ETV Bharat / state

ಆರ್ನ ಸೇವಾ ಟ್ರಸ್ಟ್ ಉಚಿತ ಹಾಲು ವಿತರಣೆ.. ಆರೋಗ್ಯ ಲೆಕ್ಕಿಸದೆ ಮುಗಿಬಿದ್ದ ಜನ! - ಕೊರೊನಾ ಸೋಂಕು ಹಬ್ಬುವ ಭೀತಿ

ಹಾಲು, ಬಿಸ್ಕೆಟ್ ವಿತರಣೆ ವೇಳೆ ಜನರು ಒಬ್ಬರಿಗೊಬ್ಬರು ಅಂತರ ಕಾಯ್ದುಕೊಳ್ಳುವುದನ್ನು ಮರೆತು ಮುಗಿಬಿದ್ದಿದ್ದಾರೆ. ಇದರ ನಡುವೆಯೇ ಆರ್ನಾ ಸೇವಾ ಟ್ರಸ್ಟ್ ಅಧ್ಯಕ್ಷ ಕೇಶವ ರಾಜನ್ ಹಾಲು ವಿತರಿಸಿದ್ದಾರೆ.

gathering
gathering
author img

By

Published : Apr 3, 2020, 3:21 PM IST

ಬೆಂಗಳೂರು : ಯಲಹಂಕ ಕ್ಷೇತ್ರದ ಮಾರುತಿನಗರದಲ್ಲಿ ಉಚಿತವಾಗಿ ಹಾಲು ಮತ್ತು ಬಿಸ್ಕೆಟ್ ವಿತರಿಸಲಾಗಿದೆ. ಆದರೆ, ಸಾಮಾಜಿಕ ಸೇವೆಯಾಗಿ ಉತ್ತಮ ಕೆಲಸ ಮಾಡಿರುವ ಆರ್ನ ಸೇವಾ ಟ್ರಸ್ಟ್ ಜನರಲ್ಲಿ ಕೋವಿಡ್-19 ಎಚ್ಚರಿಕೆ ಮೂಡಿಸುವಲ್ಲಿ ವಿಫಲವಾಗಿದೆ.

ಹಾಲು, ಬಿಸ್ಕೆಟ್ ವಿತರಣೆ ವೇಳೆ ಜನರು ಒಬ್ಬರಿಗೊಬ್ಬರು ಅಂತರ ಕಾಯ್ದುಕೊಳ್ಳುವುದನ್ನು ಮರೆತು ಮುಗಿಬಿದ್ದಿದ್ದಾರೆ. ಇದರ ನಡುವೆಯೇ ಆರ್ನಾ ಸೇವಾ ಟ್ರಸ್ಟ್ ಅಧ್ಯಕ್ಷ ಕೇಶವ ರಾಜನ್ ಹಾಲು ವಿತರಿಸಿದ್ದಾರೆ.

ಆರೋಗ್ಯ ಲೆಕ್ಕಿಸದೆ ಮುಗಿಬಿದ್ದ ಜನ..

ಬಡವರ್ಗದ, ಕೂಲಿಕಾರ್ಮಿಕರು ನೂರಾರು ಸಂಖ್ಯೆಯಲ್ಲಿ ಹಾಲು ಪಡೆದುಕೊಳ್ಳಲು ಸೇರಿದ್ದರು. ಈ ವೇಳೆ ಒಂದು ಮೀಟರ್ ಅಂತರವಿಲ್ಲದೆ ಜನ ಗುಂಪು ಗುಂಪಾಗಿ ಸೇರಿದ್ದರು.

ಸಹಾಯ ಮಾಡುವ ಹೆಸರಿನಲ್ಲಿ ಜನರಿಗೆ ಮತ್ತಷ್ಟು ಕೊರೊನಾ ಸೋಂಕು ಹಬ್ಬುವ ಭೀತಿ ಉಂಟಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.