದ್ದಾರೆ. ಠಾಣೆಗೆ ಕರೆದುಕೊಂಡು ಬಂದಾಗ ನಾವು ಕಮಿಷನರ್ ಮಕ್ಕಳು ಎಂದು ಸುಳ್ಳು ಹೇಳಿದ್ದಾರೆ.

ಇಬ್ಬಳೂರು ಜೆಂಕ್ ಷನ್ ಬಳಿ ಇರುವ ಲ್ಯಾಂಡ್ ಮಾರ್ಕ್ ಎಂಬ ಕಾಲೇಜ್ ನಲ್ಲಿ ಇಂಟನ್ ಶಿಪ್ ಮಾಡುತಿದ್ದಾರೆ.ಕುಡಿದ ಮತ್ತಿನಲ್ಲಿ ಪೊಲೀಸ್ ಪೇದೆಯ ಬಟ್ಟೆಯನ್ನು ಹರಿದಿದ್ದಾರೆ. ಟೆಬಲ್‌ ಮೇಲೆ ಅತ್ತಿ ರಂಪಾಟ ಮಾಡಿ ಪೊಲೀಸರನ್ನು ಅವಾಚ್ಯಾ ಪದಗಳಿಂದ ಮಾತಾನಾಡಿ, ನಿಮ್ಮನ್ನು‌ ಕೆಲಸದಿಂದ ತೆಗೆದುಹಾಕುತ್ತೆನೆ‌ ನೋಡಿ ಎಂದು ಬೆದರಿಕೆ‌ ಹಾಕಿದ್ದಾರೆ. ಈ ಎಲ್ಲಾ ದೃಶ್ಯ ಗಳನ್ನು‌ ನ್ಯಾಯದೀಶರಿಗೆ ಮತ್ತು ಕಾಲೇಜಿನ ಆಡಳಿತ ಮಂಡಳಿಗೆ ತೋರಿಸಿ ಇವರ ವಿರುದ್ಧ ಕಠಿನ ಕ್ರಮವನ್ನು ಕೈಗೊಳ್ಳಬೇಕು ಎಂದು ತಿಳಿಸಿದ್ದೆವೆ ಎಂದು ಹೇಳಿದರು.

Conclusion:ಕೆಲಸಕ್ಕೆಂದು ಬೆಂಗಳೂರಿಗೆ ಬಂದ ಯುವಕರು ತಾವಾಯ್ತು, ತಮ್ಮ ಕೆಲಸ ಆಯ್ತು ಅಂತಿರದೆ ಮೊಜು ಮಸ್ತಿ ಮಾಡಿಕೊಂಡು ತಮ್ಮ ದರ್ಪ ತೋರಿದ್ದರಿಂದ ತಮ್ಮ ಜೀವನವ‌ನ್ನೆ ನಾಶಮಾಡಿಕೊಂಡು ತಂದೆ ತಾಯಿ ಆಸೆಗೆ ತಣ್ಣೀರೆರಚಿದ್ದಾರೆ.

ಧರ್ಮರಾಜು ಎಂ ಕೆಆರ್ ಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.