ETV Bharat / state

ಕೋವಿಡ್-19 ವಿರುದ್ಧ ಹೋರಾಟಕ್ಕೆ 1ಕೋಟಿ ರೂ. ನೆರವು ನೀಡಿದ ಎಂಟಿಬಿ‌ ನಾಗರಾಜ್

author img

By

Published : Apr 4, 2020, 8:26 AM IST

ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು ತಮ್ಮ ಮಗ ನಿತೀನ್ ಪುರುಷೋತ್ತಮ್ ಅವರ ಜೊತೆ ಸಿಎಂ ಯಡಿಯೂರಪ್ಪವರನ್ನು ಭೇಟಿ ಮಾಡಿ 1 ಕೋಟಿ ರೂಪಾಯಿ ಚೆಕ್​ ಅನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ.

mtb
mtb

ಬೆಂಗಳೂರು: ದೇಶದಿಂದ ಕೊರೊನಾ ವೈರಸ್ ಮಹಾಮಾರಿ ಓಡಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೊರೊನಾ ಮುಕ್ತ ಭಾರತಕ್ಕಾಗಿ ವಿವಿಧ ರಂಗದ ಗಣ್ಯರು ಸೇರಿದಂತೆ ಜನಸಾಮಾನ್ಯರೂ ದನಿಗೂಡಿಸಿದ್ದು, ದೇಣಿಗೆಯ ನೆರವಿನ ಹಸ್ತ ಚಾಚಿದ್ದಾರೆ.

ಅದರಂತೆ ರಾಜ್ಯದಲ್ಲೂ ಕೊರೊನಾ ತಡೆಗಟ್ಟಲು ನೆರವಿನ ಮಹಾಪೂರ ಹರಿದುಬರ್ತಿದೆ. ಕೊರೊನಾ ಮಹಾಮಾರಿ ನಿಯಂತ್ರಣಕ್ಕಾಗಿ ಇದೀಗ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು ತಮ್ಮ ಮಗ ನಿತೀನ್ ಪುರುಷೋತ್ತಮ್ ಅವರ ಜೊತೆ ಸಿಎಂ ಯಡಿಯೂರಪ್ಪವರನ್ನು ಭೇಟಿ ಮಾಡಿ 1 ಕೋಟಿ ರೂಪಾಯಿ ಚೆಕ್​ ಅನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಈ ಹಿಂದೆಯೂ ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಾಗ ಎಂಟಿಬಿ ನೆರವು ನೀಡಿದ್ದರು.

ತಮ್ಮ ಮಂತ್ರಿ ಮಂಡಲದ ಸಹೋದ್ಯೋಗಿಗಳು, ಶಾಸಕರು, ಸಂಸದರು ಹಾಗೂ ಅಧಿಕಾರಿಗಳು ಕೂಡ ತಮ್ಮ ಕೈಲಾದ ಸಹಾಯ ಮಾಡುವಂತೆ ಸಿಎಂ ಮನವಿ ಮಾಡಿದ್ದರು. ಅದರಂತೆ ಇಂದು ಮಾಜಿ ಸಚಿವ ತಮ್ಮ ಮಗನೊಂದಿಗೆ ಹೋಗಿ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.