ಬೆಂಗಳೂರು : ನಗರದಲ್ಲಿ ಇಂದು ರಸ್ತೆಗಿಳಿದಿರುವ ಸಾರಿಗೆ ಇಲಾಖೆ ಅಧಿಕಾರಿಗಳು, ಸರ್ಕಾರಿ ವಾಹನಗಳ ಮೇಲಿದ್ದ ಚಿಹ್ನೆ, ಲಾಂಛನಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ.
ವಾಹನದ ನಂಬರ್ ಪ್ಲೇಟ್ ಮೇಲೆ ಹೆಸರು ಬರೆದರೆ ಅಥವಾ ಇನ್ಯಾವುದೇ ಚಿತ್ರಗಳಿದ್ದರೆ ಇಲಾಖೆಯಿಂದ ದಂಡ ಬೀಳಲಿದೆ. ಸ್ಟಾರ್ ನಟರ ಹೆಸರು, ಸಂಘ-ಸಂಸ್ಥೆಗಳ ಹೆಸರು ಹಾಕಿಕೊಂಡು ಬಿಟ್ಟಿ ಶೋಕಿ ಮಾಡುವಂತಿಲ್ಲ.
ವಿಧಾನಸೌಧ, ವಿಕಾಸಸೌಧ, ಎಂ.ಎಸ್.ಬಿಲ್ಡಿಂಗ್ ಮುಂಭಾಗ ಸಾರಿಗೆ ಇಲಾಖೆ ಕಾರ್ಯಾಚರಣೆ ನಡೆಸಿದೆ. ಸಾರಿಗೆ ಇಲಾಖೆ ಜಂಟಿ ಆಯುಕ್ತ ಹಾಲಸ್ವಾಮಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಇಂದು ನೂರಾರು ವಾಹನಗಳ ಮೇಲಿದ್ದ ಹೆಸರು, ಚಿಹ್ನೆಗಳನ್ನು ಇಲಾಖೆ ತೆರವುಗೊಳಿಸಿದೆ.