ಬೆಂಗಳೂರು: ಸಾಮಾಜಿಕ ಅಂತರ ಪಾಲಿಸಿ ಅಂತ ಸರ್ಕಾರ ಹೇಳ್ತಿದೆ. ಆದ್ರೆ ರಾಜಧಾನಿಯಲ್ಲೇ ಕೊರೊನಾ ಹಾಗೂ ಸೋಷಿಯಲ್ ಡಿಸ್ಟನ್ಸ್ಗೂ ಡೋಂಟ್ ಕೇರ್ ಅನ್ನುವ ದೃಶ್ಯ ಕಂಡು ಬಂದಿದೆ. ಅದರಲ್ಲೂ ಬಿಎಂಟಿಸಿ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸಿದ್ರಾ ಅನ್ನೋ ಅನುಮಾನ ಕಾಡುತ್ತಿದೆ.
ಸಾರಿಗೆ ಸಚಿವರು, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಪ್ರಯಾಣಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳುತ್ತೇವೆ. ನಮಗೆ ರಾಜ್ಯದಲ್ಲಿ ಬಸ್ ಓಡಿಸಲು ಅವಕಾಶ ಕೊಡಿ. ಪ್ರಯಾಣಿಕರ ಸುರಕ್ಷತೆಗಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು. ಆದರೆ ಇದೀಗ ಎರಡೇ ದಿನಕ್ಕೆ ಎಲ್ಲವೂ ಉಲ್ಟಾ ಪಲ್ಟಾ ಆಗಿದೆ. ಇದೀಗ ಅದನ್ನೆಲ್ಲಾ ಮರೆತ ಬಿಎಂಟಿಸಿ ಅಧಿಕಾರಿಗಳ ಜಾಣ ಕುರುಡುತನದಿಂದ ಒಂದೇ ಬಸ್ನಲ್ಲಿ 70 ಜನರು ಪ್ರಯಾಣಿಸುವ ಮೂಲಕ ಸಾಮಾಜಿಕ ಅಂತರದ ಆದೇಶವನ್ನು ಗಾಳಿಗೆ ತೂರಲಾಗಿದೆ.
ಕುರಿ ತುಂಬಿದಂತೆ 70ಕ್ಕೂ ಹೆಚ್ಚು ಪ್ರಯಾಣಿಕರನ್ನು ತುಂಬಿಕೊಂಡು ಬಿಎಂಟಿಸಿ ಬಸ್ ಸಂಚರಿಸುತ್ತಿದೆ. ಬಸ್ನಲ್ಲಿ ನಿಂತುಕೊಳ್ಳುವುದಕ್ಕೂ ಜಾಗ ಇಲ್ಲ. ಜೊತೆಗೆ ಸಾಮಾಜಿಕ ಅಂತರ ಇಲ್ಲವೇ ಇಲ್ಲ ಎಂದು ಮಹಿಳಾ ಪ್ರಯಾಣಿಕರೊಬ್ಬರು ಬಿಎಂಟಿಸಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ನಾನು ಯಲಹಂಕದಿಂದ ಬಂದಿದ್ದು, ಬಿಎಂಟಿಸಿ ಬಸ್ನಲ್ಲಿ ಬರಲು ಭಯ ಆಗುತ್ತದೆ. ಯಾರಿಗೆ ಕೊರೊನಾ ಬಂದಿದ್ಯೋ ನಮಗೆ ಗೊತ್ತಾಗ್ತಿಲ್ಲ. ಈ ಬಸ್ನಲ್ಲಿ ಸ್ಯಾನಿಟೈಸರ್ ಸೇರಿದಂತೆ ಯಾವುದೂ ಇಲ್ಲ. ನಾವು ಈ ಬಸ್ಗೆ ಬುರುವುದೇ ಕಷ್ಟವಾಗಿದೆ ಎಂದು ಕಿಡಿಕಾರಿದ್ದಾರೆ.