ETV Bharat / state

ಜನವರಿ 1 ರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನ ಗೈಡ್ ಲೈನ್ - ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಕೋವಿಡ್ ಹಿನ್ನೆಲೆ ಕೆಂಪೇಗೌಡ ಅಂಥಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನವರಿ 1 ರಿಂದ ಹೊಸ ಮಾರ್ಗಸೂಚಿ ಜಾರಿ.

new guideline from 1st January
ಜನವರಿ 1 ರಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನ ಗೈಡ್ ಲೈನ್
author img

By

Published : Dec 31, 2022, 6:13 AM IST

ದೇವನಹಳ್ಳಿ: ಕೋವಿಡ್ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮವನ್ನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೆಗೆದುಕೊಳ್ಳಲಾಗಿದ್ದು, ಜನವರಿ 1 ರಿಂದ ಪರಿಷ್ಕೃತ ನೂತನ ಮಾರ್ಗಸೂಚಿ ಏರ್ ಪೋರ್ಟ್​ನಲ್ಲಿ ಜಾರಿಗೆ ಬರಲಿದೆ.

ದೇಶದಲ್ಲಿ ದಿನೇ ದಿನೆ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆ ಭಾರತ ಸರ್ಕಾರದ ಸೂಚನೆಯಂತೆ ಏರ್ ಪೋರ್ಟ್ ನಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ, ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ಇಡಲಾಗಿದೆ, ಮತ್ತುಷ್ಟು ಕಟ್ಟಿನ ಕ್ರಮಕ್ಕೆ ಮುಂದಾಗಿರುವ ಆರೋಗ್ಯ ಇಲಾಖೆ ಜನವರಿ 1 ರಂದು ಬೆಳಗ್ಗೆ 10 ಗಂಟೆ ಯಿಂದ ಜಾರಿಗೆ ಬರುವಂತೆ ಪರಿಷ್ಕೃತ ಮಾರ್ಗಸೂಚಿಯನ್ನ ಪ್ರಕಟಿಸಿದೆ.

ಕೋವಿಡ್ ಉಲ್ಬಣಗೊಂಡಿರುವ ದೇಶಗಳಾದ ಚೀನಾ, ಸಿಂಗಾಪುರ, ಹಾಂಕಾಂಗ್, ರಿಪಬ್ಲಿಕ್ ಆಫ್ ಕೊರಿಯಾ, ಥೈಲ್ಯಾಂಡ್ ಮತ್ತು ಜಪಾನ್ ನಿಂದ ಭಾರತಕ್ಕೆ ಪ್ರಯಾಣಿಕರು ಕಡ್ಡಾಯವಾಗಿ ಆರ್ ಟಿ - ಪಿಸಿಆರ್ ಟೆಸ್ಟ್ ಮಾಡಿಸಿರಬೇಕು, ಏರ್ ಸುವಿಧಾ ಆಪ್ ನಲ್ಲಿ ಆರ್ ಟಿ -ಪಿಸಿಆರ್ ಟೆಸ್ಟ್ ನಲ್ಲಿ ಬಂದ ನೆಗೆಟಿವ್ ಕೋವಿಡ್ -19 ವರದಿಯನ್ನ ಆಪ್ ಲೋಡ್ ಮಾಡಬೇಕಿದೆ, 72 ಗಂಟೆಯೊಳಗಿನ ವರದಿಗೆ ಮಾತ್ರ ಮಾನ್ಯತೆ ನೀಡಲಾಗಿದೆ.

ವಿಮಾನ ನಿಲ್ದಾಣಕ್ಕೆ ಬಂದ ವಿದೇಶಿ ಪ್ರಯಾಣಿಕರನ್ನ ಥರ್ಮಲ್ ಸ್ಕ್ರೀನಿಂಗ್ ಒಳಪಡಿಸಲಾಗುತ್ತದೆ. ವಿದೇಶದಿಂದ ಬಂದ ಶೇಕಡಾ 2 ರಷ್ಟು ಪ್ರಯಾಣಿಕರನ್ನ ರ್ಯಾಂಡಮ್ ಟೆಸ್ಟ್ ಗೆ ಒಳಪಡಿಸಲಾಗುವುದು, ಪ್ರಯಾಣಿಕರ ಗಂಟಲು ದ್ರವ ತೆಗೆದುಕೊಂಡು ಲ್ಯಾಬ್ ವರದಿಗಾಗಿ ಕಳುಹಿಸಲಾಗುವುದು, ರೋಗ ಲಕ್ಷಣ ಇರುವ ಪ್ರಯಾಣಿಕರನ್ನ ತಕ್ಷಣವೇ ಪ್ರತ್ಯೇಕವಾಗಿ ಇಡುವ ವ್ಯವಸ್ಥೆ ಮಾಡಲಾಗಿದೆ. 12 ವರ್ಷದೊಳಗಿನ ಮಕ್ಕಳಿಗೆ ರ್ಯಾಂಡಮ್ ಟೆಸ್ಟ್ ನಲ್ಲಿ ವಿನಾಯಿತಿ ನೀಡಲಾಗಿದೆ, ಒಂದು ವೇಳೆ ರೋಗದ ಲಕ್ಷಣ ಕಂಡು ಬಂದಲ್ಲಿ ಟೆಸ್ಟ್ ಗೆ ಒಳಪಡಿಸಲಾಗುವುದು. ರೋಗ ಲಕ್ಷಣ ಇಲ್ಲದ ಪ್ರಯಾಣಿಕರು ಸ್ವಯಂ ಮುಂಜಾಗ್ರತೆ ವಹಿಸುವಂತೆ ತಿಳಿಸಲಾಗಿದೆ.

ಇದನ್ನೂ ಓದಿ:ಬೂಸ್ಟರ್​ ಡೋಸ್​ ತೆಗೆದುಕೊಳ್ಳುವುದು ಸುರಕ್ಷಿತ: ಸ್ಮಾರ್ಟ್​ವಾಚ್​ ಆಧಾರದಲ್ಲಿ ಇಸ್ರೇಲ್​ ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.