ಬೆಂಗಳೂರು : ನಕಲಿ ಕೀ ಬಳಸಿ ಅಂಗಡಿಗಳ ಬೀಗ ತೆಗೆದು ಮೊಬೈಲ್ ಹಾಗೂ ಹಣ ದೋಚುತ್ತಿದ್ದ ಆರೋಪಿಯನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ಗುರಪ್ಪನ ಪಾಳ್ಯದ ನಿವಾಸಿ ಶಬ್ಬೀರ್ (26) ಬಂಧಿತ ಆರೋಪಿ. ಈತ ನಕಲಿ ಕೀ ಬಳಸಿ ಗಾಂಧಿನಗರದ ಎಸ್.ಎನ್. ಬಜಾರ್ನ ಬೀಗ ತೆಗೆದು 9 ಐಫೋನ್, 5,66 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಖದೀಮನನ್ನು ಸೆರೆಹಿಡಿದ ಪೊಲೀಸರು, ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ನಗರದ ಹಲವೆಡೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ವಿಚಾರ ತಿಳಿದು ಬಂದಿದೆ.
![Mobile Shop theft accused arrested in Bengaluru](https://etvbharatimages.akamaized.net/etvbharat/prod-images/10964035_thum.jpg)
ಓದಿ : ಭಟ್ಕಳ: ಅಮೆರಿಕ ಪೌರತ್ವ ಪಡೆದು ತಲೆಮರೆಸಿಕೊಂಡ ಆರೋಪಿಯ ಬಂಧನ
ಈತನೊಂದಿಗೆ ಕೃತ್ಯಕ್ಕೆ ಸಾಥ್ ನೀಡಿದ್ದ ಸಹಚರರಾದ ಜಯ ಮತ್ತು ಶ್ರೀಕಾಂತ್ ಎಂಬುವರು ತಲೆಮರೆಸಿಕೊಂಡಿದ್ದಾರೆ. ಉಪ್ಪಾರಪೇಟೆ, ಕಲಾಸಿಪಾಳ್ಯ, ಚಾಮರಾಜಪೇಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಐದು ಪ್ರಕರಣಗಳ ಆರೋಪಿಗಳು ಇವರೇ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬಂಧಿತನಿಂದ 18.49 ಲಕ್ಷ ಬೆಲೆ ಬಾಳುವ 201 ಗ್ರಾಂ ತೂಕದ ಚಿನ್ನಾಭರಣ, 8 ಕೆ.ಜಿ ಬೆಳ್ಳಿ ಮತ್ತು ನಗದು ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ವಿಚಾರಣೆ ಮುಂದುವರೆಸಿದ್ದಾರೆ.