ಬೆಂಗಳೂರು: ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದರೆ ಇದರ ನಡುವೆ 5.0 ಲಾಕ್ಡೌನ್ ಜಾರಿಯಲ್ಲಿದ್ದು ಕೆಲವೊಂದು ಚಟುವಟಿಕೆಗಳಿಗೆಗೆ ಕೇಂದ್ರ ಸರ್ಕಾರ ಅನುಮತಿಯನ್ನ ನೀಡಿದೆ. ಅದರಂತೆ ಸದ್ಯ ಸಾರಿಗೆ ಇಲಾಖೆಯು ವಾಹನ ಚಾಲಕರಿಗೆ ಬಹುಮುಖ್ಯ ಮಾಹಿತಿಯನ್ನು ನೀಡಿದೆ.
ಸಾರಿಗೆ ಇಲಾಖೆಯು ಎಲ್ಎಲ್ (ಕಲಿಕಾ ಪರವಾನಿಗೆ) ಹಾಗೂ ಡಿಎಲ್ (ಚಾಲನಾ ಪರವಾನಿಗೆಯನ್ನ) ನೀಡಲು ಮುಂದಾಗಿದ್ದು, ಕಂಟೈನ್ಮೆಂಟ್ ಝೋನ್ ಬಿಟ್ಟು ಉಳಿದ ಎಲ್ಲಾ ಕಡೆ ಚಟುವಟಿಕೆಯನ್ನ ಮುಂದುವರೆಸಲಿದೆ. ಜನರ ಓಡಾಟದಲ್ಲಿ ಕೊಂಚ ಮಟ್ಟಿಗೆ ಚೇತರಿಕೆ ಕಂಡಿದೆ. ಹೀಗಾಗಿ ಆರ್‌ಟಿಓ ಕಚೇರಿಗೆ ಕೂಡ ಜನರು ಆಗಮಿಸುತ್ತಿದ್ದಾರೆ.
ನಗರದ ಠಾಣೆಗಳಲ್ಲಿ ಲಾಕ್ಡೌನ್ ನಿಯಮ ಮೀರಿ ಓಡಾಡಿದ ವಾಹನಗಳು ಜಪ್ತಿಯಾಗಿದ್ದವು. ಆದರೆ ಸದ್ಯ ದಾಖಲಾತಿಗಳನ್ನ ನೀಡಿದರೆ ವಾಹನಗಳನ್ನ ಪಡೆಯಬಹುದೆಂದು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಸೂಚನೆ ನೀಡಿದೆ. ದಾಖಲಾತಿ ಇರುವವರು ಸರಿಯಾದ ದಾಖಲೆಗಳನ್ನು ನೀಡಿ ತಮ್ಮ ವಾಹನಗಳನ್ನ ಪಡೆದುಕೊಂಡು ಹೋಗಿದ್ದಾರೆ. ಆದರೆ ಸರಿಯಾದ ದಾಖಲಾತಿ ಇಲ್ಲದ ವಾಹನ ಸವಾರರು ಆರ್‌ಟಿಓ ಕಚೇರಿಗಳಿಗೆ ಬರ್ತಿದ್ದಾರೆ. ಎಲ್ಎಲ್ ಮತ್ತು ಡಿಎಲ್ ಮಾಡಿಸುವುದು, ಡ್ರೈವಿಂಗ್ ಟೆಸ್ಟ್ ಈ ಕಾರ್ಯವನ್ನ ಕೂಡ ಅಧಿಕಾರಿಗಳು ದಿನಕ್ಕೆ 50 ಜನರಿಗೆ ಮಾತ್ರ ಮಾಡಿಸ್ತಿದ್ದಾರೆ. ಡಿಎಲ್ ಅಪ್ಲಿಕೇಷನ್ ಅಥವಾ ದಾಖಲಾತಿಗಳನ್ನ ಮಾಡುವುದಿದ್ದರೂ ಸಹ 50ಕ್ಕಿಂತ ಹೆಚ್ಚು ಜನರನ್ನ ಆರ್‌ಟಿಓ ಕಚೇರಿಗೆ ಬಿಡುತ್ತಿಲ್ಲ.
