ಬೆಂಗಳೂರು: ಬಿಬಿಎಂಪಿ ಪೌರ ಕಾರ್ಮಿಕರ ಮೇಲೆ ಮಾರ್ಷಲ್ಗಳ ಹಲ್ಲೆ ವಿರೋಧಿಸಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಜೆ.ಸಿ.ರಸ್ತೆಯಲ್ಲಿ ಪೌರ ಕಾರ್ಮಿಕ ರಮೇಶ್ ಮೇಲೆ ಮಾರ್ಷಲ್ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಕಲಾಸಿಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದನ್ನು ತಡೆಯಲು ಬಿಬಿಎಂಪಿ ಮಾರ್ಷಲ್‌ಗಳನ್ನು ನೇಮಕ ಮಾಡಿತ್ತು. ಆದರೆ, ತಮ್ಮ ಜವಾಬ್ದಾರಿ ಮರೆತು ಪೌರಕಾರ್ಮಿಕನ ಮೇಲೆಯೇ ಹಲ್ಲೆ ಮಾಡಿದ್ದಾರೆ. ಹೀಗಾಗಿ ಮಾರ್ಷಲ್‌ಗಳನ್ನು ವಜಾ ಮಾಡಬೇಕು ಎಂದು ಪೌರಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕಾಗಮಿಸಿದ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್, ಮಾರ್ಷಲ್ ಹಲ್ಲೆ ಮಾಡಿರೋದು ಸರಿಯಲ್ಲ ಎಂದ ಅವರು, ಹಲ್ಲೆ ಮಾಡಿರೋ ಮಾರ್ಷಲ್‌ನನ್ನ ಕೆಲದಿಂದ ತೆಗೆದು ಹಾಕೋದಾಗಿ ಭರವಸೆ ನೀಡಿದರು.