ETV Bharat / state

ಪರಿಷತ್ ಸ್ಥಾನ ತೃಪ್ತಿ ತಂದಿದೆ, ಆದಷ್ಟು ಬೇಗ ಸಚಿವರಾಗುತ್ತೇವೆ: ಎಂಟಿಬಿ, ಆರ್​. ಶಂಕರ್​ ವಿಶ್ವಾಸ

ಸದ್ಯಕ್ಕೆ ವಿಧಾನಪರಿಷತ್ ಸದಸ್ಯರಾಗಿ ಸದನಕ್ಕೆ ಬಂದಿದ್ದೇವೆ, ಅದಕ್ಕೆ ತೃಪ್ತಿಯಾಗಿದ್ದೇವೆ. ಮುಂದಿನ ದಿನದಲ್ಲಿ ನಮ್ಮನ್ನು ಸಚಿವರನ್ನಾಗಿ ಮಾಡಲಿದ್ದಾರೆ ಎಂದು ಸಚಿವ ಸ್ಥಾನದ ಆಕಾಂಕ್ಷಿಗಳಾದ ಎಂಟಿಬಿ ನಾಗರಾಜ್ ಮತ್ತು ಆರ್​ ಶಂಕರ್​ ಹೇಳಿದ್ದಾರೆ.

MTB Nagarj and R Shankar on Cabinet expantion
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಎಂಟಿಬಿ ನಾಗರಾಜ್ ಪ್ರತಿಕ್ರಿಯೆ
author img

By

Published : Sep 27, 2020, 2:41 PM IST

Updated : Sep 27, 2020, 3:11 PM IST

ಬೆಂಗಳೂರು: ಆದಷ್ಟು ಬೇಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಚಿವ ಸಂಪುಟಕ್ಕೆ ಸೇರ್ಪಡೆ ಆಗುವುದಾಗಿ ವಿಧಾನಪರಿಷತ್ ಸದಸ್ಯರಾದ ಎಂಟಿಬಿ ನಾಗರಾಜ್ ಹಾಗು ಆರ್.ಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಎಂಟಿಬಿ ನಾಗರಾಜ್, ಅಧಿವೇಶನಕ್ಕೆ ಸಚಿವರಾಗಿ ಬರುತ್ತೇವೆ ಎಂದು ಹೇಳಿದ್ದು ನಿಜ, ಆದರೆ ಸ್ವಲ್ಪ ವಿಳಂಬವಾಗಿದೆ. ಸದ್ಯಕ್ಕೆ ವಿಧಾನಪರಿಷತ್ ಸದಸ್ಯರಾಗಿ ಬಂದಿದ್ದೇವೆ, ಅದಕ್ಕೆ ತೃಪ್ತಿಯಾಗಿದ್ದೇವೆ. ಮುಂದಿನ ದಿನದಲ್ಲಿ ನಮ್ಮನ್ನು ಸಚಿವರನ್ನಾಗಿ ಮಾಡಲಿದ್ದಾರೆ ಎಂದರು. ಇದಕ್ಕೆ ಆರ್.ಶಂಕರ್ ದನಿಗೂಡಿಸಿದರು.

ವಿಧಾನಪರಿಷತ್​ ಸದಸ್ಯ ಎಂಟಿಬಿ ನಾಗರಾಜ್​

ಇಂದಿನ ಸಭೆಯಲ್ಲಿ ಪರಿಷತ್ ಸದಸ್ಯರ ಜೊತೆ ಸಿಎಂ ಆಡಳಿತ, ಅಭಿವೃದ್ಧಿ, ಸಂಘಟನೆಯ ಬಗ್ಗೆ ಚರ್ಚೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಹಾಗು ಗ್ರಾಮ ಪಂ‌ಚಾಯತ್ ಚುನಾವಣೆಗೆ ಕಾರ್ಯಪ್ರವೃತ್ತರಾಗಬೇಕು. ಕಾರ್ಯಕರ್ತರನ್ನು ಹುರಿದುಂಬಿಸಬೇಕು ಎಂದಿದ್ದಾರೆ. ಅಗತ್ಯ ಸಲಹೆ ಕೊಟ್ಟಿದ್ದಾರೆ. ನಾವು ಕೂಡ ನಮ್ಮ‌ ಸಲಹೆ ಕೊಟ್ಟಿದ್ದೇವೆ. ಅದಕ್ಕೂ ಸಕಾರಾತ್ಮಕ ಸ್ಪಂದನೆ ಮಾಡಿದ್ದಾರೆ ಎಂದರು.

Last Updated : Sep 27, 2020, 3:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.